Wednesday, August 20, 2025

Latest Posts

ಪಾಕಿಸ್ತಾನದಲ್ಲಿ ಭೀಕರ ‘ಜಲಪ್ರಳಯ’ 48 ಗಂಟೆಗೆ 321 ಸಾವು!

- Advertisement -

ಪಾಕಿಸ್ತಾನದಲ್ಲಿ ಭಾರೀ ಮಳೆಯಿಂದಾಗಿ ಭೀಕರ ಪ್ರವಾಹ ಉಂಟಾಗಿದೆ. ಕಳೆದ 48 ಗಂಟೆಗಳಲ್ಲಿ 321ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮನೆಗಳು, ಶಾಲೆಗಳು, ಆಸ್ಪತ್ರೆಗಳು ಹಾಗೂ ರಸ್ತೆಗಳು ಜಲಾವೃತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಭಾರೀ ಮಳೆಯ ಪರಿಣಾಮವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸೇರಿದಂತೆ ಖೈಬರ್ ಪಖ್ತುಂಖ್ವಾ, ಬುನೇರ್, ಬಜೌರ್, ಸ್ವಾತ್, ಶಾಂಗ್ಲಾ, ಮನ್ಸೆಹ್ರಾ, ಬಟ್ಟಾಗ್ರಾಮ್, ಮತ್ತು ಅಬೋಟಾಬಾದ್ ಜಿಲ್ಲೆಗಳಲ್ಲಿ ಹೆಚ್ಚಿನ ಜೀವಹಾನಿ ಸಂಭವಿಸಿದೆ.

ಹವಾಮಾನ ಇಲಾಖೆ ಮುಂದಿನ ಕೆಲ ದಿನಗಳವರೆಗೆ ಭಾರೀ ಮಳೆಯ ಮುನ್ಸೂಚನೆ ನೀಡಿದ್ದು, ಪ್ರವಾಹದ ಭೀತಿಯನ್ನು ಇನ್ನಷ್ಟು ಹೆಚ್ಚಿಸಿದೆ. ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಮಾತ್ರ 307 ಮಂದಿ ಮೃತಪಟ್ಟಿರುವುದು ದೃಢವಾಗಿದೆ.

ಶಾಂಗ್ಲಾ 36 ಸಾವು, ಮನ್ಸೆಹ್ರಾ 23, ಸ್ವಾತ್ 22, ಬಜೌರ್ 21, ಬಟ್ಟಾಗ್ರಾಮ್ 15, ಅಬೋಟಾಬಾದ್ ದಲ್ಲಿ 1 ಮಗು ಮಳೆಯ ನೀರಿಗೆ ಕೊಚ್ಚಿ ಸಾವನ್ನಪ್ಪಿದೆ. ರಾಷ್ಟ್ರದಾದ್ಯಂತ ನೂರಾರು ಮನೆಗಳು ಧರೆಗುರುಳಿದ್ದು, ರಸ್ತೆ, ಮಾರುಕಟ್ಟೆ, ಅಂಗಡಿಗಳು ನೀರಿನಿಂದ ತುಂಬಿವೆ. ಸುಮಾರು 2,000 ರಕ್ಷಣಾ ಸಿಬ್ಬಂದಿ 9 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವಶೇಷಗಳಡಿ ಸಿಲುಕಿದವರ ರಕ್ಷಣೆಗೆ ಹರಸಾಹಸ ಪಡುತ್ತಿದ್ದಾರೆ.

ಹಲವೆಡೆ ಭೂಕುಸಿತ ಉಂಟಾಗಿ, ರಸ್ತೆಗಳು ಮುಚ್ಚಲ್ಪಟ್ಟಿದ್ದು, ಆಂಬುಲೆನ್ಸ್‌ಗಳಿಗೂ ಪ್ರವೇಶ ಸಾಧ್ಯವಾಗುತ್ತಿಲ್ಲ. ಕಾಲ್ನಡಿಗೆಯಲ್ಲೇ ಪರಿಹಾರ ಕಾರ್ಯ ಮುಂದುವರಿದಿದ್ದು, ಪರಿಸ್ಥಿತಿ ಕಠಿಣವಾಗಿದೆ ಎಂದು ರಕ್ಷಣಾ ವಕ್ತಾರ ಬಿಲಾಲ್ ಅಹ್ಮದ್ ಫೈಜಿ ತಿಳಿಸಿದ್ದಾರೆ.

ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾದ ಜನರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗುತ್ತಿದ್ದು, ಚಿಕಿತ್ಸೆ, ಆಹಾರ, ನೀರಿನ ಪೂರೈಕೆ ಸಮಸ್ಯೆಗಳು ಎದುರಾಗಿವೆ.

- Advertisement -

Latest Posts

Don't Miss