Saturday, November 8, 2025

Latest Posts

ರಾಜಕೀಯ ಪಯಣದಲ್ಲಿ 25 ವರ್ಷ – ತಾಯಿಯ ಆ ಎರಡು ಮಾತು ನೆನೆದ ಮೋದಿ!

- Advertisement -

ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಸರ್ಕಾರದ ಮುಖ್ಯಸ್ಥರಾಗಿ 25ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 2001ರ ಇದೇ ದಿನದಂದು ಗುಜರಾತ್‌ನ ಸಿಎಂ ಆಗಿ ಪ್ರಮಾಣವಚನ ತೆಗೆದುಕೊಂಡಿದ್ದ ಪ್ರಧಾನಿ ಮೋದಿ, ಅಲ್ಲಿಂದ ಇಲ್ಲಿಯವರೆಗೂ ಸತತ 24 ವರ್ಷಗಳ ಸರ್ಕಾರದ ಮುಖಸ್ಥರಾಗಿ ಕೆಲಸ ಮಾಡಿದ ಅವರು ಮಂಗಳವಾರ ಟ್ವೀಟ್‌ ಮೂಲಕ ಈ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ತಮ್ಮ 24 ವರ್ಷಗಳ ಅವಧಿಯಲ್ಲಿ ತಾವು ಎದುರಿಸಿದ ಸವಾಲು, ಅಮ್ಮ ಹೇಳಿದ್ದ ಮಾತಿನಂತೆ ನಡೆದಿದ್ದು ಎಲ್ಲವನ್ನೂ ಅವರು ನೆನಪಿಸಿಕೊಂಡಿದ್ದಾರೆ.

2001 ರ ಈ ದಿನದಂದು, ನಾನು ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದೆ. ನನ್ನ ದೇಶವಾಸಿಗಳ ನಿರಂತರ ಆಶೀರ್ವಾದದೊಂದಿಗೆ, ನಾನು ಸರ್ಕಾರದ ಮುಖ್ಯಸ್ಥನಾಗಿ ನನ್ನ ಅಧಿಕಾರಾವಧಿಯ 25 ನೇ ವರ್ಷವನ್ನು ಪ್ರವೇಶಿಸುತ್ತಿದ್ದೇನೆ. ಅತ್ಯಂತ ಪರೀಕ್ಷಾತ್ಮಕ ಸನ್ನಿವೇಶದಲ್ಲಿ ನನ್ನ ಪಕ್ಷ ಗುಜರಾತ್ ಮುಖ್ಯಮಂತ್ರಿಯಾಗುವ ಜವಾಬ್ದಾರಿಯನ್ನು ನನಗೆ ವಯಸಿದ್ದು. ಅದೇ ವರ್ಷ ರಾಜ್ಯ ಭಾರಿ ಭೂಕಂಪದಿಂದ ಬಳಲುತ್ತಿತ್ತು. ಹಿಂದಿನ ವರ್ಷ ಸೂಪರ್ ಸೈಕ್ಲೋನ್, ಸತತ ಬರಗಾಲ ಮತ್ತು ರಾಜಕೀಯ ಅಸ್ಥಿರತೆಯನ್ನು ಕಂಡಿವೆ. ಆ ಸವಾಲುಗಳು ಜನರಿಗೆ ಸೇವೆ ಸಲ್ಲಿಸುವ ಹೊಸ ಭರವಸೆಯೊಂದಿಗೆ ಗುಜರಾತ್ ಅನ್ನು ಪುನರ್ನಿರ್ಮಿಸುವ ಸಂಕಲ್ಪವನ್ನ ಬಲಪಡಿಸಿವೆ.

ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ, ನನ್ನ ತಾಯಿ ನನಗೆ ಹೇಳಿದ್ದು ಇಗಲೂ ನೆನಪಿದೆ. ನಿನ್ನ ಕೆಲಸದ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಆದರೆ ನೀನು ಯಾವಾಗಲೂ ಕಟ್ಟುನಿಟ್ಟಾಗಿ ಅನುಸರಿಸಬೇಕಾದ ಎರಡು ವಿಷಯಗಳನ್ನ ನಾನು ನಿನಗೆ ಹೇಳುತ್ತೇನೆ. ಮೊದಲನೆಯದಾಗಿ, ನೀನು ಯಾವಾಗಲೂ ಬಡವರಿಗಾಗಿ ಕೆಲಸ ಮಾಡಬೇಕು ಮತ್ತು ಎರಡನೆಯದಾಗಿ ನೀನು ಎಂದಿಗೂ ಲಂಚ ತೆಗೆದುಕೊಳ್ಳಬಾರದು ಎಂದಿದ್ದರು.

ಭಾರತದ ಜನರ ನಿರಂತರ ನಂಬಿಕೆ ಹಾಗು ಪ್ರೀತಿಗಾಗಿ ನಾನು ಮತ್ತೊಮ್ಮೆ ಅವರಿಗೆ ಧನ್ಯವಾದ ಹೇಳುತ್ತೇನೆ. ನಮ್ಮ ಪ್ರೀತಿಯ ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದು ಅತ್ಯಂತ ದೊಡ್ಡ ಗೌರವ. ಮತ್ತು ಅದು ಕರ್ತವ್ಯ ಕೂಡ ಹೌದು. ನಮ್ಮ ಸಂವಿಧಾನದ ಮೌಲ್ಯಗಳನ್ನು ನನ್ನ ನಿರಂತರ ಮಾರ್ಗದರ್ಶಿಯಾಗಿ ಇಟ್ಟುಕೊಂಡು, ವಿಕಸಿತ ಭಾರತದ ನಮ್ಮ ಸಾಮೂಹಿಕ ಕನಸನ್ನು ನನಸಾಗಿಸಲು ಮುಂದಿನ ದಿನಗಳಲ್ಲಿ ನಾನು ಇನ್ನಷ್ಟು ಶ್ರಮಿಸುತ್ತೇನೆ ಅಂತ ಮೋದಿ ಹೇಳಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss