Wednesday, August 20, 2025

Latest Posts

20 ಟನ್ ಬಂಗಾರ – ಭಾರತಕ್ಕೆ ಬಂಪರ್!

- Advertisement -

ಗಗನಕ್ಕೇರುತ್ತಿರುವ ಸಂದರ್ಭದಲ್ಲಿಯೇ ಭಾರತಕ್ಕೆ ಗುಡ್‌ನ್ಯೂಸ್ ಸಿಕ್ಕಿದೆ. ಒಡಿಶಾ ರಾಜ್ಯದ ಆರು ಜಿಲ್ಲೆಗಳಲ್ಲಿ ಸುಮಾರು 20 ಮೆಟ್ರಿಕ್ ಟನ್ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂಬ ಸಂಚಲನಕಾರಿ ಮಾಹಿತಿ ಹೊರಬಿದ್ದಿದೆ. ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ (GSI) ಈ ಮಾಹಿತಿಯನ್ನು ತನ್ನ ಇತ್ತೀಚಿನ ವರದಿಯಲ್ಲಿ ಅಧಿಕೃತವಾಗಿ ಪ್ರಕಟಿಸಿದೆ. ಈ ಬೆಳವಣಿಗೆ ಒಡಿಶಾ ಮತ್ತು ಭಾರತದ ಆರ್ಥಿಕತೆಗೆ ಹೊಸ ಚೈತನ್ಯ ತುಂಬಲಿರುವ ನಿರೀಕ್ಷೆಯಿದೆ.

ಭಾರತ ಮಹತ್ವದ ಹಾಗೂ ಆರ್ಥಿಕ ಬೆಳವಣಿಗೆಗೆ ಮುಂದಾಗುತ್ತಿದೆ. ಒಡಿಶಾದಲ್ಲಿ 6 ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಈ ಪತ್ತೆಯಿಂದ ಭಾರತೀಯ ಆರ್ಥಿಕತೆಗೆ ಹೊಸ ಬೆಳಕನ್ನು ನಿರೀಕ್ಷಿಸಲಾಗಿದೆ. ಚಿನ್ನದ ನಿಕ್ಷೇಪಗಳು ದೇವಗಢ, ಸುಂದರಗಢ, ನವರಂಗಪುರ, ಕಿಯೋಂಜರ್, ಅನುಗುಲ್ ಮತ್ತು ಕೊರಾಪುಟ್ ಜಿಲ್ಲೆಗಳಲ್ಲಿ ಪತ್ತೆಯಾಗಿವೆ. ಈ ಪ್ರದೇಶಗಳಲ್ಲಿ ನಿಖರವಾಗಿ ಪರಿಶೀಲನೆ ನಡೆಸಿದ ನಂತರ, ಸುಮಾರು 20 ಮೆಟ್ರಿಕ್ ಟನ್ ಚಿನ್ನವಿರುವ ಸಾಧ್ಯತೆಯನ್ನು ವಿಜ್ಞಾನಿಗಳು ದೃಢಪಡಿಸಿದ್ದಾರೆ.

ದೇವಗಢ ಜಿಲ್ಲೆಯ ಆಡ್ಸ್-ರಾಂಪಲ್ಲಿಯ ಪ್ರದೇಶದಲ್ಲಿ ಈಗಾಗಲೇ ಉತ್ಖನನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಡಿಶಾ ಮೈನಿಂಗ್ ಕಾರ್ಪೋರೇಷನ್ (OMC) ಮತ್ತು GSI ಜಂಟಿಯಾಗಿ ಚಿನ್ನದ ಬ್ಲಾಕ್‌ಗಳನ್ನು ಹರಾಜಿಗೆ ನೀಡಲು ಸಿದ್ಧತೆ ಮಾಡಿವೆ. ಇದು ರಾಜ್ಯದಲ್ಲಿ ಹರಾಜಾಗಲಿರುವ ಮೊದಲ ಚಿನ್ನದ ಬ್ಲಾಕ್ ಆಗಿದೆ. ಈ ಪ್ರದೇಶವು ಚಿನ್ನದ ಜೊತೆಗೆ ತಾಮ್ರ, ನಿಕಲ್, ಬೆಳ್ಳಿ ಮತ್ತು ಗ್ರ್ಯಾಫೈಟ್‌ನಂತಹ ಅಮೂಲ್ಯ ಖನಿಜಗಳಿಂದ ಕೂಡಿದ್ದು, ಬಹುಮೂಲ್ಯ ಸಂಪತ್ತನ್ನು ಹೊಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಒಡಿಶಾದ ಗಣಿ ಸಚಿವ ವಿಭೂತಿ ಭೂಷಣ್ ಜೆನಾ ಅವರು, ಈ ಚಿನ್ನದ ನಿಕ್ಷೇಪಗಳು ರಾಜ್ಯದ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ. ಗಣಿಗಾರಿಕೆ ಕಾರ್ಯಗಳಿಂದ ನೂರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಈ ಹರಾಜು ಮತ್ತು ವ್ಯಾಪಾರ ಚಟುವಟಿಕೆಗಳಿಂದ ರಾಜ್ಯದ ಬೊಕ್ಕಸಕ್ಕೆ ಅಪಾರ ಆದಾಯ ಹರಿದುಬರಲಿದೆ ಎಂದು ಹೇಳಿದ್ದಾರೆ.

ಭಾರತವು ಚಿನ್ನದ ಬೃಹತ್ ಗ್ರಾಹಕ ದೇಶವಾಗಿದ್ದು, ಪ್ರತಿ ವರ್ಷ ಸಾವಿರಾರು ಟನ್ ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದೆ. ಇಂತಹ ನೈಸರ್ಗಿಕ ನಿಕ್ಷೇಪಗಳ ಪತ್ತೆ ದೇಶದ ಆಮದು ಅವಲಂಬನೆಯನ್ನು ಕಡಿಮೆ ಮಾಡಿ, ಆರ್ಥಿಕ ಸ್ವಾವಲಂಬನೆಗೆ ಮಾರ್ಗಚುಂಬಿಸುತ್ತದೆ ಎಂಬ ನಂಬಿಕೆ ವ್ಯಕ್ತವಾಗುತ್ತಿದೆ.

ಒಡಿಶಾದ ಆರು ಜಿಲ್ಲೆಗಳಲ್ಲಿ ಪತ್ತೆಯಾದ ಚಿನ್ನದ ನಿಕ್ಷೇಪಗಳು ರಾಜ್ಯ ಮತ್ತು ರಾಷ್ಟ್ರದ ಆರ್ಥಿಕ ಸ್ಥಿತಿಗತಿಯ ಮೇಲೆ ಸಾಕಷ್ಟು ಪ್ರಭಾವ ಬೀರುವ ಸಾಧ್ಯತೆ ಇದೆ. ಈ ಹೆಜ್ಜೆ ಕೈಗೆತ್ತಿಕೊಂಡು, ಭಾರತ ತನ್ನ ಸ್ವಂತ ಚಿನ್ನ ಉತ್ಪಾದನೆ ಯತ್ತ ಮುಂದಾಗುತ್ತಿದೆ ಎಂಬುದು ಈ ಬೆಳವಣಿಗೆಯ ಮಹತ್ವವನ್ನು ಸ್ಪಷ್ಟಪಡಿಸುತ್ತದೆ.

- Advertisement -

Latest Posts

Don't Miss