- Advertisement -
www.karnatakatv.net : ದುರ್ಗಾ ಮೂರ್ತಿಯ ವಿಸರ್ಜನೆಮಾಡುವ ವೇಳೆ 5 ಜನ ಭಕ್ತರು ನೀರುಪಾಲಾಗಿದ್ದಾರೆ.
ದಸರಾ ಹಬ್ಬದ ನಿಮಿತ್ಯ ಎಲ್ಲೆಡೆ ಸಂಭ್ರಮ ಸಡಗರ ಮನೆಮಾಡಿತ್ತು. ಹಾಗೇ ರಾಜಸ್ಥಾನದ ಧೋಲ್ಪುರ್ ಗೆ ದೇವಿಯ ಮೂರ್ತಿಯ ವಿಸರ್ಜನೆಗೆ ತೆರಳಿದ ಭಕ್ತರು ಆಯ ತಪ್ಪಿ ನೀರುಪಾಳಾಗಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಆಗ್ರಾ ಹಿರಿಯ ಪೊಲೀಸ ವರಿಷ್ಠಾಧಿಕಾರಿ ಮುನಿರಾಜ್, ಮೃತರು ಆಗ್ರಾ ಜಿಲ್ಲೆಯ ಭಾವನಾಪೂರದ ನಿವಾಸಿಗಳು ಎಂದು ತಿಳಿಸಿದ್ದಾರೆ. ಇನ್ನೂ ಶವಗಳನ್ನು ನೀರಿನಿಂದ ಹೊರತೆಗೆಯಲಾಗಿದೆ.
- Advertisement -