- Advertisement -
www.karnatakatv.net : ನವದೆಹಲಿ : ಅಖಿಲ ಭಾರತೀಯ ಕೋಟಾದಡಿ ನೀಟ್ ಪ್ರವೇಶಾತಿಯಲ್ಲಿ ಒಬಿಸಿ ಅಭ್ಯರ್ಥಿಗಳಿಗೆ ಶೇಕಡ 27ರಷ್ಟು ಮೀಸಲಾತಿ ಅನ್ವಯವಾಗಲಿದೆ. ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರವು ಗುರುವಾರ ಮೀಸಲಾತಿ ಕಲ್ಪಿಸುವ ನಿರ್ಧಾರಗಳನ್ನು ತೆಗೆದುಕೊಂಡಿದೆ.
ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅಖಿಲ ಭಾರತೀಯ ಕೋಟಾದಡಿ ಶೇಕಡ 10ರಷ್ಟು ಮೀಸಲಾತಿ ಅನ್ವಯವಾಗಲಿದೆ. ವೈದ್ಯಕೀಯ, ದಂತವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಾತಿಯಲ್ಲಿ ಹೊಸ ಮೀಸಲಾತಿಯು ಅನ್ವಯವಾಗಲಿದೆ. 2021-22 ಶೈಕ್ಷಣಿಕ ವರ್ಷದಿಂದ ಎಂಬಿಬಿಎಸ್, ಎಂಡಿ, ಎಂಎಸ್, ಬಿಡಿಎಸ್, ಎಂಡಿಎಸ್ ಹಾಗೂ ವೈದ್ಯಕೀಯ, ದಂತವೈದ್ಯಕೀಯ ಕೋರ್ಸ್ ಸಂಬಂಧಿತ ಡಿಪ್ಲೊಮಾ ಪ್ರವೇಶಾತಿಯಲ್ಲಿ ಹೊಸ ಮೀಸಲಾತಿ ನಿರ್ಧಾರ ಅನ್ವಯವಾಗಲಿದೆ.
- Advertisement -