www.karnatakatv.net: ಉನ್ನತ ಶಿಕ್ಷಣದ ಗುಣಮಟ್ಟವನ್ನು ಮೇಲ್ದರ್ಜೆಗೇರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಹಾಗೇ ಒಂದು ಗಂಟೆ ಸಾಮಾನ್ಯ ತರಗತಿಯನ್ನು 45 ನಿಮಿಷಗಳ ಬೋಧನೆ ಮತ್ತು 15 ನಿಮಿಷಗಳ ಆಂತರಿಕ ಮೌಲ್ಯಮಾಪನ ಎಂದು ವಿಂಗಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ತಿಳಿಸಿದರು.
ಭಾರತೀಯ ಶಿಕ್ಷಣ ಮಂಡಲ ಸಹಯೋಗದಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯ ಮತ್ತು ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ರೂಪಿಸಿದ ರಾಷ್ಟ್ರೀಯ ಶಿಕ್ಷಣ ನೀತಿ 2020 ಪೂರಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಎಂಜಿನಿಯರಿoಗ್ ನಲ್ಲಿ, ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಪ್ರತಿ ವಿಷಯದಲ್ಲಿ 50 ಅಂಕಗಳಿಗೆ ಹೆಚ್ಚಿಸಲಾಗಿದೆ. ಇತರ ಪದವಿ ಕೋರ್ಸ್ಗಳಿಗೂ ಇದನ್ನು ಪರಿಚಯಿಸಲಾಗುವುದು. ಪ್ರತಿ ವರ್ಷ 2000 ಶಿಕ್ಷಕರಿಗೆ ಆಫ್ಲೈನ್ ತರಬೇತಿ ನೀಡಲಾಗುವುದು ಮತ್ತು 10,000 ಶಿಕ್ಷಕರಿಗೆ ಆನ್ಲೈನ್ ತರಬೇತಿ ನೀಡಲಾಗುವುದು ಎಂದು ತಿಳಿಸಿದರು. ಉನ್ನತ ಶಿಕ್ಷಣ ಅಕಾಡೆಮಿ, ಧಾರವಾಡ ಪ್ರತಿ ವರ್ಷ 2,000 ಶಿಕ್ಷಕರಿಗೆ ದೈಹಿಕವಾಗಿ ತರಬೇತಿ ನೀಡಲಿದೆ ಮತ್ತು ಇನ್ಫೋಸಿಸ್ ತನ್ನ ‘ಮೈಸೂರು ಕ್ಯಾಂಪಸ್ ನಲ್ಲಿ ನಿಯಮಿತವಾಗಿ ಪ್ರತಿ ಬ್ಯಾಚ್ನಲ್ಲಿ 200 ಶಿಕ್ಷಕರಿಗೆ ತರಬೇತಿ ನೀಡುತ್ತದೆ. ಇದರ ಜೊತೆಗೆ, ಗುಲ್ಬರ್ಗ ಮತ್ತು ಮೈಸೂರು ವಿಶ್ವವಿದ್ಯಾಲಯಗಳು ಸಹ ಶಿಕ್ಷಕರಿಗೆ ತರಬೇತಿ ನೀಡುವಲ್ಲಿ ತೊಡಗಿಸಿಕೊಳ್ಳುತ್ತೆವೆ. ಇದು ಹೆಚ್ಚುವರಿಯಾಗಿ 10,000 ಉನ್ನತ ಶಿಕ್ಷಣದ ಶಿಕ್ಷಕರಿಗೆ ಆನ್ಲೈನ್ ಮೋಡ್ ಮೂಲಕ ತರಬೇತಿ ನೀಡುತ್ತಿದೆ” ಎಂದು ಅಶ್ವಥ್ ನಾರಾಯಣ್ ವಿವರಿಸಿದರು.