Thursday, April 17, 2025

Latest Posts

ಬರ್ತ್‌ಡೇ ಪಾರ್ಟಿಯಲ್ಲಿ ನೃತ್ಯ ಮಾಡಲಿಲ್ಲವೆಂದು ಅಮಾನುಷವಾಗಿ ನಡೆದುಕೊಂಡ 8 ಮಂದಿ ಬಂಧನ

- Advertisement -

Uttar Pradesh News: ಬರ್ತ್‌ಡೇ ಪಾರ್ಟಿಯಲ್ಲಿ ಇಬ್ಬರು ನೃತ್ಯಗಾರ್ತಿಯರು ನೃತ್ಯ ಮಾಡಲಿಲ್ಲವೆಂದು, 8 ಯುವಕರು ಗ್ಯಾಂಗ್‌ರೇಪ್ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಉತ್ತರಪ್ರದೇಶದ ಖುಷಿನಗರದಲ್ಲಿ ಈ ಘಟನೆ ನಡೆದಿದ್ದು, ಆರ್ಕೇಸ್ಟ್ರಾ ನಡೆಯುತ್ತಿದ್ದಾಗ, ಅಲ್ಲಿ ನೃತ್ಯ ಮಾಡುತ್ತಿದ್ದ ನೃತ್ಯಗಾರ್ತಿಯರ ಹಣೆಗೆ ಬಂದೂಕು ಇಟ್ಟು ಹೆದರಿಸಿ, ಓರ್ವ ಆರೋಪಿಯ ಮನೆಗೆ ಕರೆದೊಯ್ಯಲಾಗಿದೆ. ಅಲ್ಲಿ ಓರ್ವ ಆರೋಪಿಯ ಬರ್ತ್‌ಡೇ ಪಾಾರ್ಟಿ ನಡೆಯುತ್ತಿದ್ದು, ಆ ಪಾರ್ಟಿಯಲ್ಲಿ ಇಬ್ಬರು ನೃತ್ಯಗಾರ್ತಿಯರು ನೃತ್ಯ ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ಆದರೆ ತಾವು ನೃತ್ಯ ಮಾಡುವುದಿಲ್ಲವೆಂದು ಹೇಳಿದಾಗ, 8 ಜನರು ಸೇರಿ ಇಬ್ಬರ ಮೇಲೆ ಗ್ಯಾಂಗ್ ರೇಪ್ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿ ಈ ದುಷ್ಕೃತ್ಯವೆಸಗಿದ್ದ ಆರೋಪಿಗಳನ್ನು, ಪೊಲೀಸರು ಬಂಧಿಸಿದ್ದು, ಸಂತ್ರಸ್ತೆಯರಿಗೆ ಚಿಕಿತ್ಸೆ ಕೊಡಿಸಲಾಗಿದೆ.

ಆರೋಪಿಗಳನ್ನು ಹಿಡಿಯುವಾಗ, ಇಬ್ಬರ ಕಾಲಿಗೆ ಗುಂಡು ತಗುಲಿದ್ದು, ಇಬ್ಬರಿಗೂ ಚಿಕಿತ್ಸೆ ಕೊಡಿಸಿ, ಜೈಲಿಗೆ ಹಾಕಲಾಗಿದೆ. ಅಪರಾಧಿಗಳಿಂದ ಅಪರಾಧ ಮಾಡಲು ಬಳಸಿದ್ದ ಎರಡು ಎಸ್‌ಯುವಿ ಕಾರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಬಳಿಕ ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಾಗಿದೆ. ಎಲ್ಲಾ ಆರೋಪಿಗಳು 30 ವರ್ಷ ವಯಸ್ಸಿಗಿಂತ ಚಿಕ್ಕವರಾಗಿದ್ದಾರೆ.

- Advertisement -

Latest Posts

Don't Miss