Friday, July 11, 2025

Latest Posts

ಕೃಷಿ ವಿಶ್ವವಿದ್ಯಾಲಯದ 55ನೇ ಘಟಿಕೋತ್ಸವ..!

- Advertisement -

www.karnatakatv.net :ಬೆಂಗಳೂರು: ಜಿ.ಕೆ.ವಿ.ಕೆ ಕೃಷಿ ವಿಶ್ವವಿದ್ಯಾಲಯದ 55ನೇ ಘಟಿಕೋತ್ಸವ ಸಮಾರಂಭವನ್ನು ವಿವಿಯ  ಆವರಣದ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಸಭಾಂಗಣದಲ್ಲಿ ನಡೆಯಿತು.

2019-20 ನೇ ಸಾಲಿನಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ  55ನೇ ಘಟಿಕೋತ್ಸವದಲ್ಲಿ ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ವಿಷಯಗಳಲ್ಲಿ ಪದವಿ ಪ್ರಧಾನ ಮಾಡಲಾಯಿತು.  ಘಟಿಕೋತ್ಸವದಲ್ಲಿ  5 ವಿದ್ಯಾರ್ಥಿನಿಯರು ಹಾಗೂ 7 ವಿದ್ಯಾರ್ಥಿಗಳು ಕೃಷಿ ವಿಶ್ವ ವಿದ್ಯಾಲಯದ 12 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಇನ್ನು ಮಾಸ್ಟರ್ ಪದವಿಯಲ್ಲಿ 74 ಮಂದಿಗೆ ಚಿನ್ನದ ಪದಕ ನೀಡಲಾಯಿತು.  ಪ್ರಧಾನ ಮಾಡಲಾಗಿದೆ. ಹಾಗೂ ಸ್ನಾತಕ ಪದವಿಯಲ್ಲಿ ಒಟ್ಟು 55 ಚಿನ್ನದ ಪದಕವನ್ನು ಪ್ರಧಾನ ಮಾಡಲಾಗಿದೆ. 55ನೇ ಘಟಿಕೋತ್ಸವ ಸಮಾರಂಭದಲ್ಲಿ ಒಟ್ಟಾರೆಯಾಗಿ 150 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಈ ಕಾರ್ಯಕ್ರಮದಲ್ಲಿಕರ್ನಾಟಕದ ರಾಜ್ಯಪಾಲರು ಥಾವರ್ ಚಂದ್ ಗೆಹ್ಲೋಟ್, ಕೃಷಿ ಸಚಿವ  ಬಿ. ಸಿ. ಪಾಟೀಲ್, ಹಾಗೂ ವಿವಿಯ ಕುಲಪತಿ ಸೇರಿದಂತೆ ಮತ್ತಿತರರು  ಉಪಸ್ಥಿತರಿದ್ದರು.

ಕರ್ನಾಟಕ ಟಿವಿ- ಬೆಂಗಳೂರು

- Advertisement -

Latest Posts

Don't Miss