ಭಾರತದ ಬಗ್ಗೆ ಪಾಕಿಸ್ತಾನಿ ವೆಬ್‌ಸೈಟ್, ಟ್ವಿಟರ್, ಫೇಸ್‌ಬುಕ್ ಮತ್ತು ಯುಟ್ಯೂಬ್ ಚಾನೆಲ್ ಸುಳ್ಳು ಸುದ್ದಿ ಹರಡಿದ್ದಕ್ಕೆ, ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪಾಕಿಸ್ತಾನಕ್ಕೆ ಸೇರಿದ 35 ಯುಟ್ಯೂಬ್ ಚಾನೆಲ್, 2 ಟ್ವಿಟರ್ ಅಕೌಂಟ್, 2 ಇನ್‌ಸ್ಟಾಗ್ರಾಮ್ ಅಕೌಂಟ್, 2 ವೆಬ್‌ಸೈಟ್, ಫೇಸ್‌ಬುಕ್ ಅಕೌಂಟನ್ನ ಬ್ಲಾಕ್ ಮಾಡಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿರುವ ವಿಕ್ರಮ್ ಸಹಾಯ್ ಎಂಬುವರು ಈ ಬಗ್ಗೆ ಮಾತನಾಡಿದ್ದು, ಪಾಕಿಸ್ತಾನಕ್ಕೆ ಸೇರಿದ ಕೆಲ ಸಾಮಾಜಿಕ ಜಾಲತಾಣದ ಅಕೌಂಟ್ಸ್‌ಗಳನ್ನ ಬ್ಲಾಕ್ ಮಾಡಲಾಗಿದೆ. ಭಾರತದ ಬಗ್ಗೆ ಸುಳ್ಳು ಸುದ್ದಿ ಮತ್ತು ಬೇಡದ ವಿಷಯಗಳನ್ನ ಪ್ರಸಾರ ಮಾಡಿದ್ದಕ್ಕಾಗಿ ಹೀಗೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಸದ್ಯ ಬ್ಲಾಕ್ ಮಾಡಲಾಗಿರುವ ಅಕೌಂಟ್‌ಗೆ 1.2 ಕೋಟಿ ಸಬ್‌ಸ್ಕ್ರೈಬರ್ಸ್ ಇದ್ದು, 130 ಕೋಟಿಗೂ ಹೆಚ್ಚು ಜನ ವೀಕ್ಷಕರಿದ್ದರು. ಈ ಖಾತೆ ನಡೆಸುತ್ತಿದ್ದವರು, ಭಾರತೀಯ ಸಶಸ್ತ್ರ ಪಡೆಗಳು, ಕಾಶ್ಮೀರ ಇತರ ದೇಶದೊಂದಿಗೆ ಸಂಬಂಧ ಹೊಂದಿರುವ ಬಗ್ಗೆ, ಬಿಪಿನ್ ರಾವತ್ ಸಾವಿನ ವಿಷಯಗಳ ಬಗ್ಗೆ ಪದೇ ಪದೇ ಸುಳ್ಳು ಸುದ್ದಿ ಪ್ರಕಟಿಸುತ್ತಿದ್ದರು. ಹೀಗಾಗಿ ಇವರ ಖಾತೆಗಳನ್ನ ಬ್ಲಾಕ್ ಮಾಡಲಾಗಿದೆ.
ಈ ನಿರ್ಬಂಧಿಸಲಾದ ಖಾತೆಗಳಲ್ಲಿ 14 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ವಹಿಸುವ ‘ಅಪ್ನಿ ದುನಿಯಾ ನೆಟ್‌ವರ್ಕ್’ ಮತ್ತು 13 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ವಹಿಸುತ್ತಿರುವ ‘ತಲ್ಹಾ ಫಿಲ್ಮ್ಸ್ ನೆಟ್‌ವರ್ಕ್’ ಸೇರಿವೆ ಎಂದು ಮಾಹಿತಿ ಮತ್ತು ಪ್ರಸಾರದ ಪ್ರಕಟಣೆ ತಿಳಿಸಿದೆ.