ಒಂದಲ್ಲ, ಎರಡಲ್ಲ ಬರೋಬ್ಬರಿ 24 ಹೋಂಡಾ ಆಕ್ವೀವಾ ಬೈಕ್ ಗಳನ್ನು ಮಾಸ್ಟರ್ ಕೀ ಬಳಸಿ ಕದ್ದಿದ್ದ ಖದೀಮ ಅಂದರ್ ಆಗಿದ್ದಾನೆ. ಚಾಮರಾಜನಗರ ಜಿಲ್ಲೆ ಗಾಳಿಪುರ ನಿವಾಸಿ ಅಜ್ಮತ್ ಉಲ್ಲಾ ಬಂಧಿತ ಆರೋಪಿಗಾಗಿದ್ದು, ಈತ ಮೈಸೂರು ನಗರ ವ್ಯಾಪ್ತಿಯಲ್ಲೇ 13 ಲಕ್ಷ ಮೌಲ್ಯದ 24 ದ್ವಿಚಕ್ರ ವಾಹನಗಳನ್ನು ಕದ್ದಿದ್ದ. ಕಳೆದ 7 ತಿಂಗಳಲ್ಲಿ 24 ದಿಚಕ್ರ ವಾಹನಗಳನ್ನು ಕದ್ದಿದ್ದ ಅಜ್ಮತ್ ಉಲ್ಲಾ. ಕದ್ದ ಬೈಕ್ ಗಳನ್ನು ಸೀಜ್ ಮಾಡಿರುವ ವಾಹನ ಎಂದು ಹೇಳಿ ಆರೇಳು ಸಾವಿರಕ್ಕೆ ಮಾರಾಟ ಮಾಡಿದ್ದ. ಸದ್ಯ ದೇವರಾಜ ಠಾಣೆ ಪೊಲೀಸರು ಆರೋಪಿ ಅಜ್ಮತ್ ಉಲ್ಲಾನನ್ನು ಬಂಧಿಸಿದ್ದಾರೆ.
ಇಷ್ಟೆ ಅಲ್ಲದೆ ಮೈಸೂರನಲ್ಲಿ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ, ಮತ್ತಷ್ಟು ಬೇರೆ ಬೇರೆ 42 ಸ್ವತ್ತು ಕಳುವು ಪ್ರಕರಣಗಳು ಪತ್ತೆ ಮಾಡಿದ್ದಾರೆ. ಒಟ್ಟು 63 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 11 ಎನ್ಡಿಪಿಎಸ್ ಪ್ರಕರಣಗಳಲ್ಲಿ 65 ಕೆ ಜಿ 800 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. 23 ಗ್ರಾಂ ಎಂಡಿಎಂಎ ಮಾದಕ ಪದಾರ್ಥಗಳು ವಶಪಡಿಸಿಕೊಳ್ಳಲಾಗಿದೆ.
ಕಳೆದ 2 ತಿಂಗಳಲ್ಲಿ 8 ಸರಗಳ್ಳತನ, 2 ಮನೆ ಕಳ್ಳತನ, 1 ಮನೆ ಕೆಲಸದವರಿಂದ ಕಳ್ಳತನ, 28 ವಾಹನ ಕಳ್ಳತನ, 3 ಸಾಮಾನ್ಯ ಕಳ್ಳತನ ಸೇರಿದಂತೆ ಒಟ್ಟು 42 ಸ್ವತ್ತು ಕಳುವು ಪ್ರಕರಣಗಳ ದಸ್ತಗಿರಿ ಮಾಡಲಾಗಿದೆ. 659 ಗ್ರಾಂ ಚಿನ್ನಾಭರಣ, 1 ಕೆ ಜಿ ಬೆಳ್ಳಿ ಪದಾರ್ಥ, 27 ದ್ವಿಚಕ್ರ ವಾಹನಗಳು, 1 ಕಾರು, 2,57,000 ನಗದು ಹಣ, 1 ಲ್ಯಾಪ್ ಟಾಪ್ ಸೇರಿದಂತೆ ಒಟ್ಟು 63 ಲಕ್ಷ ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪತ್ತೆಯಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 19 ಆರೋಪಿಗಳನ್ನು ದಸ್ತಗಿರಿ ಮಾಡಿರುವ ಕುರಿತು ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾಲಾಟ್ಕರ್ ಮಾಹಿತಿ ನೀಡಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