Chithradurga News:
ಇಬ್ಬರು ಅಪ್ರಾಪ್ತ ಬಾಲಕಿಯರ ದೂರಿನ ಅನ್ವಯವಾಗಿ ಪೋಕ್ಸೋ ಕೇಸ್ ನಡಿ ಮುರುಘ ಶ್ರೀಗಳನ್ನು ಬಂಧಿಸಲಾಗಿತ್ತು ಆದರೆ ಅಕಸ್ಮಾತ್ ಆಗಿ ಶ್ರೀಗಳಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತದ ನಂತರ ಬೆಂಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಆದರೆ ಕೋರ್ಟ್ ಗೆ ಹಾಜರು ಪಡಿಸಬೇಕಾಗಿದ್ದರು ಬೆಳಗ್ಗೆ 11 ಗಂಟೆಗೆ ಹಾಜರು ಮಾಡಲು ವಿಳಂ ಬವಾಯಿತು. ಈ ಕಾರಣದಿಂದ ಕೋರ್ಟ್ ಒತ್ತಾಯದ ಮೇರೆಗೆ ಸಂಜೆ 4 ಗಂಟೆ ವೇಳೆಗೆ ಕೋರ್ಟ್ ಗೆ ಹಾಜರು ಪಡಿಸಲಾಯಿತು. ಶ್ರೀಗಳನ್ನು ವಿಚಾರಣೆ ಮಾಡಲು ಅವರ ಆರೋಗ್ಯ ಕೈಕೊಟ್ಟ ಕಾರಣ ಪೊಲೀಸರಿಗೆ ವಿಚಾರಣೆ ಮಾಡಲಾಗಿರಲಿಲ್ಲ ಆದ್ದರಿಂದ ಕೋರ್ಟ್ ಗೆ 5 ದಿನದ ಕಸ್ಟಡಿ ಸಮಯ ಕೇಳಿದ್ದರು.ಆದರೆ ಇದೀಗ ಕೋರ್ಟ್ 3 ದಿನಗಳ ಕಾಲ ಶ್ರೀಗಳನ್ನು ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದೆ.
BREAKING: ಮುರುಘಾ ಶ್ರೀಗಳನ್ನು ಖುದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿ – ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