Tuesday, September 23, 2025

Latest Posts

ಮೈಸೂರಿನ ಸಡಗರ ದಸರಾ ದೀಪಾಲಂಕಾರಕ್ಕೆ 6 ಕೋಟಿ ಹಣ ಖರ್ಚು

- Advertisement -

ನಾಡಹಬ್ಬ ದಸರಾ ದರ್ಬಾರ್‌ ಕಣ್ತುಂಬಿಕೊಳ್ಳಲು ನಾಡೇ ಕಾಯ್ತಾ ಇದೆ. ಇನ್ನು ದಸರಾ ಮಹೋತ್ಸವ ಹೆಚ್ಚು ಆಕರ್ಷಣೆಯಾಗುವುದು ಮೈಸೂರು ನಗರದಲ್ಲಿ ಸಿಂಗಾರ ಮಾಡುವ ದೀಪಾಲಂಕಾರದಿಂದ. ಪ್ರತಿ ಬಾರಿಯು ಅನೇಕ ವಿಶೇಷತೆಗಳಿಂದ ಕೂಡಿರುವ ದಸರಾ ದೀಪಾಲಂಕಾರ ಈ ವರ್ಷವೂ ಅನೇಕ ವಿಶೇಷತೆಗಳಿಂದ ಕೂಡಿದೆ. ಈ ಬಾರಿಯ ದಸರಾದಲ್ಲಿ ಮೈಸೂರು ನಗರದಲ್ಲಿ ಎಷ್ಟು ಕಿ.ಮೀ ಹಾಗೂ ಎಷ್ಟು ವೃತ್ತಗಳಲ್ಲಿ ಬೆಳಕಿನ ಚಿತ್ತಾರ ಮೂಡಲಿದೆ.

ಈ ಬಾರಿಯ ದಸರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಪ್ರವಾಸಿಗರನ್ನು ಆಕರ್ಷಣೆ ಮಾಡುವುದಕ್ಕೆ ಅನೇಕ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ದಸರಾ ದೀಪಾಲಂಕಾರಕ್ಕೆ ಈ ಬಾರಿ ಸುಮಾರು 6 ಕೋಟಿ ಹಣವನ್ನು ಖರ್ಚು ಮಾಡುವುದಕ್ಕೆ ನಿರ್ಧಾರ ಮಾಡಿದೆ.

ಈ ಬಾರಿ ಮೈಸೂರು ನಗರದಲ್ಲಿ 136 ಕಿ.ಮೀ ಪ್ರಮುಖ ರಸ್ತೆ ಹಾಗೂ ಮೈಸೂರಿನ ಹೃದಯ ಭಾಗದಲ್ಲಿರುವ ಸುಮಾರು 118 ಪ್ರಮುಖ ವೃತ್ತಗಳಲ್ಲಿ ವಿಶೇಷ ದೀಪಾಲಂಕಾರ ಮಾಡುವುದಕ್ಕೆ ನಿರ್ಧಾರ ಮಾಡಲಾಗಿದೆ. ಈ ಬಾರಿಯ ದೀಪಾಲಂಕಾರಕ್ಕೆ 2.50 ಲಕ್ಷ ಯೂನಿಟ್ ವಿದ್ಯುತ್ ಬಳಕೆ ಮಾಡಲಾಗುವುದು ಎಂದು ಅಂದಾಜು ಕೂಡ ಮಾಡಲಾಗಿದೆ.

ಈ ಬಾರಿ ದಸರಾ ದೀಪಾಲಂಕಾರ ಸೊಬಗನ್ನು ಹೆಚ್ಚಿಸಲು ರಾಜ್ಯವಲ್ಲದೆ ಹೊರ ರಾಜ್ಯಗಳಿಂಧ ಅತ್ಯಾಕರ್ಷಕ ವಿದ್ಯುತ್‌ ಬಲ್ಪ್‌ಗಳನ್ನು ತರಿಸಲಾಗುತ್ತಿದೆ. ಹೊರ ರಾಜ್ಯದಿಂದ ತರಿಸುವ ಬಲ್ಪ್‌ಗಳು ಚಲಿಸುವಂತೆ ಭಾಸವಾಗುವುದರಿಂದ ಆಕೃತಿಗೆ ಜೀವ ಕಳೆ ಬಬಂದಂತೆ ಕಾಣಿಸುತ್ತದೆ. ಒಟ್ಟಿನಲ್ಲಿ ಈ ಬಾರಿ ದಸರಾ ಮಹೋತ್ಸವದಲ್ಲಿ ವಿದ್ಯುತ್‌ ದೀಪಾಲಂಕಾರ ಹೆಚ್ಚು ವಿಜೃಂಭಣೆಯಿಂದ ಜನರನ್ನು ಆಕರ್ಷಿಸುವುದಂತು ಸತ್ಯ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss