Wednesday, September 18, 2024

Latest Posts

ಬೆಂಗಳೂರಿಂದ ತುಮಕೂರಿಗೆ ಹೋಗಲು 1 ಲೀಟರ್ ಪೆಟ್ರೋಲ್ ಸಾಕು!

- Advertisement -

ಹೊಸ ಸ್ಕೂಟರ್ ಖರೀದಿಸ್ಬೇಕು ಅನ್ನೋ ಆಸೆಯಲ್ಲಿದ್ದೀರಾ.. ಯಾವ ಕಂಪನಿಯ ಸ್ಕೂಟರ್ ತಗೊಳೋದಪ್ಪಾ ಅನ್ನೋ ಟೆನ್ಷನ್​​​​ ಆಗ್ತಿದ್ಯಾ? ಇವತ್ತು ಟಿವಿಎಸ್​ ಕಂಪನಿ ತನ್ನ ಹೊಸ ಸ್ಕೂಟರ್ ಲಾಂಚ್ ಮಾಡಿದೆ ನೋಡಿ.. ತೀರಾ ಕಡಿಮೆ ರೇಟ್​​​​ಗೆ ಈ ಸ್ಕೂಟರ್ ಸಿಗ್ತಿದೆ..

ಭಾರತದ ಜನಪ್ರತಿಯ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಟಿವಿಎಸ್.. ಹೊಸ ಲುಕ್​​​ನಲ್ಲಿ ಇದೀಗ 110 ಸಿಸಿ ಸಾಮರ್ಥ್ಯದ ಜುಪಿಟರ್ ಸ್ಕೂಟರ್ ಅನ್ನ ಲಾಂಚ್ ಮಾಡಿದೆ. ಮಧ್ಯಮ ವರ್ಗದ ಜನರಿಗೆ ಅನುಕೂಲವಾಗೋ ನಿಟ್ಟಿನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಈ ಸ್ಕೂಟರ್​ ಸಿಗ್ತಿದೆ.. ಜುಪಿಟರ್ 110 ಸ್ಕೂಟರ್ ಎಕ್ಸ್​ ಶೋರೂ ಬೆಲೆ 73 ಸಾವಿರದ 700 ರೂಪಾಯಿ ಇದೆ. ಹಳೇ ಜುಪಿಟರ್​​ಗೆ ಹೋಲಿಸಿದ್ರೆ ಸುಮಾರು 4 ಸಾವಿರದಷ್ಟು ಕಡಿಮೆ ಆಗುತ್ತೆ.

ಹೊಸ ಜುಪಿಟರ್​​​​​ನಲ್ಲಿ 113 ಸಿಸಿ ಸಾಮರ್ಥ್ಯದ ಸಿಂಗಲ್ ಸಿಲಿಂಡರ್ ಏರ್​ ಕೂಲ್ಡ್ ಪೆಟ್ರೋಲ್ ಇಂಜಿನ್ ಇದೆ. ಇದರ ಮ್ಯಾಕ್ಸಿಮಮ್ ಪವರ್ 7.91 ಹೆಚ್​ಪಿ. ಹಾಗೇ 9.8 ಪೀಕ್ ಟಾರ್ಕ್ ಇರುತ್ತೆ.. ಗಂಟೆಗೆ 82 ಕಿಲೋಮೀಟರ್ ಮ್ಯಾಕ್ಸಿಮಮ್ ಸ್ಪೀಡ್ ಇರುತ್ತೆ.

ಜುಪಿಟರ್ 110ನಲ್ಲಿ ಹಲವು ಫೀಚರ್​ಗಳು ಕೂಡ ಇದೆ. ಇಂಟಲಿಜೆಂಟ್ ಸ್ಟಾರ್ಟ್-ಸ್ಟಾಪ್, ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್, ಹೊಸದಾಗಿರೋ ಡಿಜಿಟಲ್ ಇನ್ಸ್​​ಟ್ರುಮೆಂಟಲ್ ಕ್ಲಸ್ಟರ್‌ ಅನ್ನು ಹೊಂದಿದೆ. ಡಿಸ್​​ಪ್ಲೇ ಮೇಲೆ ಕಾಲ್ ನೋಟಿಫಿಕೇಷನ್, ಟೆಕ್ಸ್ಟ್ ನೋಟಿಫಿಕೇಶನ್ ಬರುತ್ತೆ, ಫ್ಯುಯೆಲ್ ಎಕಾನಮಿ, ನ್ಯಾವಿಗೇಷನ್ ಅನ್ನೂ ತೋರಿಸುತ್ತೆ. ಈ ಸ್ಕೂಟರ್​​ನಲ್ಲಿ ಯುಎಸ್‌‍ಬಿ ಚಾರ್ಜರ್, 2-ಲೀಟರ್ ಗ್ಲೋವ್ ಬಾಕ್ಸ್, 33-ಲೀಟರ್ ಸಾಮರ್ಥ್ಯದ ಅಂಡರ್-ಸೀಟ್ ಸ್ಟೋರೇಜ್ ಇದೆ. 6 ಬಣ್ಣಗಳಲ್ಲಿ ಟಿವಿಎಸ್ ಜುಪಿಟರ್ ಸಿಗುತ್ತೆ.. ಈ ಸ್ಕೂಟರ್​ ಕೊಡೋ ಮೈಲೇಜ್ 1 ಲೀಟರ್ ಪೆಟ್ರೋಲ್​​ಗೆ ಬರೋಬ್ಬರಿ 62 ಕಿಲೋಮೀಟರ್.. ಇಷ್ಟೆಲ್ಲಾ ಫೀಚರ್​​​​ಗಳಿರೋ ಹೊಸ ಸ್ಕೂಟರ್ ಖರೀದಿಸೋ ಆಸೆ ಇದ್ರೆ ಒಂದ್ ಸರಿ ಶೋರೂಂಗೆ ಹೋಗಿ ನೋಡ್ಕೊಂಡ್ ಬನ್ನಿ….

- Advertisement -

Latest Posts

Don't Miss