www.karnatakatv.net : ಗ್ರೆನೇಡ್ ಸ್ಫೋಟಗೊಂಡು ಈಕ್ವೆಡಾರ್ ನ ಗಯಾಕ್ವಿಲ್ ನ ಜೈಲಿನಲಿದ್ದ 24 ಕೈದಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಜೈಲಿನಲ್ಲಿ 48 ಮಂದಿ ಕೈದಿಗಳು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ಕಾರಾಗೃಹ ಬ್ಯುರೊ ಪ್ರಕಟನೆಯನ್ನು ಟ್ವೀಟ್ ಮಾಡಿರುವ ಈಕ್ವೆಡಾರ್ ಅಧ್ಯಕ್ಷ ಗಿಲ್ಲೆರ್ವೊ ಲಾಸೊ, ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೃತಪಟ್ಟ ಕೈದಿಗಳು ಮಾದಕ ವಸ್ತು ಸಾಗಾಟಕ್ಕೆ ಸಂಬಂಧಿಸಿದ ಆರೋಪಿಗಳಾಗಿದ್ದರು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವಾರ ಗಯಾಕ್ವಿಲ್‌ನ ಕಾರಾಗೃಹವೊಂದರಲ್ಲಿ ಆರೋಪಿಗಳ ಬಳಿ ಇದ್ದ ಎರಡು ಬದೂಕುಗಳು, ಒಂದು ರಿವಾಲ್ವರ್, 500ಕ್ಕೂ ಹೆಚ್ಚು ಮದ್ದುಗುಂಡುಗಳು, ಗ್ರೆನೇಡ್ ಸೇರಿದಂತೆ ಮನೆಯಲ್ಲಿ ತಯಾರಿಸಿದ ಸ್ಫೋಟಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಕೈದಿಗಳು ಪರಾರಿಯಾಗಲು ಸ್ಫೋಟ ನಡೆಸಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.