www.karnatakatv.net: ಚಾಮರಾಜನಗರ : ಗುಂಡ್ಲುಪೇಟೆ ತಾಲೂಕಿನ ವಡಯನಪುರ ಗ್ರಾಮದಲ್ಲಿ ವ್ಯಾಘ್ರನ ದಾಳಿಗೆ 3 ಹಸುಗಳು ಪ್ರಾಣ ಬಿಟ್ಟಿವೆ.
ಬಂಡೀಪುರದ ಬಫರ್ ಜೋನ್ ಗೆ ಹೊಂದಿಕೊoಡಿರುವ ಗ್ರಾಮ ಇದಾಗಿದ್ದು, ಕಾಡಿನಿಂದ ನಾಡಿಗೆ ಬರುವ ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ. ಈಗ ಗ್ರಾಮದ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡದೇ ಇರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ, ಹುಲಿಯ ಈ ದಾಳಿಗೆ ಬೆಚ್ಚಿಬಿದ್ದ ಗ್ರಾಮಸ್ಥರು, ಒಂದೇ ಬಾರಿ ಏಕಾಏಕಿ ಹಸುಗಳ ಮೇಲೆ ಎರಗಿ ಭೀಕರವಾಗಿ ತಿಂದುಹಾಕಿದೆ. ಮೂರು ಹಸುಗಳನ್ನು ಕಳೆದುಕೊಂಡಿರುವ ರೈತ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಹಸುಗಳಾಗಿದ್ದು, ಕಣ್ಣೀರು ಹಾಕುವ ಪರಿಸ್ಥಿತಿ ಉಂಟಾಗಿದೆ. ಜೀವನೋಪಾಯಕ್ಕೆ ಇದ್ದಂತ ಹಸುಗಳು ಹೈನುಗಾರಿಕೆನ್ನು ನಂಬಿಕೊAಡು ಬದುಕುತ್ತಿದ್ದ. ರೈತನ ಬಾಳು ಚಿಂತಾಜನಕವಾಗಿದೆ. ಸರ್ಕಾರ ಕೂಡಲೇ ಪರಿಹಾರ ಕೊಡಿಸುವಂತೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸಾದ್, ಕರ್ನಾಟಕ ಟಿವಿ- ಚಾಮರಾಜನಗರ