73 ಜಾತಿಗಳನ್ನು ಗುರುತಿಸಿ ಮೀಸಲಾತಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇವೆ. ಜೊತೆಗೆ ಅದೇ ರೀತಿ ದೇವರಾಜು ಅರಸು ಪೀಠಕ್ಕೆ ಅನುದಾನವನ್ನು ಸಹ ಕೊಡುತ್ತೇವೆ ಎಂದು ಬೆಂಗಳೂರಿನಲ್ಲಿ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಕೆಯಿಂದ ಸನ್ಮಾನ ಮಾಡಲಾಯಿತು, ಈ ವೇಳೆ ಮಾತನಾಡಿದ ಅವರು ರಾಜ್ಯದಲ್ಲಿ ಮೀಸಲಾತಿ ತೆಗೆದುಕೊಳ್ಳದ ಬಡವರು ಹಲವಾರು ಜನರಿದ್ದಾರೆ. ಈಗಾಗಿ ನಾನು 73 ಜಾತಿಗಳನ್ನು ಗುರುತಿಸಿ ಯಾರಿಗೂ ಅನ್ಯಾಯವಾಗದಂತೆ ಎಲ್ಲರನ್ನು ಗಮನಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇವೆಂದು ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗದ ಮೀಸಲಾತಿ ವಿಚಾರವಾಗಿ 15 ದಿನಗಳಲ್ಲಿ ಸಭೆ ಕರೆದು ಚರ್ಚೆ ಮಾಡುತ್ತೇವೆಂದು, ಕೋಟಾ ಶ್ರೀನಿವಾಸ ಪೂಜಾರಿಯವರು ಮಾಹಿತಿಯನ್ನು ನೀಡಿದ್ದಾರೆ.
ಹಿಂದುಳಿದ ಪ್ರಸ್ತಾಪ ನನಗೆ ಸಿಕ್ಕಿದೆ, ಬಲಾಡ್ಯ ಸಮುದಾಯಕ್ಕೆ ಅಹವಾಲನ್ನು ಕೊಡಲು ಅವಕಾಶವಿದೆ. ಯಾರಿಗೂ ಅನ್ಯಾಯವಾಗದಂತೆ ಸರ್ಕಾರ ತೀರ್ಮಾನ ಮಾಡಿದೆ.