ಬೆಂಗಳೂರು: ವಿಭಿನ್ನ ಕಥಾಹಂದರವುಳ್ಳ ‘2nd ಲೈಫ್ ಚಿತ್ರದ ಟ್ರೆಲರ್ ಇತ್ತೀಚಿಗೆ ಬಿಡುಗಡೆಯಾಗಿದೆ. ಕರುಳಬಳ್ಳಿಯ ಅಂಶವನ್ನೇ ಮುಖ್ಯವಾಗಿಟ್ಟುಕಂಡು ಚಿತ್ರಕಥೆ ಬರೆಯಲಾಗಿದೆ. ಮಗು ಜನಿಸಿದ ನಂತರ ಕೆಲವು ದಿನಗಳಲ್ಲಿ ಕರುಳಬಳ್ಳಿ ಬೀಳುತ್ತದೆ. ಈ ಕರುಳಬಳ್ಳಿಯನ್ನಿಟ್ಟುಕೊಂಡು ಕ್ಯಾನ್ಸರ್ ರೋಗಿಗಳ ಔಷಧಿಗೆ ಬಳಸಲಾಗುತ್ತದೆ.
ಸಿಎಂ ಅಣಕು ಶವಯಾತ್ರೆ ಮಾಡಿ ಪ್ರತಿಭಟಿಸುತ್ತಿರುವ ಮಂಡ್ಯ ರೈತರು
ಕರುಳಬಳ್ಳಿ ಶೇಖರಿಸಿಡುವ ಕಾರ್ಯ ಈಗ ಎಲ್ಲೆಡೆಯೂ ನಡೆಯುತ್ತಿದೆ. ಕರ್ನಾಟಕದ್ಲಲೆ ಸುಮಾರು 70-80 ಸಾವಿರ ಜನರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಅಂತಹವರಿಗೆ ಈ ಕರುಳಬಳ್ಳಿ ಶೇಖರಣೆ ಉಪಯೋಗವಾಗಲಿದೆ. ಇದೇ ಅಂಶವನ್ನು ಪ್ರಮುಖವಾಗಿಟ್ಟುಕೊಂಡು ‘2nd ಲೈಪ್’ ಚಿತ್ರಕಥೆ ಹೆಣೆಯಲಾಗಿದೆ. ಜಯಣ್ಣ ಫಿಲಂಸ್ ಹಾಗೂ ಶುಕ್ರ ಫಿಲಂಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಜಿವನದಲ್ಲಿ ನಡೆದ ಅನಾಹುತದಿಂದ ಪಾರಾಗಿ ಮತ್ತೆ ಹೊಸ ಜೀವನ ಆರಂಭವಾಗುವುದು ಎಲ್ಲರ ಜೀವನದಲ್ಲೂ ನಡದೇ ಇರುತ್ತೆ. ಈ ತರದ ಸನ್ನಿವೇಶಗಳನ್ನೇ ಆಧಾರವಾಗಿಟ್ಟುಕೊಂಡು ಚಿತ್ರಕ್ಕೆ ‘2nd ಲೈಫ್’ ಎಂದು ಹೆಸರಿಡಲಾಗಿದೆ. ಈಗ ಟ್ರೇಲರ್ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ರಾಜು ದೇವಸಂದ್ರ ಚಿತ್ರದ ಕುರಿತು ವಿವರಣೆ ನೀಡಿದ್ದಾರೆ.
ಬೆಂಗಳೂರು ಟೆಕ್ ಶೃಂಗಸಭೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ
ನಾನು ಈ ಹಿಂದೆ ‘ಸ್ವಾರ್ಥ ರತ್ನ’ ಎಂಬ ಚಿತ್ರದಲ್ಲಿ ಅಭನಯಸಿದ್ದೆನೆ. ಈಗ “2 nd ಲೈಫ್” ಚಿತ್ರದಲ್ಲಿ ನಟಿಸಿದ್ದೇನೆ. ನಾನು ಮೂಲತಃ ಆಡಿಟರ್. ಮಂಜುಳಾ ರಮೇಶ್ ಅವರು ಬರೆದಿರುವ ಈ ಚಿತ್ರಕಥೆ ಹಿಡಿಸಿತು ಅದಕ್ಕೆ ಚಿತ್ರದಲ್ಲಿ ನಟಿಸಿದ್ದೇನೆ ಎಂದು ನಾಯಕ ಆದರ್ಶ್ ಗುಂಡುರಾಜ್ ಹೇಳಿದರು. ಇನ್ನು ಚಿತ್ರ ಕನ್ನಡ, ತೆಲುಗು ಹಾಗೂ ತಮಿಳು ಮೂರು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಸದ್ಯದಲ್ಲೆ ಚಿತ್ರ ಬಿಡುಗಡೆಯಾಗಲಿದೆ ಪ್ರೋತ್ಸಾಹಿಸಿ ಎಂದು ನಾಯಕ ಆದರ್ಶ್ ಹೇಳಿದರು. ಚಿತ್ರದಲ್ಲಿ ನನ್ನದು ಕುರುಡಿಯ ಪಾತ್ರ ಎಂದು ತಮ್ಮ ಪಾತ್ರದ ಬಗ್ಗೆ ನಾಯಕಿ ಸಿಂಧೂ ರಾವ್ ತಿಳಿಸಿದರು.