Thursday, November 27, 2025

Latest Posts

5.25 ಕೋಟಿ ವಿಮೆ ಹಣಕ್ಕಾಗಿ ಅನಾರೋಗ್ಯ ಪೀಡಿತ ವ್ಯಕ್ತಿ ಕೊಲೆ!

- Advertisement -

5.25 ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಅನಾರೋಗ್ಯ ಪೀಡಿತ ವ್ಯಕ್ತಿಯ ಬಲಿ ತೆಗೆದುಕೊಂಡಿರುವ ಕ್ರೂರ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಮಾಸ್ಟರ್ ಪ್ಲಾನ್‌ ಹಿಂದೆ ಗಂಗಾವತಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಚಾರ್ಯ ಸಹಿತ ಆರು ಜನರನ್ನು ಹೊಸಪೇಟೆ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಹೌದು 35 ವರ್ಷದ ಗಂಗಾಧರ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದ ಸಂದರ್ಭ ಆತನ ಹೆಸರಿನಲ್ಲಿ ವಿಮೆ ಕಂಪನಿಗಳಲ್ಲಿ 5.25 ಕೋಟಿ ರೂ. ಮೌಲ್ಯದ ಪಾಲಿಸಿಗಳನ್ನು ಮಾಡಲಾಗಿದೆ. ನಾಮಿನಿಯಾಗಿ ನಕಲಿ ಮದುವೆಯ ಮೂಲಕ ವಿಧವೆ ಮಹಿಳೆಯನ್ನು ಗುರುತಿಸಿ ಕೊಲೆ ಸಂಚು ರೂಪಿಸಲಾಗಿತ್ತು. ಪೊಲೀಸರು 24 ಗಂಟೆಗಳಲ್ಲಿ ಪ್ರಕರಣ ಭೇದಿಸಿ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮೂಲತಃ ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಜೀರಿಗನೂರು ಮೂಲದ ನಗರ ನಿವಾಸಿ 35 ವರ್ಷದ ಗಂಗಾಧರ ಕೊಲೆಯಾದವರು. ಕೊಪ್ಪಳ ಜಿಲ್ಲೆ ಹೊಸಲಿಂಗಾಪುರದ ರವಿ, ನಗರದ ಪಿ.ಅಜಯ್, ರಿಯಾಜ್, ಬಸವೇಶ್ವರ ಬಡಾವಣೆ ನಿವಾಸಿ ಯೋಗರಾಜ್‌ ಸಿಂಗ್‌, ಕೊಪ್ಪಳ ಜಿಲ್ಲೆ ಗಂಗಾವತಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಚಾರ್ಯ ಕೃಷ್ಣಪ್ಪ ಹಾಗೂ ಹುಲಿಗೆಮ್ಮ ಬಂಧಿತ ಆರೋಪಿಗಳಾಗಿದ್ದಾರೆ.

ಗಂಗಾಧರ ಅವರು ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ವಿಷಯ ಆರೋಪಿ ಯೋಗರಾಜ್‌ ಸಿಂಗ್‌ಗೆ ತಿಳಿದಿತ್ತು. ಸಂಚು ರೂಪಿಸುವಲ್ಲಿ ಮುಂದಿದ್ದ ಗಂಗಾವತಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಚಾರ್ಯ ಕೃಷ್ಣಪ್ಪ ಅವರಿಗೆ ಗಂಗಾಧರ ಅವರನ್ನು ಫೆಬ್ರವರಿಯಲ್ಲಿ ಪರಿಚಯಿಸಿದ್ದ. ಗಂಗಾಧರ ಐದಾರು ತಿಂಗಳಲ್ಲೇ ಸಾವನ್ನಪ್ಪಲಿದ್ದಾರೆ ಎಂದೇ ಆರೋಪಿಗಳು ನಂಬಿ ಈ ಸಂಚು ರೂಪಿಸಿದ್ದರು.

ಆರೋಪಿ ಕೃಷ್ಣಪ್ಪನೇ ನಗರದ ಆ್ಯಕ್ಸಿಸ್‌ ಬ್ಯಾಂಕ್‌ ಶಾಖೆಯಲ್ಲಿಗಂಗಾಧರ ಹೆಸರಲ್ಲಿ ಖಾತೆ ತೆರೆದಿದ್ದ. 6 ಬೇರೆ ಬೇರೆ ಕಂಪನಿಗಳಲ್ಲಿಅಂದಾಜು 5.25 ಕೋಟಿ ರೂ. ವಿಮೆ ಮಾಡಿಸಿದ್ದ. ವಿಮೆಗೆ ನಾಮಿನಿ ಬೇಕಾಗಿದ್ದರಿಂದ ವಿಧವೆ ಹುಲಿಗೆಮ್ಮ ಅವರನ್ನು ಪುಸಲಾಯಿಸಿ, ನಕಲಿ ಮದುವೆಗೆ ಒಪ್ಪಿಸಿದ್ದ. ಹುಲಿಗೆಮ್ಮ ಜತೆ ಗಂಗಾಧರ ಅವರಿಗೆ ನಕಲಿ ಮದುವೆ ನೋಂದಣಿಯನ್ನೂ ಮಾಡಿಸಿದ್ದಾರೆ.

ಗಂಗಾಧರ ಹೆಸರಲ್ಲಿ ಬೈಕ್‌ ಖರೀದಿಸಿದ್ದಾರೆ. ಈ ವಾಹನದ ಮೇಲೂ 15 ಲಕ್ಷ ರೂ. ವಿಮೆ ಮಾಡಿಸಿದ್ದರು. ಸೆ.27ರಂದು ಮನೆಯಿಂದ ಹೊರಗೆ ಬಂದಿದ್ದ ಗಂಗಾಧರ ಅವರನ್ನು ಪುಸಲಾಯಿಸಿ ಕಾರಿನಲ್ಲಿಕರೆದೊಯ್ದಿದ್ದಾರೆ. ನಗರ ಹೊರವಲಯದಲ್ಲಿಕತ್ತುಹಿಸುಕಿ ಹತ್ಯೆಮಾಡಿದ್ದಾರೆ. ನಂತರ ನಗರದ ಎಚ್‌.ಎಲ್ಸಿ. ಕಾಲುವೆ ಬಳಿ ಶವ ಬಿಸಾಕಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss