ಬಿಜೆಪಿ ವಿರುದ್ಧದ ಮತಗಳ್ಳತನ ಆರೋಪಕ್ಕೆ, ಕಾಂಗ್ರೆಸ್ ಪಕ್ಷ ದಾಖಲೆಗಳನ್ನು ರಿಲೀಸ್ ಮಾಡಿದೆ. ದೆಹಲಿಯಲ್ಲಿ ಸಂಸದ ರಾಹುಲ್ ಗಾಂಧಿ, ಸಾಕ್ಷಿ ಸಮೇತ ಪ್ರತೀ ವಿಚಾರವನ್ನೂ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಾಳೆ ಬೆಂಗಳೂರಿನಲ್ಲಿ ಮತಗಳ್ಳತನ ವಿರುದ್ಧದ ಹೋರಾಟ ನಡೀತಿದ್ದು, ಒಂದು ದಿನಕ್ಕೂ ಮುಂಚೆಯೇ ಸಾಕ್ಷಿ ಬಹಿರಂಗಪಡಿಸಿದ್ದಾರೆ.
ರಾಹುಲ್ ಪ್ರಕಾರ 5 ರೀತಿಯ ಮತಗಳ್ಳತನ ನಡೆದಿದೆಯಂತೆ.
5 ರೀತಿಯ ಮತಗಳ್ಳತನ
1) ನಕಲಿ ಮತದಾರರು – 11,965
2) ನಕಲಿ – ತಪ್ಪು ವಿಳಾಸ – 40,009
3) ಒಂದೇ ವಿಳಾಸದ ಹಲವು ಮತದಾರರು – 10,452
4) ಲೋಪವಿರುವ ಫೋಟೋಗಳು – 4,132
5) ಫಾರ್ಮ್ 6 ದುರ್ಬಳಕೆ – 33,692
ಹೀಗಂತ ಸಾಕ್ಷಿ ಸಮೇತ ಮತಗಳ್ಳತನವನ್ನು ಬಿಚ್ಚಿಟ್ಟಿದ್ದಾರೆ. ಒಂದೇ ಹೆಸರು, ಒಂದೇ ವಿಳಾಸ, ಒಂದೇ ಫೋಟೋ, ಹಲವು ಪೋಲಿಂಗ್ ಬೂತ್‌ಗಳಲ್ಲಿ ಇವೆ. ನಮ್ಮ ಬಳಿ 7 ಅಡಿ ಎತ್ತರದಷ್ಟು ಸಾಕ್ಷಿಗಳು ಇವೆ. ಇದರಲ್ಲಿ ಯಾವುದೇ ಸಂಶಯ ಇಲ್ಲ. ಹಲವು ಕ್ಷೇತ್ರಗಳಲ್ಲಿ ಇದೇ ರೀತಿ ಆಗಿದೆ.
ಮಹಾರಾಷ್ಟ್ರದಲ್ಲಿ 40 ಲಕ್ಷಕ್ಕೂ ಹೆಚ್ಚು ನಕಲಿ ಮತದಾರರು ಇದ್ದಾರೆ. 5 ವರ್ಷಗಳಲ್ಲಿ ಆಗದ್ದು, ಕೇವಲ 5 ತಿಂಗಳಲ್ಲಿ ಆಗಿದೆ. ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಗೂ ನಡುವೆ, 1 ಕೋಟಿಯಷ್ಟು ಹೊಸ ಮತದಾರರು ಹುಟ್ಟಿಕೊಂಡಿದ್ದಾರೆ.
ನಾವು ಚುನಾವಣಾ ಆಯೋಗದವರನ್ನೂ ಭೇಟಿ ಮಾಡಿದ್ದೆವು. ಈ ವಿಚಾರವನ್ನೂ ಹೇಳಿದ್ದೇವೆ. ಆದರೂ, ವೋಟರ್ ಲಿಸ್ಟ್ ಕೊಡಲು ಅಧಿಕಾರಿಗಳು ನಿರಾಕರಿಸಿದ್ರು. ಮತ್ತು ಮತದಾನದ ಸಿಸಿಟಿವಿ ದೃಶ್ಯ ಕೂಡ ಡಿಲೀಟ್ ಮಾಡುವುದಾಗಿಯೂ ಹೇಳಿದ್ರು. ಇದು ನಮಗೆ ಆಶ್ಚರ್ಯ ಅನ್ನಿಸಿತು.
ಬೆಳಗ್ಗೆಯಿಂದ ಸರಿಯಾಗೇ ನಡೆಯುತ್ತಿದ್ದ ಮತದಾನ, ಸಂಜೆ 5.30ರ ಬಳಿಕ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿತ್ತು. ಈ ಎರಡೂ ಸಂಗತಿಗಳಿಂದ ಸ್ಪಷ್ಟವಾಗಿ ಗೊತ್ತಾಗ್ತಿದೆ. ಚುನಾವಣಾ ಆಯೋಗ ಮಾಡಿರೋದು ಏನು..? ಬಿಜೆಪಿ ಹೇಗೆ ಮತಗಳ್ಳತನ ಮಾಡಿದೆ ಅನ್ನೋದು ಬಹಿರಂಗವಾಗಿದೆ. ಹೀಗಂತ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

