ರಿಲೀಸ್ಗೂ ಮೊದಲೇ ಸಕತ್ ಕುತೂಹಲ ಹುಟ್ಟಿಸಿರುವಂತ ‘45 ಸಿನಿಮಾ ಮತ್ತೊಂದು ಕುತೂಹಲವನ್ನ ಹುಟ್ಟಿ ಹಾಕಿದೆ, ಬೆಂಗಳೂರಿನಲ್ಲಿ ಡಿಸೆಂಬರ್ 15ರಂದು ‘45’ ಚಿತ್ರದ ಟ್ರೇಲರ್ ಗ್ರ್ಯಾಂಡ್ ಲೆವೆಲ್‌ನಲ್ಲಿ ಬಿಡುಗಡೆ ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಎಲ್ಲ ಅಭಿಮಾನಿಗಳು ಬೆಂಗಳೂರಿಗೆ ಬರೋದು ಸಾಧ್ಯವಾಗದೆ ಇರೋದನ್ನು ಗಮನದಲ್ಲಿ ಇಟ್ಟುಕೊಂಡು, ಕಾರ್ಯಕ್ರಮವನ್ನು 7 ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ನೇರ ಪ್ರಸಾರ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ….
ಅರ್ಜುನ್ ಜನ್ಯ ಅವರ ನಿರ್ದೇಶನದಲ್ಲಿ ಬಿಡುಗಡೆಯಾಗುತ್ತಿರುವ ‘45’ ಸಿನಿಮಾ ಡಿಸೆಂಬರ್ 25ರಂದು ರಿಲೀಸ್ ಆಗಲಿದೆ. ಟ್ರೇಲರ್ ಬಿಡುಗಡೆಗಾಗಿ ವಿದ್ಯಾಪೀಠ ವೃತ್ತದಲ್ಲಿ ವಿಶೇಷ ಈವೆಂಟ್ ನಡೆಯಲಿದೆ. ಅದೇ ಸಮಯದಲ್ಲಿ ಮೈಸೂರು, ಮಂಗಳೂರು, ಶಿವಮೊಗ್ಗ, ತುಮಕೂರು, ದಾವಣಗೆರೆ, ಹೊಸಪೇಟೆ ಹಾಗೂ ಹುಬ್ಬಳ್ಳಿಯಲ್ಲಿ ಕೂಡಾ ಈ ಕಾರ್ಯಕ್ರಮದ ಲೈವ್ ಪ್ರಸಾರ ಆಗಲಿದೆ.
ಪಾಸ್ ಪಡೆದ ಅಭಿಮಾನಿಗಳು ತಮ್ಮ ಜಿಲ್ಲೆಯ ಚಿತ್ರಮಂದಿರಕ್ಕೆ ಹೋಗಿ ಬೆಂಗಳೂರಿನಲ್ಲಿ ನಡೆಯುವ ಟ್ರೇಲರ್ ಬಿಡುಗಡೆ ಕಾರ್ಯಕ್ರಮದ ನೇರ ಪ್ರಸಾರವನ್ನು ನೋಡಬಹುದು. ಶಿವಣ್ಣ, ಉಪೇಂದ್ರ, ರಾಜ್ ಬಿ. ಶೆಟ್ಟಿ ಮಾತುಕತೆ ಕೂಡಾ ಲೈವ್‌ನಲ್ಲಿ ಜಿಲ್ಲೆಗಳ ಅಭಿಮಾನಿಗಳಿಗೆ ತಲುಪಲಿದೆ. ಭಾರತದಲ್ಲಿ ಇದೇ ಮೊದಲಬಾರಿ ಏಕಕಾಲಕ್ಕೆ 7 ಕಡೆಗಳಲ್ಲಿ ಟ್ರೇಲರ್ ಲಾಂಚ್ ಮಾಡುವ ಪ್ರಯೋಗ ಮಾಡಲಾಗುತ್ತಿದೆ ಎಂದು ಅರ್ಜುನ್ ಜನ್ಯ ಹೇಳಿದ್ದಾರೆ.
‘45’ ಸಿನಿಮಾ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದು, ಪ್ರಚಾರವೂ ಅದೇ ಮಟ್ಟದಲ್ಲಿ ನಡೆಯುತ್ತಿದೆ. ಈಗಾಗಲೇ ಆಫ್ರೋ ಟಪ್ಪಾಂಗ್ ಹಾಡು ಸೂಪರ್ ಹಿಟ್ ಆಗಿದೆ. ಟ್ರೇಲರ್ ಲಾಂಚ್ ಪ್ಲ್ಯಾನಿಂಗ್ ನೋಡಿದರೂ, ಸಿನಿಮಾಗೆ ಅಭಿಮಾನಿಗಳ ನಿರೀಕ್ಷೆ ಎಷ್ಟಿದೆ ಅನ್ನೋದು ಸ್ಪಷ್ಟವಾಗುತ್ತದೆ…
ವರದಿ : ಗಾಯತ್ರಿ ಗುಬ್ಬಿ

