Tuesday, October 14, 2025

Latest Posts

8 ಜೀವಂತ ಕಪ್ಪೆ ನುಂಗಿದ 82 ರ ವೃದ್ಧೆ – ಕಪ್ಪೆ ತಿಂದರೆ ಈ ನೋವು ಕಡಿಮೆಯಾಗತ್ತೆ!?

- Advertisement -

ಬೆನ್ನಿನ ನೋವನ್ನು ನಿವಾರಿಸಿಕೊಳ್ಳಲು ಚೀನಾದ 82 ವರ್ಷದ ವೃದ್ಧೆ ಜೀವಂತ ಕಪ್ಪೆಗಳನ್ನು ನುಂಗಿದ ವಿಚಿತ್ರ ಘಟನೆ ನಡೆದಿದೆ. ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಪ್ಪೆಗಳನ್ನು ನುಂಗಿದ ನಂತರ ಮಹಿಳೆಗೆ ತೀವ್ರ ಅಸ್ವಸ್ಥತೆ ಉಂಟಾಗಿ, ತುರ್ತು ಚಿಕಿತ್ಸೆಗೆ ಒಳಪಡುವಂತಾಗಿತ್ತು. ಸಾಮಾನ್ಯವಾಗಿ ವಯಸ್ಸಾದಂತೆ ಆರೋಗ್ಯ ಸಮಸ್ಯೆಳು ಕೂಡ ಹೆಚ್ಚಾಗತ್ತೆ.

ಚೀನಾದ 82 ವರ್ಷದ ಜಾಂಗ್ ಎಂಬ ಮಹಿಳೆಗೆ ಕೂಡ ವಿಪರೀತ ಬೆನ್ನು ನೋವಿನ ಸಮಸ್ಯೆ ಇತ್ತು. ಅದನ್ನು ಗುಣಪಡಿಸಿಕೊಳ್ಳಲು 8 ಜೀವಂತ ಕಪ್ಪೆಗಳನ್ನು ನುಂಗಿರುವ ಘಟನೆ ನಡೆದಿದೆ. ಮಹಿಳೆಗೆ ಸೆಪ್ಟೆಂಬರ್ ಆರಂಭದಲ್ಲಿ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿತ್ತು, ಅವರನ್ನು ಝೆಜಿಯಾಂಗ್ ಪ್ರಾಂತ್ಯದ ಹ್ಯಾಂಗ್​ಝೌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ತಪಾಸಣೆಯ ನಂತರ, ಅವರ ಜೀರ್ಣಾಂಗ ವ್ಯವಸ್ಥೆಗೆ ಗಂಭೀರ ಹಾನಿಯಾಗಿದೆ ಎಂಬುದು ದೃಢಪಟ್ಟಿದೆ.

ಜಾಂಗ್ ಅವರ ಮಗನನ್ನು ವಿಚಾರಿಸಿದಾಗ ತನ್ನ ತಾಯಿ 8 ಕಪ್ಪೆಗಳನ್ನು ನುಂಗಿದ್ದಳು ಎಂದು ಹೇಳಿದಾಗ ಒಮ್ಮೆ ವೈದ್ಯರು ಬೆಚ್ಚಿ ಬಿದ್ದಿದ್ದಾರೆ. ಈಗ ತೀವ್ರವಾದ ನೋವು ಅವಳಿಗೆ ನಡೆಯಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಜಾಂಗ್ ಸ್ವಲ್ಪ ಸಮಯದಿಂದ ಹರ್ನಿಯೇಟೆಡ್ ಡಿಸ್ಕ್ ಸಮಸ್ಯೆಯಿಂದ ಬಳಲುತ್ತಿದ್ದಳು. ಜೀವಂತ ಕಪ್ಪೆಗಳನ್ನು ತಿನ್ನುವುದರಿಂದ ಅವಳ ನೋವು ಕಡಿಮೆಯಾಗುತ್ತದೆ ಎಂದು ಯಾರೋ ಹೇಳಿದ್ದರು. ಆಕೆ ತನ್ನ ಮಗನಿಗೆ ಕಾರಣ ವಿವರಿಸದೆ ತನಗೆ ಕಪ್ಪೆ ತಂದುಕೊಡು ಎಂದು ಕೇಳಿದ್ದಳು.

ಆಕೆಯ ಕುಟುಂಬದವರು ಕಪ್ಪೆಗಳನ್ನು ಹಿಡಿದು ತಂದುಕೊಟ್ಟರು. ಜಾಂಗ್ ಮೊದಲ ದಿನದಲ್ಲಿ ಮೂರು ಕಪ್ಪೆಗಳನ್ನು ನುಂಗಿದ್ದಾರೆ. ಮರುದಿನ ಐದು ಕಪ್ಪೆಗಳನ್ನು ನುಂಗಿದ್ದಾರೆ. ಈ ಕಪ್ಪೆಗಳು ವ್ಯಕ್ತಿಯ ಕೈಗಂಟು ಗಾತ್ರಕ್ಕಿಂತ ಸ್ವಲ್ಪ ಚಿಕ್ಕದಾಗಿದ್ದವು ಎಂಬ ಮಾಹಿತಿ ಲಭಿಸಿದೆ. ಮೊದಲು ಹೊಟ್ಟೆಯಲ್ಲಿ ಗಡ್ಡೆ ಏನಾದರೂ ಆಗಿದೆಯೇ ಎಂಬುದನ್ನು ಪರೀಕ್ಷಿಸಿದ್ದಾರೆ.ಆದ್ರೆ ಯಾವುದೇ ಗಡ್ಡೆ ಇರಲಿಲ್ಲ. ಬಳಿಕ ಕಪ್ಪೆಗಳನ್ನು ನುಂಗಿದ್ದರಿಂದ ರೋಗಿಯ ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗಿದೆ ಎಂಬುದು ತಿಳಿದುಬಂದಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss