Friday, August 29, 2025

Latest Posts

ದಸರಾಗೆ 2ನೇ ತಂಡದ ಗಜಪಡೆ : ತೂಕದಲ್ಲಿ ಶ್ರೀಕಂಠ ಮುಂದು!

- Advertisement -

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2025 ಕ್ಕೆ ದಿನಗಣನೆ ಶುರುವಾಗಿದೆ. ಗಜಪಡೆಗಳ ತಾಲೀಮು ಶುರುವಾಗಿದೆ. ಎರಡನೇ ತಂಡದ ದಸರಾ ಗಜಪಡೆಗೆ ತೂಕ ಪರಿಶೀಲನೆ ನಡೆಸಲಾಗಿದೆ.

ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಭಾಗವಹಿಸಲು ಎರಡನೇ ತಂಡದಲ್ಲಿ ಶ್ರೀಕಂಠ ನೇತೃತ್ವದಲ್ಲಿ 5 ಆನೆಗಳು ಸೋಮವಾರ ಅರಮನೆ ಪ್ರವೇಶಿಸಿದವು. ಮತ್ತಿಗೋಡು ಸಾಕಾನೆ ಶಿಬಿರದ 56 ವರ್ಷದ ಶ್ರೀಕಂಠ, 44 ವರ್ಷದ ಭೀಮನಕಟ್ಟೆಯ ರೂಪಾ, 11 ವರ್ಷದ ದುಬಾರೆಯ ಹೇಮಾವತಿ, 42 ವರ್ಷದ ಗೋಪಿ ಮತ್ತು 43 ವರ್ಷದ ಸುಗ್ರೀವ ಆನೆಗಳು ಲಾರಿಗಳ ಮೂಲಕ ಬಂದು ಅರಮನೆ ಅಂಗಳದಲ್ಲಿರುವ ಗಜಪಡೆಯೊಂದಿಗೆ ಸೇರಿಕೊಂಡವು.

ಈ ಐದು ಆನೆಗಳಿಗೂ, ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಮ್ ಎಲೆಕ್ಟ್ರಾನಿಕ್ ತೂಕ ಮಾಪನ ಕೇಂದ್ರದಲ್ಲಿ ಆನೆಗಳ ತೂಕ ಪರಿಶೀಲನೆ ನಡೆದಿದೆ. ತೂಕ ಪರಿಶೀಲನೆ ನಂತರ ಆನೆಗಳಿಗೆ ಪ್ರತಿನಿತ್ಯ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಜಂಬೂ ಸವಾರಿ ಮೆರವಣಿಗೆಗಾಗಿ ಬೆಳಿಗ್ಗೆ ಸಂಜೆ ಎರಡು ಸಮಯ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸಲಾಗುತ್ತದೆ. ನಗರದ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ಆನೆಗಳಿಗೆ ತರಬೇತಿ ಕೊಡಲಾಗುತ್ತಿದೆ.

ಎರಡನೇ ತಂಡದ ಆನೆಗಳ ತೂಕದ ವಿವರವನ್ನು ನೋಡ್ತಾ ಹೋದ್ರೆ-
ಹೇಮಾವತಿ 2440 ಕೆ ಜಿ ತೂಕ ಇದ್ದಾಳೆ, ಇದೇ ರೀತಿ ಶ್ರೀಕಂಠ 5540 ಕೆ ಜಿ ತೂಕ, ಸುಗ್ರೀವ 5545 ಕೆ ಜಿ ತೂಕ, ರೂಪ 3320 ಕೆ ಜಿ ತೂಕ, ಗೋಪಿ 4990 ಕೆ ಜಿ ತೂಕ ಇದ್ದಾನೆ. ಇದೇ ಮೊದಲ ಬಾರಿಗೆ ದಸರದಲ್ಲಿ ಪಾಲ್ಗೊಳ್ಳುತ್ತಿರುವ ಶ್ರೀ ಕಂಠ ತೂಕದಲ್ಲಿ ಮುಂದಿದ್ದಾನೆ. ಹೇಮಾವತಿ ಮತ್ತು ರೂಪ ಹೆಣ್ಣಾನೆಗಳಿಗು ಇದು ಮೊದಲ ದಸರಾವಾಗಿದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss