Friday, July 4, 2025

Latest Posts

2ಎ ಮೀಸಲಾತಿ ಮರೆತ ಸರ್ಕಾರ, ಮತ್ತೆ ದುಂಡು ಮೇಜಿನ ಸಭೆ

- Advertisement -

ಕುಂದಗೋಳ : ಈ ಹಿಂದೆ ಕರ್ನಾಟಕ ಘನ ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುತ್ತೇವೆ ಎಂದು ಹೇಳಿತ್ತು ಆ ಮಾತನ್ನ ಸರ್ಕಾರಕ್ಕೆ ಮರಳಿ ನೆನಪು ಮಾಡುವ ಉದ್ದೇಶದಿಂದ ಅಗಸ್ಟ್ 12 ಹುಬ್ಬಳ್ಳಿಯ ಗೋಕುಲ ಕ್ಯೂವಿಸ್ಕ್ ಹೊಟೇಲ್’ನಲ್ಲಿ ಪಂಚಮಸಾಲಿ ಸಮಾಜದ ಬಾಂಧವರ ದುಂಡು ಮೇಜಿನ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲ ಸಂಗಮ ಶ್ರೀ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.

ಅವರು ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಕಾರ್ಯಕ್ರಮಕ್ಕೆ ಆಗಮಿಸಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿ ಬಿಜೆಪಿ ಸರ್ಕಾರ ಈ ಹಿಂದೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲು ಆರು ತಿಂಗಳು ಸಮಯ ಪಡೆದಿತ್ತು. ಮರಳಿ ಆ ಬಗ್ಗೆ ಇನ್ನೂ ಯಾವುದೇ ಪ್ರಸ್ತಾಪ ಮಾಡಿಲ್ಲ. ಈ ಕಾರಣದಿಂದ ನಾಳೆ ದುಂಡು ಮೇಜಿನ ಸಭೆ ಹಮ್ಮಿಕೊಳ್ಳಲಾಗಿದೆ ಪಂಚಮಸಾಲಿ ಸಮಾಜದ ಎಲ್ಲ ನಗರ ಪಟ್ಟಣದ ಗ್ರಾಮೀಣ ರಾಜಕೀಯದ ಎಲ್ಲ ಮುಖಂಡರು ಭಾಗವಹಿಸಿ ಎಂದರು.

ಕರ್ನಾಟಕ ಟಿವಿ ಹುಬ್ಬಳ್ಳಿ

- Advertisement -

Latest Posts

Don't Miss