- Advertisement -
ಉತ್ತರ ಪ್ರದೇಶದ ಜಿಲ್ಲಾಧಿಕಾರಿಯೊಬ್ಬರ ಮನೆಯ ಹಸುವಿಗೆ ಚಿಕಿತ್ಸೆ ಕೊಡಿಸಲು ನಿಯೋಜನೆಯಾಗಿರುವುದು ಒಬ್ಬ ವೈದ್ಯರಲ್ಲ, ಬದಲಾಗಿ ಏಳು ಪಶುವೈದ್ಯರು.
ಹೌದು ಫತೇಪುರದ ಜಿಲ್ಲಾಧಿಕಾರಿ ಅನುಪಮಾ ದುಬೆ ಅವರ ಮನೆಯ ಹಸುವಿಗೆ ಚಿಕಿತ್ಸೆಗೆಂದು ಮುಖ್ಯ ಪಶುವೈದ್ಯಧಾಕಾರಿ ಡಾ.ಎಸ್.ಕೆ.ತಿವಾರಿ ಅವರು ಏಳು ಪಶು ವೈದ್ಯರನ್ನು ನಿಯೋಜಿಸಿರುವ ಪ್ರಕಟಣೆಯೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅದರ ಪ್ರಕಾರ ವಾರದ ಪ್ರತಿ ದಿನ ಎರಡು ಬಾರಿ ಹಸುವಿನ ಪರೀಕ್ಷೆ ನಡೆಸಿ, ಅದರ ವರದಿಯನ್ನು ಮುಖ್ಯ ಪಶುವೈದ್ಯಾಧಿಕಾರಿಗೆ ಸಲ್ಲಿಸುಲು ಸೂಚಿಸಲಾಗಿದೆ.
ಇದಕ್ಕೆ ಉತ್ತರ ಪ್ರದೇಶದ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದು, ನಮ್ಮ ಮನೆಯಲ್ಲಿ ಹಸುವೇ ಇಲ್ಲ. ಇದು ನನ್ನ ಹೆಸರನ್ನು ಹಾಳು ಮಾಡಲೆಂದು ಇಂತಹ ಪ್ರಕಟಣೆಯನ್ನು ಯಾರೋ ಸೃಷ್ಟಿಸಿದ್ದಾರೆ ಎಂದು ಹೇಳಿದ್ದಾರೆ.
- Advertisement -