Hubli News: ಹುಬ್ಬಳ್ಳಿ: ಯಾರೇ ದೂರು ನೀಡಿದರು ಕಂಪ್ಲೀಟ್ ತೆಗೆದುಕೊಂಡು ತನಿಖೆ ನಡೆಸುತ್ತೇವೆ. ಅದನ್ನೇ ದ್ವೇಷದ ರಾಜಕಾರಣ ಅಂದ್ರೇ ಹೇಗೆ..? ನಾವು ಎಲ್ಲೂ ದ್ವೇಷದ ರಾಜಕಾರಣ ಮಾಡುತ್ತಿಲ್ಲ ಎಂದು ಗೃಹಸಚಿವ ಪರಮೇಶ್ವರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಜಿ.ಪರಮೇಶ್ವರ್, ಬಿಜೆಪಿ ಜೆಡಿಎಸ್‌ನವರೇ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಒಂದು ವಿಚಾರವಾಗಿ ದೂರು ನೀಡಿದ ಮೇಲೆ ತನಿಖಾ ವರದಿಗೆ ಕಾಯಬೇಕು. ಅದೂ ಸರಿಯಾದ ನಡೆ, ಅವರು ಅದನ್ನು ಬಿಟ್ಟು ರಾಜಕಾರಣ ಮಾಡುತ್ತಿದ್ದಾರೆ ಎಂದು ಪರಮೇಶ್ವರ್ ಆರೋಪಿಸಿದ್ದಾರೆ.
ಸಚಿವ ಸತೋಶ ಜಾರಕಿಹೊಳಿ ದೆಹಲಿ ಪ್ರಯಾಣ ವಿಚಾರದ ಬಗ್ಗೆ ಮಾತನಾಡಿದ ಪರಮೇಶ್ವರ್, ಅವರು ಅವರ ಮಗಳು ಎಂಪಿ ಕ್ವಾಟರ್ಸ್ ವಿಚಾರಕ್ಕೆ ದೆಹಲಿಗೆ ಹೋಗಿದ್ದಾರೆ. ಅದರಲ್ಲೇನೂ ವಿಶೇಷತೆ ಇಲ್ಲ. ದೆಹಲಿಗೆ ಹೋದಾಗ ಎಐಸಿಸಿ ಅಧ್ಯಕ್ಷರು ಸೇರಿ ಪ್ರಮುಖ ಭೇಟಿ ಆಗುವುದು ರೂಡಿ. ಮೊನ್ನೆ ನಮ್ಮ ಪಕ್ಷದ ಹಿರಿಯರಾದ ಮಲಿಕಾರ್ಜುನ್ ಖರ್ಗೆಯವರು ಚುನಾವಣಾ ಪ್ರಚಾರದಲ್ಲಿ ಅಸ್ವಸ್ತರಾಗಿದ್ದರು. ಹಾಗಾಗಿ ಅವರ ಭೇಟಿ ಮಾಡಿ ಆರೋಗ್ಯ ವಿಚಾರಿಸಲು ತೆರಳಿದ್ದಾರೆ ಅಷ್ಟೇ ಎಂದು ಪರಮೇಶ್ವರ್ ಹೇಳಿದ್ದಾರೆ.
ಜೆಡಿಎಸ್ ಹಿರೊಯ ನಾಯಕ ಜಿಟಿ ದೇವೆಗೌಡ ಸಿಎಂ ಸಿದ್ದರಾಮಯ್ಯಪರ ಮೈಸೂರಿನಲ್ಲಿ ಬ್ಯಾಟಿಂಗ್ ವಿಚಾರದ ಬಗ್ಗೆ ಮಾತನಾಡಿದ ಜಿ.ಪರಮೇಶ್ವರ್, ಅವರು ಜನಪ್ರತಿನಿಧಿಗಳ ಮೇಲೆ ಎಫ್ ಐ ಅರ್ ಆದ್ದಾಗ ರಾಜೀನಾಮೆ ನೀಡುವುದ್ದಾರೆ ಎಲ್ಲರು ನೀಡಬೇಕಾಗುತ್ತೆ ಅಂದಿದ್ದಾರೆ. ಆ ಮಾತು ಜಿಟಿ ದೇವೇಗೌಡರು ಹೇಳಿದ್ದಕ್ಕೆ ಕಾಂಗ್ರೆಸ್ ಬರ್ತಾರೆ ಅನ್ನೋದು ಸರಿಯಲ್ಲ. ಅವರು ಕಾಂಗ್ರೆಸ್ ಬರ್ತಾರೆ ಅನ್ನೋ ವಿಚಾರ ನನಗೆ ಗೊತ್ತಿಲ್ಲ ಎಂದು ಪರಮೇಶ್ವರ್ ಹೇಳಿದರು.
ಜಾತಿಗಣತಿ ಜಾರಿ ವಿಚಾರದ ಬಗ್ಗೆ ಮಾತನಾಡಿದ ಜಿ.ಪರಮೇಶ್ವರ್, ಜಾತಿಗಣತಿ ಜಾರಿ ವಿಚಾರವನ್ನು ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡುತ್ತೇವೆ. ಸಿಎಂ ಅವರು ಕೂಡಾ ಕ್ಯಾಬಿನೆಟ್ ಗೆ ತಂದು ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಕ್ಯಾಬಿನೆಟ್ ಗೆ ಬಂದ ಮೇಲೆ ಏನ್ ತೀರ್ಮಾಣ ಅಗುತ್ತೆ ನೋಡೋಣ. ಕಂಪ್ಲೀಟ್ ಚರ್ಚೆ ಬಳಿಕ ಸರ್ಕಾರ ಅಂತಿಮ ತೀರ್ಮಾಣ ಕೈಗೊಳ್ಳತ್ತದೆ.
