www.karnatakatv.net :ದೇಶದಲ್ಲಿ ಅಪೌಷ್ಟಿಕತೆ ಸಮಸ್ಯೆ ಎದುರಿಸೋ ಸಲುವಾಗಿ 35 ಬೆಳೆ ತಳಿಗಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ.
ಹವಾಮಾನ ಬದಲಾವಣೆ ಮತ್ತು ಅಪೌಷ್ಟಿಕತೆಯ ಸಮಸ್ಯೆ ಎದುರಿಸಲು ಭಾರತೀಯ ಕೃಷಿ ಸಂಶೋಧನಾ ಮಂಡಳಿ ಅಭಿವೃದ್ಧಿಪಡಿಸಿದ ವಿಶೇಷ ಗುಣಲಕ್ಷಣಗಳನ್ನು ಹೊಂದಿದ, ಅತ್ಯಧಿಕ ಪೋಷಕಾಂಶಗಳುಳ್ಳ 35 ವಿಶೇಷ ಬೆಳೆ ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆಗೊಳಿಸಿದ್ದಾರೆ. ಈ ಸಾಲಿನಲ್ಲಿ ಈ ವಿಶೇಷ ಬೆಳೆ ತಳಿಗಳನ್ನು ತಜ್ಞರು ಅಭಿವೃದ್ಧಿಪಡಿಸಿದ್ದು ಇವು ಬರಗಾಲದ ಸಹಿಷ್ಣು ಮಾದರಿಯ ತಳಿಗಳಾಗಿವೆ. ಕಡಲೆಬೀಜ, ವಿಶೇಷ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಸೋ ತೊಗರಿ, ತ್ವರಿತ ಫಸಲು ನೀಡುವ ಸೋಯಾಬೀನ್, ಭತ್ತ ಜೈವಿಕ ಬಲವರ್ಧಿತ ಗೋಧಿ, ಜೋಳ, ರಾಗಿ, ನವಣೆ, ಅಕ್ಕಿ, ಜೋಳ ಹುರುಳಿ ಸೇರಿದಂತೆ ಒಟ್ಟು 53 ಬಗೆಯ ವಿಶೇಷ ತಳಿಗಳ ಬೆಳೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ.
ಇನ್ನು ಅತಿ ಕಡಿಮೆ ನೀರಿನಲ್ಲೇ ಬೆಳೆಯಲು ಯೋಗ್ಯವಾಗಿರೋ ಈ ಎಲ್ಲಾ ವಿಶೇಷ ತಳಿಯ ಬೆಳೆಗಳು ಹವಾಮಾನ ವೈಪರಿತ್ಯದಿಂದ ನಷ್ಟದ ಭೀತಿ ಎದುರಿಸೋ ರೈತರಿಗೂ ಉತ್ತಮ ಲಾಭ ತಂದುಕೊಡುತ್ತೆ ಅಂತ ತಜ್ಞರು ತಿಳಿಸಿದ್ದಾರೆ