Wednesday, March 12, 2025

Latest Posts

Government employees suicide 3 ವರ್ಷದಲ್ಲಿ 328 ಸರ್ಕಾರೀ ನೌಕರರ ಆತ್ಮ ಹತ್ಯೆ !

- Advertisement -

ಮೈಸೂರು : ರಾಜ್ಯದಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಅಂದರೆ ೨೦೨೧ ರಿಂದ ೨೦೨೩ ರ ವರೆಗೆ ೩೨೮ ಸರ್ಕಾರೀ ನೌಕರರ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎಂಬ ಭಯಾನಕ ಅಂಕಿಅಂಶ ಈಗ ಹೊರ ಬಿದ್ದಿದೆ.

ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆಯ ಅಡಿ ಸಲ್ಲಿಸಿದ್ದ ಅರ್ಜಿಗೆ ರಾಜ್ಯ ಅಪರಾಧಿ ದಾಖಲಾತಿ ವಿಭಾಗವು ಅಂಕಿ ಅಂಶದ ವರದಿಯನ್ನು ನೀಡಿದೆ.

ಇದೆ ಮೂರು ವರ್ಷದ ಅವಧಿಯಲ್ಲಿ ೫೪ ಮಂದಿ ಪೊಲೀಸ್ ಸಿಬ್ಬಂದಿಗಳೂ ಕೂಡ ಆತ್ಮಹತ್ಯೆ ಮಾಡಿಕೊಂಡಿರೋದು ವಿಪರ್ಯಾಸ ಎನಿಸುತ್ತಿದೆ ಬೆಂಗಳೂರು ಹೊರತು ಪಡಿಸಿದರೆ ಮೈಸೂರು ನಗರ , ಬೆಳಗಾವಿ , ಹುಬ್ಬಳ್ಳಿ- ಧಾರವಾಡ, ದಲ್ಲಿ ತಲಾ ೧೬ ಮಂದಿ , ಗದಗ ಕಲಬುರ್ಗಿ ನಗರ, ಹಾಸನ, ತುಮಕೂರು ಮತ್ತು ಕರ್ನಾಟಕ ರೈಲ್ವೆ ವಿಭಾಗದಲ್ಲಿ ತಲಾ ೧೨ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಗಲಕೋಪ್ಟ್ ಮತ್ತು ಉತ್ತರ ಕನ್ನಡದಲ್ಲಿ ತಲಾ ೧೧ ಮಂದಿ ಬೆಂಗಳೂರು ನಗರ ಜಿಲ್ಲೆ ಮತ್ತು ಉಡುಪಿಯಲ್ಲಿ ತಲಾ ೧೦ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಆತ್ಮಹತ್ಯೆಯ ಸಂಖ್ಯೆ ಒಂದು ಅಂಕಿಯಲ್ಲಿದೆ. ಇದರಲ್ಲಿ ಗುಮಾಸ್ತ, ಅಕೌಂಟೆಂಟ್, ರೀತಿಯ ಆದಿನದ ಸಿಬ್ಬಂದಿಯೇ ಹೆಚ್ಚಾಗಿದ್ದರೆ ಎನ್ನಲಾಗತಿದೆ.

ಇನ್ನು ಪೊಲೀಸ್ ಇಲಾಖೆಯಲ್ಲಿ ಈ ಮೂರು ವರ್ಷದಲ್ಲಿ ಬೆಂಗಳೂರು ನಗರದಲ್ಲಿ ೧೩ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇಡೀ ರಾಜ್ಯದಲ್ಲಿ ಇದೆ ಹೆಚ್ಚಿನ ಸಂಖ್ಯೆ ಎನ್ನಲಾಗಿದೆ.
ಮೈಸೂರು ನಗರದಲ್ಲಿ ೫ , ಚಾಮರಾಜನಗರದಲ್ಲಿ ೪, ಬೀದರ್ , ಗದಗ , ಮಂಗಳೂರು ನಗರದಲ್ಲಿ ತಲಾ ೩ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಕಲಬುರ್ಗಿ ನಗರ , ಶಿವಮೊಗ್ಗ , ಉಡುಪಿ , ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ೨ ಇನ್ನು ಉಳಿದ ಜಿಲ್ಲೆಗಳಲ್ಲಿ ತಲಾ ಒಬ್ಬರು ಆತ್ಮಹತ್ಯೆ ,ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ಆತ್ಮಹತ್ಯೆ ಮಾಡಿಕೊಂಡವರು ಯಾವ ವರ್ಷದಲ್ಲಿ ಎಷ್ಟು ಅಂತ ನೋಡೋದಾದ್ರೆ

ಆತ್ಮಹತ್ಯೆ ಮಾಡಿಕೊಂಡ ಸರ್ಕಾರೀ ನೌಕರರು
2021- 115
2022 – 96
2023 – 117

ಆತ್ಮಹತ್ಯೆ ಮಾಡಿಕೊಂಡ ಪೊಲೀಸರು
2021 – 17
2022 – 13
2023 – 24

ಹೆಚ್ಚುತ್ತಿರುವ ಈ ಆತ್ಮಹತ್ಯೆಗಳ ಕುರಿತು ಒಡನಾಡಿ ಸಂಸ್ಥೆಯ ಅಧಿಕಾರಿಯೊಬ್ಬರು ಮಾಹಿತಿಯನ್ನ ತಿಳಿಸಿದ್ದಾರೆ. ಈ ಆತ್ಮಹತ್ಯೆಗಳಿಗೆ ಕಾರಣ ಅತಿಯಾದ ಕೆಲಸದ ಒತ್ತಡ , ಅಧಿಕಾರಿಗಳಿಂದ ಅವಮಾನ , ಅವರು ಹೇಳಿದ್ದನ್ನೆಲ್ಲಾ ಮಾಡಲೇಬೇಕಾದ ಅಸಹಾಯಕತೆ , ಭ್ರಷ್ಟಾಚಾರದಲ್ಲಿ ಅನಿವಾರ್ಯವಾಗಿ ಸಿಲುಕುವುದು , ತುರ್ತು ಸಂದರ್ಭಗಳಲ್ಲಿ ರಜೆ ದೊರಕದೆ ಏರುವುದು , ಈ ಪ್ರಮುಖ ಕಾರಣಗಳ ಜೊತೆಗೆ ಕುಡಿತ , ಕೌಟುಂಬಿಕ ಕಲಹದಂಥ ವಯಕ್ತಿಕ ಕಾರಣಗಳು ಕೂಡ ಆತ್ಮಹತ್ಯೆಗೆ ಕಾರಣವಾಗಿವೆ ಎನ್ನಲಾಗಿದೆ. ಇನ್ನು ಈ ಎಲ್ಲ ವಿಚಾರಗಳು ಆತ್ಮಹತ್ಯೆ ಮಾಡಿಕೊಂಡ ಕುಟುಂಬದವರೊಂದಿಗೆ ಮಾತನಾಡಿದಾಗ ಬೆಳಕಿಗೆ ಬಂದಿವೆ.

- Advertisement -

Latest Posts

Don't Miss