ಬರೊಬ್ಬರಿ 200 ವಿಮಾನಗಳ ಹಾರಾಟ ರದ್ದಾಗಿದೆ. ಮುಚ್ಕೊಂಡ್ ಮನೆಗೆ ಹೋಗಿ..ಅಂತಾ ಇನಡೈರೆಕ್ಟ್ ಆಗಿ ಹೇಳಿದ್ದಾಂಗಯ್ತು. crew shortageಗೆ ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏರ್ಪೋರ್ಟ್ ಅಲ್ಲೆ ಕಿರುಚಾಡಿ ಕೂಗಾಡಿದ್ದಾರೆ. ಇದು ಒಂದು ಇವತ್ತು ಒಂದು ದಿನದ ಕತೇಯಲ್ಲ, ನೆನನೆ ನನೂ ಇದೇ ಪರಿಸ್ಥಿತಿ ಆಗಿತ್ತು.
ಈ ಹಿಂದೆ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದೊಳಗೆ ಭಯೋತ್ಪಾದಕ ಶಿಬಿರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ನಂತರ, ಉತ್ತರ ಭಾರತದ ವಾಯುಪ್ರದೇಶದ ನಿರ್ಬಂಧಗಳಿಂದಾಗಿ 200ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿತ್ತು. ಈ ಸಮಯದಲ್ಲಿ ಸುಮಾರು 18 ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು.
ಆದರೆ ಈಗ ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ನಡೆದ ದಿಢೀರ್ ಅವ್ಯವಸ್ಥೆಯಿಂದ ದೇಶಾದ್ಯಂತ ಸುಮಾರು 200 ವಿಮಾನಗಳು ರದ್ದಾಗಿದ್ದು, ಸಾವಿರಾರು ಪ್ರಯಾಣಿಕರು ತತ್ತರಿಸುವ ಪರಿಸ್ಥಿತಿ ಎದುರಾಗಿದೆ. ಸಿಬ್ಬಂದಿ ಕೊರತೆ, ತಾಂತ್ರಿಕ ಸಮಸ್ಯೆಗಳು ಮತ್ತು ಹೊಸ ಎಫ್‌ಡಿಟಿಎಲ್ ನಿಯಮಗಳ ಪರಿಣಾಮವಾಗಿ ಈ ದೊಡ್ಡ ಮಟ್ಟದ ವ್ಯತ್ಯಯ ಉಂಟಾಗಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತ್ರ 42 ವಿಮಾನಗಳು ರದ್ದಾಗಿದ್ದು, 22 ಆಗಮನ ಮತ್ತು 20 ನಿರ್ಗಮನ ವಿಮಾನಗಳಿಗೆ ಪರಿಣಾಮ ಬಿದ್ದಿದೆ. ದೆಹಲಿಯಲ್ಲಿ 67, ಮುಂಬೈನಲ್ಲಿ 51 ಮತ್ತು ಹೈದರಾಬಾದ್‌ನಲ್ಲಿ 19 ವಿಮಾನಗಳು ರದ್ದಾಗಿದ್ದು, ಪ್ರಮುಖ ನಗರಗಳಿಗೆ ಹೋಗುವ ವಿಮಾನಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿವೆ.
ಇತ್ತೀಚೆಗೆ ದೆಹಲಿ ಮತ್ತು ಮುಂಬೈನಲ್ಲಿ ಎಮಿರೇಟ್ಸ್ ಕಂಪನಿ ನಡೆಸಿದ ದೊಡ್ಡ ಮಟ್ಟದ ನೇಮಕಾತಿ ಪ್ರಕ್ರಿಯೆಗೆ ಇಂಡಿಗೋ ಪೈಲಟ್‌ಗಳು ಹಾಗೂ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಹೋಗಿರುವುದರಿಂದ ಸಿಬ್ಬಂದಿ ಕೊರತೆ ಗಂಭೀರವಾಗಿ ತಲೆದೋರಿದೆ. ಅದರ ಜೊತೆಗೆ ಹೊಸ ಎಫ್‌ಡಿಟಿಎಲ್ ನಿಯಮ ಪ್ರಕಾರ ಪೈಲಟ್‌ಗಳ ವಾರದ ವಿಶ್ರಾಂತಿ 36 ಗಂಟೆಯಿಂದ 48 ಗಂಟೆಗೆ ಹೆಚ್ಚಿಸುವುದು, ರಾತ್ರಿ ಲ್ಯಾಂಡಿಂಗ್ ಅನ್ನು ಎರಡುಕ್ಕೆ ಸೀಮಿತಗೊಳಿಸುವುದು—ಇವೆಲ್ಲವೂ ವಿಮಾನಗಳ ಹಾರಾಟ ವೇಳಾಪಟ್ಟಿಗೆ ದೊಡ್ಡ ಹೊಡೆತ ನೀಡಿವೆ. ಚಳಿಗಾಲದ ಸಮಯದಲ್ಲಿ ವೇಳಾಪಟ್ಟಿ ಬದಲಾವಣೆ ಹಾಗೂ ಹವಾಮಾನ ಸಮಸ್ಯೆಗಳೂ ಈ ಗೊಂದಲಕ್ಕೆ ಕಾರಣವಾಗಿವೆ.
ಕಳೆದ ಎರಡು ದಿನಗಳಿಂದ ಇಂಡಿಗೋ ಮ್ಯಾನೆಜ್‌ಮೆಂಟ್ ತಪ್ಪು ನಿರ್ವಹಣೆ ಮಾಡಿದದ್ದೂ ಪರಿಸ್ಥಿತಿಯನ್ನು ಮತ್ತಷ್ಟು ಕಠಿಣಗೊಳಿಸಿದೆ ಎಂದು ವಿಮಾನಯಾನ ಮೂಲಗಳು ಹೇಳಿವೆ. ನಿನ್ನೆ ಕೂಡ ಬೆಂಗಳೂರಿನಲ್ಲಿ 20 ವಿಮಾನಗಳು ರದ್ದಾಗಿದ್ದವು. ಈ ಗೊಂದಲ ಹೆಚ್ಚಾಗುತ್ತಿದ್ದಂತೆ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಪರಿಸ್ಥಿತಿಯನ್ನು ಒಪ್ಪಿಕೊಂಡಿರುವ ಇಂಡಿಗೋ, ನಿರೀಕ್ಷೆಗಿಂತ ಹೆಚ್ಚು ಕಾರ್ಯಾಚರಣಾ ಸಮಸ್ಯೆ ಎದುರಾಗಿದೆ. ಮುಂದಿನ 48 ಗಂಟೆಗಳವರೆಗೆ ತಾತ್ಕಾಲಿಕ ವೇಳಾಪಟ್ಟಿ ಬದಲಾವಣೆ ಮುಂದುವರಿಯಲಿದೆ. ಪ್ರಯಾಣಿಕರಿಗೆ ಆಗಿರುವ ತೊಂದರೆಗೆ ಕ್ಷಮೆ ಕೇಳುತ್ತೇವೆ ಎಂದು ಪ್ರಕಟಣೆ ನೀಡಿದೆ. ಏನೇ ಕ್ಷಮೆ ಕೇಳಿದ್ರೂ ಪಾಪ ಸಾಕಷ್ಟು ದುಡ್ಡು ಕೊಟ್ಟು ಏನೇನೋ ಪ್ಲ್ಯಾನ್ ಮಾಡಿಕೊಂಡಿದವರ ಪರಿಸ್ಥಿತಿ ಮಾತ್ರ ಅದೋಗತಿ ಆಗಿದಂತೂ ಸತ್ಯ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




