- Advertisement -
www.karnatakatv.net: 3 ಜನ ಭಾರತೀಯರು ಶ್ವೇತಭವನದ ಫೆಲೋಶಿಫ್ ಗೆ ಆಯ್ಕೆಯಾಗಿದ್ದಾರೆ.
ಫೆಲೋಶಿಪ್ ಒಂದು ವರ್ಷದ ಕಾರ್ಯಕ್ರಮವಾಗಿದ್ದು, ಇದರಲ್ಲಿ ಆಯ್ಕೆಯಾಗುವವರು ಶ್ವೇತಭವನದಲ್ಲಿ ವಿವಿಧ ಹುದ್ದೆಗಳಲ್ಲೇ ಕೆಲಸ ಮಾಡಬೇಕಾಗುತ್ತದೆ. ಕ್ಯಾಲಿಪೋರ್ನಿಯಾದಲ್ಲಿ ನೆಲೆಸಿರುವ ಭಾರತೀಯರಾದ ಜೋಯ್ ಬಸು ಹಾಗೂ ಸನ್ನಿ ಪಟೇಲ್ ಮತ್ತು ನ್ಯೂಜೆರ್ಸಿಯ ಆಕಾಶ್ ಷಾ ಅವರು ಶ್ವೇತಭವನದ ಫೆಲೋಶಿಫ್ ಗೆ ಆಯ್ಕೆಯಾಗಿದ್ದಾರೆ. 1964ರಲ್ಲಿ ಅಂದಿನ ಅಮೆರಿಕಾ ಅಧ್ಯಕ್ಷ ಲಿಂಡನ್ ಬಿ ಜಾನ್ಸನ್ ಅವರು ಈ ಫೆಲೋಶಿಫ್ ಆರಂಭಿಸಿದ್ದು, ಇದುವರೆಗೂ ದೇಶ ವಿದೇಶಗಳ ನೂರಾರು ತಜ್ಞರು ಶ್ವೇತಭವನದಲ್ಲಿ ಸೇವೆ ಸಲ್ಲಿಸಿದ್ದಾರೆ. ಈಗ ಮತ್ತೆ ಮೂವರು ಭಾರತೀಯರು ಶ್ವೇತಭವನದ ಫೆಲೋಶಿಗೆ ಆಯ್ಕೆಯಾಗಿರುವುದರಿಂದ ಎಲ್ಲರು ಹೆಮ್ಮೆಪಡುವ ವಿಚಾರವಾಗಿದೆ.
- Advertisement -