Thursday, December 26, 2024

Latest Posts

ದೇವರ ಮೂರ್ತಿ ಭಗ್ನ ಮಾಡುವವರ ಕೈ ಕತ್ತರಿಸಬೇಕು: ಪ್ರಮೋದ್ ಮುತಾಲಿಕ್

- Advertisement -

Dharwad News: ಧಾರವಾಡ: ಹುಬ್ಬಳ್ಳಿಯಲ್ಲಿ ದತ್ತಾತ್ರೇಯ ಮೂರ್ತಿಯನ್ನು ಭಗ್ನಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ, ಧಾರವಾಡದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ್ದಾರೆ.

ರಾಕ್ಷಸಿ ಸ್ವರೂಪ ಇದು ಅಮಾನವೀಯ. ದತ್ತಾತ್ರೇಯ ಶಾಪ ಕೊಡ್ತಾನೆ, ಅವರು ಸರ್ವ ನಾಶ ಆಗುತ್ತಾರೆ. ಕೂಡಲೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಮಿಷನರ್ ಕ್ರಮ ಕೈಗೊಳ್ಳದಿದ್ದರೆ ನಾವು ತೆಗೆದುಕೊಳ್ಳುತ್ತೇವೆ. ಅವರು ಯಾರೇ ಇರಲಿ ಅವರ ಕೈ ಕತ್ತರಿಸಬೇಕು. ನಮ್ಮ ದೇವರ ಮೂರ್ತಿ ಕಟ್ ಮಾಡುವವರ ವಿರುದ್ಧ ಕ್ರಮ ಆಗಲೇಬೇಕು ಎಂದು ಮುತಾಲಿಕ್ ಒತ್ತಾಯಿಸಿದ್ದಾರೆ.

ಎರಡನೇ ತಾರೀಖಿನಿಂದ ರಾಜ್ಯದಂತ ಶಾಲೆಗಳಿಗೆ ರಜೆ ಘೋಷಣೆ ಆಗಿದೆ. ಆದ್ರೆ ಕ್ರಿಶ್ಚಿಯನ್ ಶಾಲೆಗಳು ಅವುಗಳನ್ನ ಉಲ್ಲಂಘನೆ ಮಾಡಿದೆ. ಇಡೀ ರಾಜ್ಯದಲ್ಲಿ ಎಲ್ಲ ಕ್ರಿಶ್ಚಿಯನ್ ನಡೆಸುವ ಶಾಲೆ ಆರಂಭವಾಗಿವೆ. ಪರೀಕ್ಷೆಗಳನ್ನು ಮಾಡುತ್ತಿದ್ದಾರೆ, ವ್ಯವಸ್ಥಿತವಾಗಿ ಹಿಂದೂ ಸಂಸ್ಕೃತಿಯನ್ನ ಅಪಮಾನ ಮಾಡುವ ಪ್ರಕ್ರಿಯೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದ್ದಾರೆ. ಅವರು, ಶಾಲೆಗಳು, ಆಸ್ಪತ್ರೆಗಳು, ವೃದ್ಧಾಶ್ರಮ, ಅನಾಥಾಶ್ರಮ ಸೇವಾ ಮುಖವಾಡ ಇಟ್ಟುಕೊಂಡು ಮತಾಂತರ ಸೆಂಟರ್ ಗಳಾಗಿವೆ. ಇದೊಂದು ಮುಖವಾಡ ಅಷ್ಟೇ.

ರಾಷ್ಟ್ರೀಯತೆ ಹಾಗೂ ಸಂಪ್ರದಾಯಗಳನ್ನು ಕಡೆಗಣಿಸುತ್ತಾ ಬಂದಿರುವ ಕ್ರಿಶ್ಚಿಯನ್ ಸಮುದಾಯ. ರಾಷ್ಟ್ರಗೀತೆಗೆ ಗೌರವ ಕೊಡಲ್ಲ, ಅಂಬೇಡ್ಕರ್ ಹಾಗೂ ಗಾಂಧಿ ಅವರ ಪೋಟೋ ಇಡುವುದಿಲ್ಲ. ಸ್ವಾತಂತ್ರೋತ್ಸವ ಸೇರಿ ಬೇರೆ ಬೇರೆ ಹಬ್ಬಗಳನ್ನು ಸಹ ಆಚರಣೆ ಮಾಡಲ್ಲ. ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಹಿಂದೂ ಸಂಸ್ಕೃತಿಗೆ ಆಘಾತ ತರುವ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಬಳೆ ಹಾಕೋ ಹಂಗಿಲ್ಲ, ಕುಂಕುಮ ಇಡುವ ಹಾಗಿಲ್ಲ, ಹೂ ಮುಡಿಯುವ ಹಾಗಿಲ್ಲ. ಕಾಲಲ್ಲಿ ಗೆಜ್ಜೆ ಹಾಕಲು ಬಿಡಲ್ಲ, ಇದು ನಮ್ಮ ಸಂಪ್ರದಾಯ. ಶಾಸ್ತ್ರ ಮತ್ತು ವಿಜ್ಞಾನ ಎರಡು ಇದೆ ಅದರಲ್ಲಿ. ಅದು ಶೋ,ಫ್ಯಾಶನ್ ಅಲ್ಲ, ಅದು ಸಾವಿರಾರು ವರ್ಷದ ಪದ್ಧತಿ. ಅದನ್ನ ಕ್ರಿಶ್ಚಿಯನ್ನರು ವ್ಯವಸ್ಥಿತವಾಗಿ ಅಳಿಸಿ ಹಾಕುವ ಪ್ರಯತ್ನ ನಡೆಯುತ್ತಿದೆ. ದಸರಾ ಹಬ್ಬ ಈಗ ಇದೆ, ಮಕ್ಕಳಿಗೆ ದೇವಿಯ ಪೂಜೆ ಪುನಸ್ಕಾರ ಮಾಡುವ ಸಂಸ್ಕೃತಿಯನ್ನೇ ನಾಶ ಮಾಡಿ. ಇವರು ಶಾಲೆಗಳನ್ನ ನಡೆಸುತ್ತಿದ್ದಾರೆ ಎಂದು ಮುತಾಲಿಕ್ ಆರೋಪಿಸಿದ್ದಾರೆ.

