ಮಂಡ್ಯ: ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಕಳೆದ ಜೂನ್ 1ರಿಂದ ಆಗಸ್ಟ್ 4ರವರೆಗೆ 299 ಮನೆಗಳು ಸಂಪೂರ್ಣ ಹಾನಿಗೊಂಡಿದ್ದರೇ, 64 ಜನರು ವರುಣನ ಆರ್ಭಟಕ್ಕೆ ಬಲಿಯಾಗಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಇಂದು ಜಿಲ್ಲೆಯಲ್ಲಿ ಮಳೆಯಿಂದ ಉಂಟಾದಂತ ಹಾನಿಯನ್ನು ಪರಿಶೀಲಿಸಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯದಲ್ಲಿ ಮಳೆಯಿಂದಾಗಿ 14 ಜಿಲ್ಲೆಗಳ ಜನರು ಭಾದಿತರಾಗಿದ್ದಾರೆ. ಜೂನ್ 1ರಿಂದ ಆಗಸ್ಟ್ 4ರ ಇಲ್ಲಿಯವರೆಗೆ 64 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
ಇನ್ನೂ 608 ಮನೆಗಳು ಸಂಪೂರ್ಣ ಹಾನಿಯಾದ್ರೇ, 2450 ಮನೆಗಳು ಭಾಗಶಹ ಹಾನಿಗೊಂಡಿದ್ದಾವೆ. ನೆರೆಯಲ್ಲಿ ಸಿಲುಕಿದ್ದಂತ 8057 ಜನರನ್ನು ರಕ್ಷಿಸಲಾಗಿದೆ. ನೆರೆ ಸಂತ್ರಸ್ತರಿಗಾಗಿ 6933 ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.




