Friday, December 5, 2025

Latest Posts

80 ಲಕ್ಷ ದರೋಡೆ ಬಯಲು! 6 ಗಂಟೆಯಲ್ಲಿ ಕಳ್ಳನ ಬಂಧನ

- Advertisement -

ಗದಗ ನಗರದಲ್ಲಿ ನಡೆದ ಜ್ಯುವೆಲರಿ ಶಾಪ್ ಕಳ್ಳತನ ಪ್ರಕರಣದಲ್ಲಿ, ಜಿಲ್ಲಾ ಪೊಲೀಸರು ಕೇವಲ ಆರು ಗಂಟೆಗಳಲ್ಲೇ ಅಂತರಾಜ್ಯ ಕಳ್ಳನನ್ನು ಬಂಧಿಸಿ ವೇಗದ ತನಿಖೆಯ ಮಾದರಿ ಪ್ರದರ್ಶಿಸಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ ಪೊಲೀಸರ ಸಹಕಾರದಿಂದ, ಗುಜರಾತ್ ಮೂಲದ ಮೊಹಮ್ಮದ್ ಹುಸೇನ್ ಸಿದ್ದಿಕಿ ಎಂಬ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು.

ನಗರದ ಶಾಂತದುರ್ಗಾ ಜ್ಯುವೆಲರಿಯಲ್ಲಿ ನಡೆದ ಈ ದರೋಡೆಗೆ ಆರೋಪಿ ಪಕ್ಕದ ಲಾಡ್ಜ್‌ನಲ್ಲೇ ತಂಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾನೆ. ಅಂಗಡಿಯ ಮೇಲ್ಭಾಗದ ಕಬ್ಬಿಣದ ಗ್ರಿಲ್ ಕಟ್ ಮಾಡಿ ಒಳನುಗ್ಗಿದ ತನಿಖಾ ತಜ್ಞನಂತೆ ಕಾರ್ಯನಿರ್ವಹಿಸಿದ ಕಳ್ಳ, ಬೆಳ್ಳಿ ಆಭರಣ, ಚಿನ್ನ ಮತ್ತು ನಗದು ಸೇರಿ ಸುಮಾರು ₹80 ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿದ್ದಾನೆ.

ಕಳ್ಳತನದ ಬಳಿಕ ಗದಗ ಹೊಸ ಬಸ್ ನಿಲ್ದಾಣಕ್ಕೆ ತೆರಳಿದ ಆರೋಪಿ, ನಂದಿನಿ ಪಾರ್ಲರ್‌ನಲ್ಲಿ ಹಾಲು ಕುಡಿದು ಸಾಮಾನ್ಯ ಪ್ರಯಾಣಿಕನಂತೆ ಬಸ್ ಏರಿದ್ದಾನೆ. ಸಾರಿಗೆ ಬಸ್ ಕಂಡಕ್ಟರ್ ನೀಡಿದ ಪ್ರಮುಖ ಮಾಹಿತಿ ಕಳ್ಳನ ಪ್ರಯಾಣವನ್ನು ಖಚಿತಪಡಿಸಿತು. ಈ ಮಾಹಿತಿಯನ್ನು ಗದಗ ಎಸ್ಪಿ ರೋಹನ್ ಕೊಲ್ಲಾಪುರ ಎಸ್ಪಿಗೆ ಹಂಚಿಕೊಂಡಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಮಹಾರಾಷ್ಟ್ರ ಪೊಲೀಸರು ಆರೋಪಿ ಅವರನ್ನು ಹಿಡಿದು ಗದಗ ಪೊಲೀಸರಿಗೆ ಒಪ್ಪಿಸಿದರು. ಗದಗ ಪೊಲೀಸರು ಕದ್ದ ಆಭರಣ ಮತ್ತು ನಗದನ್ನು ಸಂಪೂರ್ಣವಾಗಿ ವಶಕ್ಕೆ ಪಡೆದು, ಪ್ರಕರಣವನ್ನು ಯಶಸ್ವಿಯಾಗಿ ಬಗೆಹರಿಸಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss