Friday, July 11, 2025

Latest Posts

ಕೇಂದ್ರ ಸರ್ಕಾರದಿಂದ 23,000 ಕೋಟಿ ಪರಿಹಾರ : ನರೇಂದ್ರ ಮೋದಿ

- Advertisement -

www.karnatakatv.net : ದೆಹಲಿ: ಕೊರೊನಾ ಮಹಾಮಾರಿ ಇಂದ ಭಾರತ ತತ್ತರಿಸಿ ಹೋಗಿದೆ ಇದರಿಂದ ಕೇಂದ್ರ ಸರ್ಕಾರ 23,000 ಕೋಟಿ ರೂ. ತುರ್ತು ಪರಿಹಾರ ಘೋಷಣೆ ಮಾಡಿದೆ ಆರೋಗ್ಯ ಸೌಕರ್ಯವನ್ನು ಬಲಪರಿಸಲು ಯಾವುದೇ ರಾಜ್ಯ ವಾಗಲಿ ಈ ಪ್ಯಾಕೆಜ್ ಅನ್ನು ಬಳಸಿಕೊಳ್ಳಬಹುದು ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಮಹಾರಾಷ್ಟ್ರ ಮತ್ತು ಕೇರಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಮೋದಿಯವರು ಈ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಗ್ರಾಮೀಣ ಪ್ರದೇಶಗಳತ್ತ ಗಮನ ಹರಿಸುವ ಅವಶ್ಯಕತೆಯಿದೆ ಎಂದು ಮೋದಿಯವರು ಹೇಳಿದ್ದಾರೆ. ಈಗಾಗಲೇ ಕೊರೋನಾ 3ನೇ ಅಲೆಯ ನಿಯಂತ್ರಣದ ಬಗ್ಗೆ ಮಾತುಕತೆ ನಡೆಸುತ್ತಿದ್ದೇವೆ. ಕಳೆದ ಕೆಲ ದಿನಗಳಿಂದ ಈ ಆರು ರಾಜ್ಯಗಳಲ್ಲಿ ಶೇ.80ರಷ್ಟು ಹೊಸ ಪ್ರಕರಣಗಳು ಕಂಡುಬರುತ್ತಿವೆ. ಇದರ ಹಿನ್ನೆಲೆಯಲ್ಲಿ ಮೂರನೇ ಅಲೆ ತಡೆಯಲು ರಾಜ್ಯಗಳು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಹಾಗೆ ‘ಟೆಸ್ಟ್-ಟ್ರ್ಯಾಕ್-ಟ್ರೀಟ್- ವ್ಯಾಕ್ಸಿನೇಟ್’ ಎಂಬ 4 ಪ್ರಮುಖ ಗುರಿ ಹಾಗೂ ಅಂಶಗಳನ್ನು ಇಟ್ಟುಕೊಂಡು ನಾವು ಮುಂದುವರೆಯಬೇಕಿದೆ ಎಂದು ಮೋದಿಯವರು ತಿಳಿಸಿದ್ದಾರೆ

- Advertisement -

Latest Posts

Don't Miss