Thursday, April 17, 2025

Latest Posts

BHOPAL : ಕಾರಿನಲ್ಲಿ 52 ಕೆಜಿ ಚಿನ್ನ 11 ಕೋಟಿ ಪತ್ತೆ

- Advertisement -

ಮಧ್ಯಪ್ರದೇಶದ ಮಂಡೋರಾ ಜಿಲ್ಲೆಯ ಮಿಂದೋರಿ ಕಾಡಿನ ನಿರ್ಜನ ಪ್ರದೇಶದಲ್ಲಿ ಕೇಜಿಗಟ್ಟಲೆ ಚಿನ್ನ ಪತ್ತೆಯಾಗಿದೆ. ಕಾಡಿನ ಮಧ್ಯೆ ನಿಂತಿದ್ದ ಇನ್ನೋವಾ ಕಾರಲ್ಲಿ ಬರೋಬ್ಬರಿ 40 ಕೋಟಿ ರು. ಮೌಲ್ಯದ 52 ಕೇಜಿ ಚಿನ್ನ ಮತ್ತು 11 ಕೋಟಿ ರು. ಪತ್ತೆಯಾಗಿದೆ. ಇದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಾರಸುದಾರರಿಲ್ಲದ ಕಾರಿನಲ್ಲಿ ಏಳೆಂಟು ಬ್ಯಾಗ್‌ಗಳಿರುವುದು ಖಚಿತ ಮಾಹಿತಿ ಸಿಕ್ಕ ಬೆನ್ನಲ್ಲೇ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದು ಹಣ ವಶಪಡಿಸಿಕೊಂಡಿದ್ದಾರೆ. ಈ ಚಿನ್ನ ನಗದು ಯಾರಿಗೆ ಸೇರಿದ್ದೂ ಎನ್ನುವುದು ಸ್ಪಷ್ಟವಾಗಿಲ್ಲ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

 

ಆದರೆ ಇದು ಹಿಂದೆ ಆರ್‌ಟಿಒ ಅಧಿಕಾರಿಯಾಗಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಸೌರಭ್‌ ಶರ್ಮಾ ಗೆ ಸೇರಿದ ಹಣ ಅಂತ ಕೆಲವು ಮೂಲಗಳು ಹೇಳಿವೆ. ಯಾಕಂದ್ರೆ ಹಣ ಪತ್ತೆಯಾಗಿರುವ ಇನ್ನೋವಾ ಕಾರು ಚಂದನ್ ಸಿಂಗ್ ಗೌರ್‌ ಅನ್ನೋ ಬಿಲ್ಡರ್‌ ಹೆಸರಿನಲ್ಲಿ ನೋಂದಣಿಯಾಗಿದೆ ಅಂತ ತಿಳಿದು ಬಂದಿದೆ.

ಇನ್ನು ಗುರುವಾರವಷ್ಟೇ ಸೌರಭ್ ಶರ್ಮಾ ಹಾಗೂ ಸಹಚರ ಚಂದನ್ ಸಿಂಗ್ ಗೌರ್‌ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ದಾಳಿ ನಡದಿತ್ತು. . ಶರ್ಮಾ ಮನೆಯಲ್ಲಿ ಈ ವೇಳೆ 2.5 ಕೋಟಿ ರು. ನಗದು, ಚಿನ್ನ, ಬೆಳ್ಳಿ ಆಭರಣಗಳು ಮತ್ತು ಆಸ್ತಿ ದಾಖಲೆಗಳು ಪತ್ತೆಯಾಗಿದ್ದವು. ಈ ಆಸ್ತಿಗಳ ಮೌಲ್ಯವೇ 3 ಕೋಟಿಗೂ ಅಧಿಕವಾಗಿತ್ತು. ಈಗ ಕಾರಲ್ಲಿ ಸಿಕ್ಕ ಹಣ ಮತ್ತು ಚಿನ್ನವೂ ಅವರದ್ದೇ ಎಂದು ಹೇಳಲಾಗಿದೆ. ಅಧಿಕಾರಿಗಳ ಕೈಗೆ ಸಿಗಬಾರದೆಂದು ಅವರು ಹಣ, ಚಿನ್ನವನ್ನು ಹೀಗೆ ಮುಚ್ಚಿಟ್ಟಿರಬಹುದು ಅಂತಲೂ ಊಹಿಸಲಾಗಿದೆ.

- Advertisement -

Latest Posts

Don't Miss