Friday, June 20, 2025

Latest Posts

ಅತ್ಯಾಚಾರಿಗೆ 20 ವರ್ಷ ಕಠಿಣ ಸಜೆ..!!

- Advertisement -

www.karnatakatv.net :ಚಾಮರಾಜನಗರ: ಪ್ರೀತಿಮಾಡೋ ನಾಟಕವಾಡಿ ಬಾಲಕಿಯ  ಅತ್ಯಾಚಾರವೆಸಗಿದ್ದ ಯುವಕನಿಗೆ ಚಾಮರಾಜನಗರ ಜಿಲ್ಲಾ ಪ್ರಧಾನ ನ್ಯಾಯಾಲಯವು 20 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಚಾಮರಾಜನಗರದ ಮೇಗಲ ಉಪ್ಪಾರ ಬೀದಿಯ ಚಂದ್ರಶೇಖರ್ (21) ಶಿಕ್ಷೆಗೊಳಗಾದ ವ್ಯಕ್ತಿ. ಈತ 2018ರಲ್ಲಿ 16 ವರ್ಷದ ಶಾಲಾ ಬಾಲಕಿಯನ್ನು ಪುಸಲಾಯಿಸಿ ಅಪಹರಣಗೊಳಿಸಿದ್ದ. ಅಲ್ಲದೆ 5 ದಿನಗಳ ಕಾಲ ಬಾಲಕಿ ಮೇಲೆ ಅತ್ಯಾಚಾರ ಮಾಡಿ ದ್ದು ಸಾಭೀತಾದ ಹಿನ್ನಲೆಯಲ್ಲಿ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ.

ನ್ಯಾಯಾಧೀಶರಾದ ಸದಾಶಿವ ಎಸ್.ಸುಲ್ತಾನಪುರಿ ಅಪರಾಧಿಗೆ 20 ವರ್ಷ ಕಠಿಣ ಸಜೆ, 6.25 ಲಕ್ಷ ರೂ. ದಂಡ ಹಾಗೂ ಅಪರಾಧಿಗೆ ಸಹಕರಿಸಿದ ಮಹದೇವಮ್ಮ ಎಂಬಾಕೆಗೆ  5 ವರ್ಷ ಶಿಕ್ಷೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿದ್ದಾರೆ. ಜೊತೆಗೆ, ಕಾನೂನು ಸೇವಾ ಪ್ರಾಧಿಕಾರವು ಸಂತ್ರಸ್ತ ಬಾಲಕಿಗೆ  7.5 ಲಕ್ಷ ರೂ. ಪರಿಹಾರ ಕೊಡಬೇಕೆಂದು ಆದೇಶಿಸಿದೆ.

ಪ್ರಸಾದ್, ಕರ್ನಾಟಕ ಟಿವಿ- ಚಾಮರಾಜನಗರ

- Advertisement -

Latest Posts

Don't Miss