Saturday, July 27, 2024

Latest Posts

ಕೋವಿಡ್ -19 ವಿರುದ್ಧ ಶೇ.50ರಷ್ಟು ಮಕ್ಕಳು ಪ್ರತಿಕಾಯಗಳನ್ನು ಹೊಂದಿದ್ದಾರೆ- ಸಿರೋ ಸಮೀಕ್ಷಾ ವರದಿಯಿಂದ ಮಾಹಿತಿ

- Advertisement -

www.karnatakatv.net: ರಾಷ್ಟ್ರೀಯ- ಮುಂಬೈ: ಕೊವಿಡ್ 2ನೇ ಅಲೆ ದೇಶಾದ್ಯಂತ ವ್ಯಾಪಕವಾಗಿ ಹರಡುವ ಮೊದಲೇ, ಸೆರೋಲಾಜಿಕಲ್ ಸಮೀಕ್ಷೆಗಳು ಜನಸಂಖ್ಯೆ ನಡುವೆ ಕೊರೊನಾ ವೈರಸ್ ಹರಡುವ ಪ್ರವೃತ್ತಿಯ ಬಗ್ಗೆ ಅಧ್ಯಯನ ನಡೆಸಿತ್ತು. ಮುಂಬೈ ನಗರದ ಎರಡು ಆಸ್ಪತ್ರೆಗಳಲ್ಲಿ 2,000ಕ್ಕೂ ಹೆಚ್ಚು ಮಕ್ಕಳಲ್ಲಿ ಈ ಸಮೀಕ್ಷೆ ನಡೆಸಿದ್ರು. ಇದೀಗ, ತಜ್ಞರು ಮತ್ತು ಸಾರ್ವಜನಿಕರನ್ನು ಅಚ್ಚರಿಗೊಳಿಸುವ ಅಂಕಿ ಅಂಶಗಳನ್ನ ಹೊರಹಾಕಿದೆ. ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಮಕ್ಕಳಲ್ಲಿ ಶೇ.50ಕ್ಕಿಂತ ಹೆಚ್ಚು ಜನರು ಕೋವಿಡ್ ವಿರುದ್ಧ ಪ್ರತಿಕಾಯಗಳನ್ನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಮಕ್ಕಳ ಮೇಲೆ ಈ ಕಾಯಿಲೆ ತೀವ್ರವಾಗಿ ಪರಿಣಾಮ ಬೀರುವುದಿಲ್ಲ ಎಂದು ತಿಳಿದು ಬಂದಿದೆ.

- Advertisement -

Latest Posts

Don't Miss