ರಾಜ್ಯದ ಸಣ್ಣ ವ್ಯಾಪಾರಿಗಳಿಗೆ ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಈ ಹಿನ್ನೆಲೆ ಬೇಕರಿ, ಕಾಂಡಿಮೆಂಟ್ಸ್, ಟೀ–ಕಾಫಿ ಅಂಗಡಿಗಳು, ಹಾಲು–ಹೂ ವ್ಯಾಪಾರಿಗಳು ಶಾಕ್ ಆಗಿದ್ದಾರೆ. ಈ ನೋಟಿಸ್‌ಗಳ ವಿರುದ್ಧ ವರ್ತಕರು ಒಗ್ಗೂಡಿ, ಜುಲೈ 25ರಂದು ರಾಜ್ಯಾದ್ಯಂತ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ.
ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆಯಿಂದ ರಾಜ್ಯಾದ್ಯಂತ ಸಣ್ಣ ವ್ಯಾಪಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಆಗಿದೆ. ಜುಲೈ 21ರೊಳಗೇ ಹಣ ಪಾವತಿಸದೇ ಇದ್ದರೆ, ಬ್ಯಾಂಕ್ ಅಕೌಂಟ್ ಸೀಜ್ ಮತ್ತು ಅಂಗಡಿ ಕ್ಲೋಸ್ ಮಾಡಲಾಗುತ್ತದೆ ಎಂದು ಅಧಿಕೃತ ಎಚ್ಚರಿಕೆ ನೀಡಲಾಗಿದೆ. ಲಕ್ಷಾಂತರ–ಕೋಟ್ಯಂತರ ರೂ. ತೆರಿಗೆ ಪಾವತಿಸಬೇಕೆಂದು ನೋಟಿಸ್ ನೀಡಿರೋದು ಭಯ ಸೃಷ್ಟಿಸಿದೆ.
ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಗಳು ನೋಟಿಸ್ ನೀಡುತ್ತಿದ್ದಂತೆ ಕಾಂಡಿಮೆಂಟ್ಸ್ ಮಾಲೀಕರು ಸಭೆ ನಡೆಸಿದ್ದಾರೆ. ಜುಲೈ 24ರವರೆಗೆ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದೆ. ಅಷ್ಟರೊಳಗೆ ಕಾಂಡಿಮೆಂಟ್ಸ್ ಮಾಲೀಕರಿಗೆ ನೀಡಿರುವ ನೋಟಿಸ್ ವಾಪಸ್ಸು ಪಡೆಯಬೇಕು, ಇಲ್ಲಾಂದ್ರೆ ಜುಲೈ- 25ರಂದು ಎಲ್ಲಾ ಕಾಂಡಿಮೆಂಟ್ಸ್, ಟೀ ಕಾಫಿ ಶಾಪ್ ಕ್ಲೋಸ್ ಮಾಡುವುದಾಗಿ ಹೇಳಿದೆ.
ತಳ್ಳೋ ಗಾಡಿಯಲ್ಲಿ ಹೂ ಮಾರುವ ವ್ಯಕ್ತಿಗೂ ತೆರಿಗೆ ಇಲಾಖೆ ಶೋಕಸ್ ನೋಟೀಸ್ ನೀಡಿದೆ. 52 ಲಕ್ಷ ತೆರಿಗೆ ಪಾವತಿಸುವಂತೆ ಕರ್ನಾಟಕ ಕರ್ಮಷಿಯಲ್ ಟ್ಯಾಕ್ಸ್ ನೋಟಿಸ್ ನೀಡಿದೆ. ನಂದಿನಿ ಬೂತ್ ಇಟ್ಟವನಿಗೂ ಅರ್ಧ ಕೋಟಿ ತೆರಿಗೆ ಪಾವತಿಸುವಂತೆ ಇಲಾಖೆ ನೋಟಿಸ್ ನೀಡಿದೆ.
ಇನ್ನು ಜುಲೈ- 23, 24 ರಂದು ಬೇಕರಿ, ಕಾಂಡಿಮೆಂಡ್ಸ್ ಸೇರಿದಂತೆ ಶಾಪ್ ಗಳಲ್ಲಿ ಹಾಲಿನ ಉತ್ಪನ್ನಗಳ ಮಾರಾಟವನ್ನೂ ಬಂದ್ ಮಾಡುವುದಾಗಿ ಹೇಳಿದೆ. ಬೆಂಗಳೂರಿನಲ್ಲಿ 66 ಸಾವಿರ ಕಾಂಡಿಮೆಂಡ್ಸ್, ಬೇಕರಿಗಳಿವೆ. ಆದ್ರೆ ಟ್ಯಾಕ್ಸ್ ನೋಟಿಸ್ ಹಿನ್ನೆಲೆ ಜುಲೈ 25 ರಂದು ಶಾಪ್ ಗಳು ಸಂಪೂರ್ಣ ಬಂದ್ ಆಗಲಿದೆ ಎನ್ನಲಾಗಿದೆ. ಹಲವು ವ್ಯಾಪಾರಿಗಳು ತಮ್ಮ ಹೆಂಡತಿ ಮಕ್ಕಳೊಂದಿಗೆ ಫ್ರೀಡಂ ಪಾರ್ಕ್‌ನಲ್ಲಿ ಬೆಳಿಗ್ಗೆಯಿಂದ ಪ್ರತಿಭಟನೆಗೆ ಪ್ಲಾನ್ ಮಾಡಿಕೊಂಡಿದ್ದಾರೆ.