ಬೆಂಗಳೂರು: ಈಗಾಗಲೇ ಐಐಟಿ ಕಾನ್ಪುರ್ ಹೇಳಿರುವಂತ ಮಾಹಿತಿ ಸುಳ್ಳಾಗಿಲ್ಲ. ಈಗ ಕೋವಿಡ್ 4ನೇ ಅಲೆ ಜೂನ್ ನಲ್ಲಿ ಆರಂಭಗೊಂಡು, ಸೆಪ್ಟೆಂಬರ್ -ಅಕ್ಟೋಬರ್ ನಲ್ಲಿ ಪೀಕ್ ಇರಬಹುದು ಎಂದು ಹೇಳಿದ್ದಾರೆ. ಹೀಗಾಗಿ ಕೊರೋನಾ 4ನೇ ಅಲೆಯನ್ನು ಎದುರಿಸಲು ಸರ್ಕಾರ ಸಿದ್ಧಗೊಂಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಈಗಾಗಲೇ IIT ಕಾನ್ಪುರ ಇಲ್ಲಿಯವರೆಗೆ ನಮಗೆ ಅಂಕಿಅಂಶಗಳು ಕೊಡುತ್ತಿದ್ದಾರೆ. ಈಗ ಕೂಡ ಅವರೇ ನಮಗೆ ರಿಪೋರ್ಟ್ ಕೊಡ್ತಿದ್ದಾರೆ. ಅವರ ರಿಪೋರ್ಟ್ ಪ್ರಕಾರ ಜೂನ್ ಅಂತ್ಯದಲ್ಲಿ ಕೋವಿಡ್ ಹೆಚ್ಚಾಗುವ ಸಾಧ್ಯತೆಯಿದೆ ಎಂಬ ರಿಪೋರ್ಟ್ ಕೊಟ್ಟಿದ್ದಾರೆ. ಒಂದು ತಿಂಗಳ ಮೊದಲೇ ಅಲ್ಪ ಪ್ರಮಾಣದಲ್ಲಿ ಪ್ರಾರಂಭ ಆಗಿದೆ. ಅವರು ಹೇಳಿದ ಪ್ರಕಾರ ಜೂನ್ ನಲ್ಲಿ ಫೀಕ್ ನಲ್ಲಿ ಹೋಗುತ್ತೆ. ಸೆಪ್ಟೆಂಬರ್ ಅಕ್ಟೋಬರ್ ಅವರೆಗೂ ಈ ಪೀಕ್ ಇರಬಹುದು ಎಂಬುದು ಅವರ ಅಂಕಿ ಅಂಶವಾಗಿದೆ. ಕಳೆದ ಮೂರು ಕೋವಿಡ್ ಅಲೆಗಳಲ್ಲಿ ಅವರ ವರದಿ ಸರಿಯಾಗಿದೆ. ಹೀಗಾಗಿ ಅವರ ವರದಿ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸರಿ ಹೊಂದುತ್ತದೆ ಎಂದರು.
ದಿನದಿಂದ ದಿನಕ್ಕೆ ಕೋವಿಡ್ ಹೆಚ್ಚಾಗುತ್ತಿದೆ. ಈ ಸಂಬಂಧ ಮೋದಿ ಎಲ್ಲಾ ರಾಜ್ಯದ ಸಿಎಂ ಜೊತೆಗೆ ಸಭೆ ಕರೆದಿದ್ದಾರೆ. ಎಲ್ಲಾ ರಾಜ್ಯದ ಸ್ಥಿತಿ ಗತಿ ಅವಲೋಕನದ ಮಾಡಲಿದ್ದಾರೆ. ಸಿದ್ದತೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಈಗಾಗಲೇ ಮೂರನೇ ಅಲೆ ಬಂದು ಹೋಗಿದೆ.. 3ನೇ ಅಲೆಯಲ್ಲಿ ಸಾವು ನೋವು ಹೆಚ್ಚಾಗಿ ಕಂಡು ಬಂದಿಲ್ಲ. ಲಸಿಕಾರಣದಿಂದ ಕೋವಿಡ್ ಅಷ್ಟೊಂದು ಹರಡಲಿಲ್ಲ. ಗರಿಷ್ಠ ಲಸಿಕೆ ನಮ್ಮ ಸರ್ಕಾರ ನೀಡಿದೆ. ನಮ್ಮ ರಾಜ್ಯದಲ್ಲಿ ಎರಡು ಡೋಸ್ 10 ಕೋಟಿಗೂ ಹೆಚ್ಚು ಲಸಿಕೆ ನೀಡಿದ್ದೇವೆ. ಲಸಿಕೆಯಿಂದ ಸಾವು ನೋವು ಸಂಭವಿಸಿಲ್ಲ ಎಂದರು.
ವ್ಯಾಕ್ಸಿನ್ ತೆಗೆದುಕೊಂಡರೆ ಕೋವಿಡ್ ಬರಲ್ಲ ಅಂತಲ್ಲ. ಸಾವು ನೋವಿನ ಪ್ರಮಾಣ ಕಡಿಮೆ ಇರುತ್ತೆ. ಮೂರನೇ ಡೋಸ್ ತೆಗೆದುಕೊಂಡವರ ಪ್ರಮಾಣ ಕಡಿಮೆ ಇದೆ. ಅಲೆ ಬರುವ ತನಕ ಕಾಯುವುದು ಬೇಡ. ಲಸಿಕೆ ಲಭ್ಯ ಇದ್ದಾಗ ತೆಗೆದುಕೊಳ್ಳಿ. ಪ್ರಾರಂಭದಲ್ಲಿ ಲಸಿಕೆ ಕಡಿಮೆ ಇದೆ ಎಂದು ಅಪಪ್ರಚಾರ ಮಾಡಿದ್ರು. ಲಸಿಕೆ ಏಳೆಂಟು ತಿಂಗಳಿಂದ ಸಾಕಷ್ಟು ಲಸಿಕೆ ಲಭ್ಯ ಇದೆ. ಕನಿಷ್ಠ ಜನಜಂಗುಳಿ ಇರುವ ಕಡೆ ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಿ ಎಂದರು.
ಒಳಾಂಗಣ ಹಾಗೂ ಜನರ ಗುಂಪು ಇರುವ ಕಡೆ ಮಾಸ್ಕ್ ಕಡ್ಡಾಯವಾಗಿ ಬಳಸಿ. 60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ಇದೆ. ಬರುವಂತ ದಿನಗಳಲ್ಲಿ ವರ್ಷಕ್ಕೆ ಒಂದು ಡೋಸ್ ಲಸಿಕೆ ನೀಡಬೇಕಾ ಎಂಬ ಚರ್ಚೆ ನಡೆಯುತ್ತಿದೆ ಎಂದರು.




