Hubli News: ಹುಬ್ಬಳ್ಳಿ: ದೇವರ ವಿಗ್ರಹದ ಮೂರ್ತಿಯನ್ನು ಭಗ್ನಗೊಳಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಇಲ್ಲಿನ ದೇಶಪಾಂಡೆ ನಗರದಲ್ಲಿ ಈ ಘಟನೆ ನಡೆದಿದ್ದು, ಅಪರ್ಣಾ ಅಪಾರ್ಟ್ಮೆಂಟ್ ಹತ್ತಿರದ ದತ್ತಾತ್ರೇಯ ದೇವಸ್ಥಾನದಲ್ಲಿನ ದತ್ತಾತ್ರೇಯ ದೇವರ ವಿಗ್ರಹದ ನಾಲ್ಕು ಕೈಗಳನ್ನು ಮುರಿದು ವಿರೂಪಗೊಳಿಸಿದ್ದಾರೆ.
ಇನ್ನು ಸುಮಾರು 20 ವರ್ಷದ ಹಿಂದಿನ ಇತಿಹಾಸ ಹೊಂದಿರುವ ದೇವಸ್ಥಾನ ಇದಾಗಿದೆ. ಕಳೆದ ಶನಿವಾರ ರಾತ್ರಿ ನವರಾತ್ರಿ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ದಾಂಡಿಯಾ ನೃತ್ಯ ಮುಗಿಸಿದ್ದಾರೆ. ಬೆಳಿಗ್ಗೆ ದೇವಸ್ಥಾನಕ್ಕೆ ಬಂದು ನೋಡಿದಾಗ ದೇವರ ಮೂರ್ತಿ ಭಗ್ನಗೊಂಡಿರುವುದು ಬೆಳಕಿಗೆ ಬಂದಿದೆ.
ಸದ್ಯ ಸ್ಥಳದಲ್ಲಿ ಉದಿಗ್ನ ವಾತಾವರಣ ನಿರ್ಮಾಣವಾಗಿದ್ದು, ದೇವರ ಮೂರ್ತಿ ವಿರೂಪಗೊಳಿಸಿದ ದುರ್ಷರ್ಮಿಗಳನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.