BREAKING NEWS: ಕೋರ್ಟ್ ಆದೇಶ ಧಿಕ್ಕರಿಸಿ ಹಿಜಾಬ್ ಧರಿಸಿಯೇ ಕಾಲೇಜಿಗೆ ಬಂದ 6 ವಿದ್ಯಾರ್ಥಿಯರು ಅಮಾನತು

ದಕ್ಷಿಣ ಕನ್ನಡ: ಕೋರ್ಟ್ ಆದೇಶ ಮೀರಿ ಹಿಜಾಬ್ ಧರಿಸಿಯೇ ಕಾಲೇಜಿಗೆ ಆಗಮಿಸುತ್ತಿದ್ದಂತ 6 ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತಗೊಳಿಸಿರುವ ಘಟನೆ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ, ಶಾಲೆಯ ಮುಖ್ಯಸ್ಥರು, ಉಪನ್ಯಾಸಕರು ಸೂಚಿಸಿದ್ರೂ ಹಿಜಾಬ್ ಧರಿಸಿಯೇ ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸುತ್ತಿದ್ದರು. ಕೋರ್ಟ್ ಆದೇಶವಿದೆ, ಸಮವಸ್ತ್ರ ಕಡ್ಡಾಯವೆಂದ್ರೇ, ಅದಕ್ಕೆ ಡೋಂಟ್ ಕೇರ್ ಎನ್ನುವಂತೆ 6 ವಿದ್ಯಾರ್ಥಿನಿಯರು ನಡೆದುಕೊಂಡಿದ್ದರು.

ಈ ಹಿನ್ನಲೆಯಲ್ಲಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಸಭೆ ನಡೆಸಿ, ಕೋರ್ಟ್ ಆದೇಶ ಮೀರಿದಂತ 6 ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತುಗೊಳೋ ನಿರ್ಧಾರವನ್ನು ಕೈಗೊಂಡಿದ್ದಾರೆ. ಅದರಂತೆ 6 ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತುಗೊಳಿಸಿರೋದಾಗಿ ಪ್ರಕಟಿಸಿದ್ದಾರೆ.

About The Author