Monday, July 22, 2024

Latest Posts

ಹಜ್ ಯಾತ್ರೆಗೆ ತೆರಳಿದ್ದ 68 ಭಾರತೀಯರ ಸಾವು

- Advertisement -

International News: ಹಜ್ ಯಾತ್ರೆಗೆಂದು ಸೌದಿ ಅರೇಬಿಯಾಗೆ ತೆರಳಿದ್ದ 68 ಭಾರತೀಯರು ಸಾವನ್ನಪ್ಪಿದ್ದಾರೆ. ಮೆಕ್ಕಾದಲ್ಲಿ ಉಂಟಾದ ಉಷ್ಣ ವಾತಾವರಣದ ಪರಿಣಾಮ 600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಅದರಲ್ಲಿ 68 ಭಾರತೀಯರಿದ್ದರು.

ಇನ್ನು ಮೃತಪಟ್ಟವರೆಲ್ಲ ವೃದ್ಧರು, ರೋಗಿಗಳು, ಅಶಕ್ತರು ಅಂತಾ ಹೇಳಲಾಗಿದೆ. ಶಾಖ ತಡೆಯಲಾಗಿದೆ ಈ ಸಾವು ಸಂಭವಿಸಿದೆ. ಭಾರತ, ಇಂಡೋನೆಷಿಯಾ, ಇರಾನ್, ಇರಾಕ್ ಸೇರಿ ಹಲವು ರಾಷ್ಟ್ರದ ಜನ ಸಾವನ್ನಪ್ಪಿದ್ದಾರೆ.

ಮೆಕ್ಕಾ ಮುಸ್ಲಿಂರ ಪವಿತ್ರ ಸ್ಥಳವಾಗಿರುವ ಕಾರಣ, ಲಕ್ಷಾಂತರ ಮುಸ್ಲಿಂಮರುಪ್ರತೀ ವರ್ಷ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಮುಸ್ಲಿಂರಲ್ಲಿ ಜೀವನದಲ್ಲಿ ಒಮ್ಮೆಯಾದರೂ ಮೆಕ್ಕಾಗೆ ಹೋದರೆ, ಮುಕ್ತಿ ಸಿಗುತ್ತದೆ ಅನ್ನೋ ನಂಬಿಕೆ ಇದೆ. ಇನ್ನು ಪ್ರತೀ ವರ್ಷ ಈ ಸ್ಥಳದಲ್ಲಿ ಶಾಖದಿಂದ ಹಲವರು ಸಾವನ್ನಪ್ಪುತ್ತಾರೆ. 2015ರಲ್ಲಿ ಕಾಲ್ತುಳಿತ ಆದಾಗ, 2400ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು.

- Advertisement -

Latest Posts

Don't Miss