Kundagola News: ಕುಂದಗೋಳ : ಬಂಗಾರದ ನಾಣ್ಯಗಳನ್ನು ಕೊಡುತ್ತೇವೆ ಎಂದು ಹಾಸನದ ಮೂಲದ ವ್ಯಾಪಾರಿಯೊಬ್ಬರಿಗೆ ಅಪರಿಚಿತರು ಟೋಪಿ ಹಾಕಿ 4 ಲಕ್ಷ ರೂಪಾಯಿ ಲಪಟಾಯಿಸಿದ ಘಟನೆ ಕುಂದಗೋಳ ತಾಲೂಕಿನ ಶಿರೂರು ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ.
ಮೇ.30 ರಂದು ಕುಂದಗೋಳ ಬೆಳಿಗ್ಗೆ 7 ಗಂಟೆಗೆ ಕುಂದಗೋಳ ತಾಲೂಕಿನ ಶಿರೂರು ಗ್ರಾಮದ ಬಳಿ ಹಾಸನದ ವ್ಯಾಪಾರಿ ಬಿ.ಎಸ್.ಬಾಬು ಎಂಬುವವರನ್ನೂ ಕರೆಯಸಿದ ಅಪರಿಚಿತ ಈಶ್ವರಪ್ಪ ಎಂಬ ವ್ಯಕ್ತಿ ಹಾಗೂ ಇನ್ನಿಬ್ಬರು ಬಂಗಾರದ ನಾಣ್ಯಗಳೇಂದು ನಕಲಿ ನಾಣ್ಯಗಳನ್ನು ನೀಡಿ 4 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ್ದಾರೆ ಎಂದು ವ್ಯಾಪಾರಿ ಮೇ.30 ನಡೆದ ಘಟನೆ ಬಗ್ಗೆ ಜುಲೈ 11 ರಂದು ನೀಡಿದ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಇನ್ನೂ ವ್ಯಾಪಾರಿ ಮಾರುಕಟ್ಟೆಯಲ್ಲೇ ಚಿನ್ನ ಸಿಗುವಾಗ ದೂರದ ಊರಿಗೆ ಯಾಕೆ ಬಂದ ? ಅಪರಿಚಿತರು ಹೇಗೆ ವ್ಯಾಪಾರಿಗೆ ಪರಿಚಯ ಆದರು ? ನಕಲಿ ನಾಣ್ಯಗಳನ್ನು ಪರಿಶೀಲನೆ ನಡೆಸದೇ ವ್ಯಾಪಾರಿ ಹೇಗೆ ಹಣ ಕೊಟ್ಟು ಖರೀದಿ ಮಾಡಿದ ? ಜನನಿಬಿಡ ಪ್ರದೇಶದಲ್ಲಿ ಬಂಗಾರದ ಖರೀದಿಸುವ ಅವಶ್ಯಕತೆ ವ್ಯಾಪಾರಿಗೆ ಏನಿತ್ತು ? ಹಣವನ್ನು ನಗದು ರೂಪದಲ್ಲಿ ನೀಡಿದಿರಾ ಹೇಗೆ ಹಣ ಕೊಟ್ಟರು ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೂರವಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕುಂದಗೋಳ ಗ್ರಾಮೀಣ ಪೊಲೀಸರು ತನಿಖೆ ನಡೆಸಿ ಸತ್ಯಾಂಶ ಬಹಿರಂಗ
ಪಡಿಸಬೇಕಿದೆ.