ಮುಡಾ ವಿಚಾರ ಮುಂದಿಟ್ಟುಕೊಂಡು ಬಿಜೆಪಿಯಿಂದ ಎರಡನೇ ಸುತ್ತಿನ ಹೋರಾಟಕ್ಲೆ ಸಜ್ಜಾಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಪ್ರತಿ ಪಕ್ಷಗಳು ಆಡಳಿತ ಪಕ್ಷಗಳಿಗೆ ಸಲಹೆ ಸೂಚನೆ ನೀಡಬೇಕು. ಅದೂ ಅವರ ಕರ್ತವ್ಯ ಕೂಡಾ ಆಗಿದೆ. ಸರ್ಕಾರ ತಪ್ಪು ದಾರಿಗೆ ಹೋಗುತ್ತಿದ್ದಾಗ ಎಚ್ಚರಿಸುವ ಕೆಲಸ ಪ್ರತಿಪಕ್ಷಗಳದ್ದು. ಎಲ್ಲವನ್ನೂ ಮೀರಿ ಪ್ರತಿಪಕ್ಷಗಳು ರಾಜಕಾರಣ ಮಾಡುತ್ತಿದ್ದಾರೆ. ಮುಡಾ ಹಗರಣ ವಿಚಾರದಲ್ಲಿ ನ್ಯಾಯಾಲಯದ ಅದೇಶ ಮೇರೆಗೆ ತನಿಖೆ ನಡೆಯಿತ್ತಿದೆ. ಇದರ ಜತೆಗೆ ಇಡಿ ಕೂಡಾ ನೋಟಿಸ್ ನೀಡಿ ವಿಚಾರಣೆ ಮಾಡುತ್ತಿದೆ. ಇದನ್ನು ಮೀರಿ ಪ್ರತಿಪಕ್ಷಗಳು ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನಮ್ಮಗೂ ಕೂಡಾ ರಾಜಕೀಯ ಗೊತ್ತಿದೆ, ನಾವು ರಾಜಕಾರಣ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ಪ್ರತಿಪಕ್ಷಗಳಿಂದ ರಾಜಕಾರಣ ಕಲಿಯಬೇಕಿಲ್ಲ. ಪ್ರಧಾನಿಗಳು ಚುನಾವಣಾ ಭಾಷಣದಲ್ಲಿ ಮುಡಾ ವಿಚಾರ ಪ್ರಸ್ತಾಪ ಮಾಡಿರುವುದು ರಾಜಲಾರಣ ಅಲ್ವಾ. ಪ್ರತಿಪಕ್ಷಗಳ ನಡೆಗೆ ಸರ್ಕಾರ ಪ್ರತಿಯಾಗಿಉತ್ತರ ನೀಡಲು ಶಕ್ತವಾಗಿದೆ, ಅದನ್ನುಮಾಡುತ್ತೇವೆ ಎಂದಿದ್ದಾರೆ.
ನಾನು ವಿರೋಧ ಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ ಸಿಎಂ ರಾಜೀನಾಮೆ ನೀಡ್ತಾರೋ ಎಂಬ ಆರ್ ಅಶೋಕ ಸವಾಲ ವಿಚಾರದ ಬಗ್ಗೆ ಮಾತನಾಡಿದ ಪರಮೇಶ್ವರ್, ಮೊದಲು ಆರ್ ಆಶೋಕ ಅವರು ವಿರೋಧ ಒಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಆ ನಂತರ ಸಿಎಂ ರಾಜೀನಾಮೆ ವಿಚಾರ ಬರುತ್ತೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಪಾಕಿಸ್ತಾನ ಮೂಲದ ನೆಲೆಯುರಿರುವ ಬಗ್ಗೆ ಮಾತನಾಡಿರುವ ಪರಮೇಶ್ವರ್, ಕೇಂದ್ರ ಸರ್ಕಾರ ಬಳಿ ರಾವ್ ಇದೆ, ಸಿಬಿಐ ಇದೆ. ಸೆಂಟ್ರಲ್ ಏಜೆನ್ಸಿಯವರು ಈ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಪಾಕಿಸ್ತಾನದಿಂದ ಇವರು ಬೆಂಗಳೂರಿಗೆ ಹೇಗೆ ಬಂದ್ರೂ. ಇಲ್ಲಿಗೆ ಬಂದು ಪಾಸ್‌ಪೋರ್ಟ್ ಮಾಡ್ಕೊಳ್ಳವರೆಗೆ ಹೋಗಿದ್ದಾರೆ ಅಂದರೆ ಇದರಲ್ಲಿ ಸೆಂಟ್ರಲ್ ಇಂಟಲಿಜೆನ್ಸ್ ಫೆಲ್ಯೂವರ್ ಆಗಿದೆ. ನಮ್ಮ ಇಲಾಖೆಯ ಪೊಲೀಸರಿಗೆ ಮಾಹಿತಿ ಸಿಕ್ಕ ತಕ್ಷಣ ಅವರನ್ನು ಬಂಧಿಸಿದ್ದಾರೆ. ಇದರಲ್ಲಿ ಕರ್ನಾಟಕ ಪೊಲೀಸ್ ದಿಟ್ಟ ಹೆಜ್ಜೆ ಇಟ್ಟಿದೆ. ಇನ್ನೂ ಹಲವರಿರುವ ಮಾಹಿತಿ ಇದೆ ಹುಡುಕುತ್ತೇವೆ ಎಂದು ಹೇಳಿದ್ದಾರೆ.