Sunday, December 22, 2024

Latest Posts

ರೈತರ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ 60 ಕೆಜಿ ಗಾಂಜಾ ಪೊಲೀಸ್ ವಶ..!

- Advertisement -

www.karnatakatv.net: ಕುಂದಗೋಳ : ತಾಲೂಕಿನ ಬು.ಕೊಪ್ಪ ಗ್ರಾಮದಲ್ಲಿ ಅಕ್ರಮವಾಗಿ ಮೂವರು ಜನ ರೈತರು ತಮ್ಮ ಹೊಲದಲ್ಲಿ ಬೆಳೆದಿದ್ದ ಗಾಂಜಾ ಬೆಳೆಯನ್ನು ಗುಡಗೇರಿ ಪೊಲೀಸ್ ಠಾಣಾ ಅಧಿಕಾರಿಗಳು ಸೂಕ್ತ ಕಾರ್ಯಾಚರಣೆ ನಡೆಸಿ ಗಾಂಜಾ ಬೆಳೆ ವಶಪಡಿಸಿಕೊಂಡು ರೈತರನ್ನು ಬಂಧಿಸಿದ್ದಾರೆ.

ಮಾಲತೇಶ್ ನಿಂಗಪ್ಪ ಕಿತ್ತೂರ ಎಂಬುವವರ ಹೊಲದಲ್ಲಿ 31 ಕೆಜಿ ಗಾಂಜಾ ಬೆಳೆ, ರುದ್ರಪ್ಪ ಅಡಿವೆಪ್ಪ ಪೂಜಾರ ಹೊಲದಲ್ಲಿ 20 ಕೆಜಿ ಗಾಂಜಾ ಬೆಳೆ, ನಿಂಗಪ್ಪ ಕುಬೇರಪ್ಪ ಕರಿಕೆಣ್ಣನವರ ಹೊಲದಲ್ಲಿ 8 ಕೆಜಿ 30 ಗ್ರಾಂ ಗಾಂಜಾ ಬೆಳೆಯನ್ನು ವಶಪಡಿಸಿಕೊಳ್ಳಲಾಗಿದ್ದು ಗುಡಗೇರಿ ಪಿಎಸ್ಐ ಸವಿತಾ ಮುನ್ಯಾಳ ನೇತೃತ್ವದಲ್ಲಿ ಎಎಸ್ಐ ಮಠಪತಿ ಪಾಯಣ್ಣನವರ, ಎಂ.ಸಿ.ಸಾಲಿಮಠ, ಸಿಬ್ಬಂದಿ ಸದ್ದಾಂ ತಲ್ಲೂರು, ಎಸ್.ಎಮ್‌.ಹಳ್ಳದ, ಬಸನಗೌಡ ಪಾಟೀಲ್, ಗಾಯತ್ರಿ ಜೋಗಿಹಳ್ಳಿ ಭಾಗಿಯಾಗಿದ್ದರು. ಪ್ರಕರಣದ ಬಳಿಕ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣದ ಕುರಿತಂತೆ ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಕರ್ನಾಟಕ ಟಿವಿ- ಹುಬ್ಬಳ್ಳಿ

- Advertisement -

Latest Posts

Don't Miss