ಧಾರವಾಡದ ಬಾಶಲ್ ಮಿಶನ್ ಶಾಲೆ ನಡೆಯುತ್ತಿದೆ. ಕ್ರಿಶ್ಚಿಯನ್ನರು ಎಲ್ಲರೂ ಶಾಲೆ ನಡೆಸುತ್ತಿದ್ದಾರೆ. ಮಕ್ಕಳ ಮೇಲೆ ಒತ್ತಡವನ್ನು ತರುತ್ತಿದ್ದಾರೆ. ಕರ್ನಾಟಕದ ಆಜ್ಞೆಯನ್ನು ಉಲ್ಲಂಘನೆ ಮಾಡಿದ್ದಾರೆ. ನಾನು ಇದನ್ನು ಖಂಡಿಸುತ್ತೇನೆ, ವಿರೋಧಿಸುತ್ತೇನೆ. ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ. ಶಾಲೆ ನಡೆಸುವವರ ಮಾನ್ಯತೆ ರದ್ದು ಮಾಡಬೇಕು. ಅನುದಾನ ವಾಪಸ್ ಪಡೆಯಬೇಕು. ಬೇಕಂತಲೇ ಈ ರೀತಿಯ ಶಾಲೆ ಆರಂಭಿಸುವವರನ್ನ ಬಂಧನ ಮಾಡಬೇಕೆಂದು ನನ್ನ ಆಗ್ರಹ ಎಂದ ಮುತಾಲಿಕ್,  ಧಾರವಾಡದ ಬಾಶೆಲ್ ಮಿಶನ್ ಶಾಲೆಗೆ ತೆರಳಿ ಪ್ರಿನ್ಸಿಪಲ್ ಅವರ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ.

ಇಸ್ರೇಲ್ ದಾಳಿ ವಿಚಾರದ ಬಗ್ಗೆ ಮಾತನಾಡಿರುವ ಮುತಾಲಿಕ್, ಭಯೋತ್ಪಾದನೆ ವಿರುದ್ಧ ಇಸ್ರೇಲ್ ಮಾದರಿ ಭಾರತಕ್ಕೆ ಅವಶ್ಯಕತೆ ಇದೆ. ವಿ ಸಪೋರ್ಟ್ ಇಸ್ರೇಲ್. ನಾವು ಇಸ್ರೇಲ್ ನ್ನು ಬೆಂಬಲಿಸುತ್ತೇವೆ. ದೇಶಭಕ್ತಿಯನ್ನು ನಾವು ಇವತ್ತು ಕಲಿಯಬೇಕಿದೆ. ಸಂಸಾರ ಭಕ್ತಿ, ಅಧಿಕಾರ ಭಕ್ತಿ ಅಷ್ಟೇ ಅಲ್ಲ ದೇಶಭಕ್ತಿ ಅವರಿಂದ ಕಲಿಯಬೇಕು ನಾವು. ಇಡೀ ದೇಶದ ನೂರು ಕೋಟಿ ಹಿಂದೂಗಳು ಇಸ್ರೇಲ್ ಬೆಂಬಲಿಸಬೇಕು. ಭಯಂಕರವಾದ ಬಾಂಬ್, ಪಿಸ್ತೂಲ್ ಅಷ್ಟೇ ಅಲ್ಲ. ಲವ್ ಜಿಹಾದ್ ಸಹ ಭಯೋತ್ಪಾದನೆ. ವ್ಯಾಪಾರ ಜಿಹಾದ್, ಲ್ಯಾಂಡ್ ಜಿಹಾದ್ ಭಯೋತ್ಪಾದನೆ. ಅನೇಕ ಭಯೋತ್ಪಾದನೆ ಇಲ್ಲಿ ನಡೆಯುತ್ತಿದೆ. ಜನಸಂಖ್ಯೆ ಜಾಸ್ತಿ ಮಾಡೋದು, ವಕ್ಫ್ ಬೋರ್ಡ್ ಸಹ ಭಯೋತ್ಪಾದನೆ ಇದು. ಇದಕ್ಕೆ ಉತ್ತರವೇ ಇಸ್ರೇಲ್. ಇಸ್ರೇಲ್ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ. ಅವರಿಗೆ ಎಲ್ಲ ರೀತಿಯ ಸಪೋರ್ಟ್ ಸಿಕ್ಕರೆ ಮಾತ್ರ ನಮ್ಮ ದೇಶ ಉಳಿಯುತ್ತೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

- Advertisement -

Latest Posts

Don't Miss