ಈ ವಾರ ಕನ್ನಡದಲ್ಲಿ 9 ಸಿನಿಮಾಗಳು ರಿಲೀಸ್ ಆಗುತ್ತಿವೆ! ಹೌದು, ಒಂದು ರೀ-ರಿಲೀಸ್ ಸೇರಿ ಕನ್ನಡದಲ್ಲೇ 9 ಚಿತ್ರಗಳು ಬಿಡುಗಡೆ ಆಗುತ್ತಿವೆ.
ಹೊಂದಿಸಿ ಬರೆಯಿರಿ
ಪ್ರವೀಣ್ ತೇಜ್, ಸಂಯುಕ್ತಾ ಹೊರನಾಡು, ಭಾವನಾ ರಾವ್, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹದೇವ್ ಮೊದಲಾದವರು ನಟಿಸಿರುವ ‘ಹೊಂದಿಸಿ ಬರೆಯಿರಿ’ ಸಿನಿಮಾ ಶುಕ್ರವಾರ ತೆರೆಗೆ ಬರುತ್ತಿದೆ. ರಾಮೇನಹಳ್ಳಿ ಜಗನ್ನಾಥ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಜೋ ಕೋಸ್ಟಾ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ರೂಪಾಯಿ
ವಿಜಯ್ ಜಗದಲ್, ಕೃಷಿ ತಾಪಂಡ, ಚಂದನಾ ರಾಘವೇಂದ್ರ ಮೊದಲಾದವರ ನಟನೆಯ ‘ರೂಪಾಯಿ’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ವಿಜಯ್ ಜಗದಲ್ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಡಿಸೆಂಬರ್ 24
ಅಪ್ಪು ಬಡಿಗೇರ್, ರವಿ ಕೆಆರ್ ಪೇಟೆ, ರಘು ಶೆಟ್ಟಿ ಮೊದಲಾದವರು ನಟಿಸಿರುವ, ನಾಗರಾಜ್ ಗೌಡ ನಿರ್ದೇಶನದ ‘ಡಿಸೆಂಬರ್ 24’ ಈ ವಾರ ರಿಲೀಸ್ ಆಗುತ್ತಿದೆ. ರಘು ಶೆಟ್ಟಿ ಅವರೇ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ರಂಗಿನ ರಾಟೆ
ರಾಜೀವ್ ರಾಥೋಡ್, ಭವ್ಯಾ ಆರ್ಆರ್, ದುನಿಯಾ ರಶ್ಮಿ ಅಭಿನಯದ ‘ರಂಗಿನ ರಾಟೆ’ ಈ ವಾರ ಸ್ಪರ್ಧೆಗೆ ಇಳಿದಿದೆ. ಆರುಮುಗಂ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
‘ಲಾಂಗ್ ಡ್ರೈವ್’
‘ಲಾಂಗ್ ಡ್ರೈವ್’ ಸಿನಿಮಾ ಶುಕ್ರವಾರ ರಿಲೀಸ್ ಆಗುತ್ತಿದೆ. ಸುಪ್ರಿತಾ ಸತ್ಯನಾರಾಯಣ್, ಅರ್ಜುನ್ ಯೋಗಿಶ್ ರಾಜ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ರಾಜು ಜಿ. ಅವರು ನಿರ್ದೇಶನ ಮಾಡಿದ್ದಾರೆ.
ಬೆಂಗಳೂರು 69
ಬೆಂಗಳೂರು 69’ ಸಿನಿಮಾದಲ್ಲಿ ಅನಿತಾ ಭಟ್, ಶಫಿ ಮೊದಲಾದವರು ನಟಿಸಿದ್ದಾರೆ. ಕ್ರಾಂತಿ ಚೈತನ್ಯ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಉತ್ತಮರು
ಪ್ರತಾಪ್ ನಾರಾಯಣ್, ರಂಗಾಯಣ ರಘು, ಬಾಲಾ ರಾಜ್ವಾಡಿ, ಕಡ್ಡಿಪುಡಿ ಚಂದ್ರು ಮೊದಲಾದವರು ‘ಉತ್ತಮರು’ ಸಿನಿಮಾದಲ್ಲಿ ನಟಿಸಿದ್ದಾರೆ. ರೋಹಿತ್ ಶ್ರೀನಿವಾಸ್ ನಿರ್ದೇಶನ ಚಿತ್ರಕ್ಕಿದೆ.
ಒಂದಾನೊಂದು ಕಾಲದಲ್ಲಿ
ಶೋಭ್ರಾಜ್, ಸಂಗೀತಾ ಅನಿಲ್ ಹಾಗೂ ಮೊದಲಾದವರು ‘ಒಂದಾನೊಂದು ಕಾಲದಲ್ಲಿ’ ಚಿತ್ರದಲ್ಲಿ ನಟಿಸಿದ್ದಾರೆ.
‘ಲೈಫು ಇಷ್ಟೇನೆ’
ಪವನ್ ಕುಮಾರ್ ನಿರ್ದೇಶನದ ದಿಗಂತ್ ನಟನೆಯ ಹಿಟ್ ಚಿತ್ರ ‘ಲೈಫು ಇಷ್ಟೇನೆ’ ರೀ ರಿಲೀಸ್ ಆಗುತ್ತಿದೆ.