Business News: ಭಾರತದಲ್ಲಿ ಟಾಟಾ ಕಂಪನಿಗೆ ಸೇರಿದ ಅಥವಾ ಟಾಟಾ ಬ್ರ್ಯಾಂಡ್‌ನ ಇಂಥ ವಸ್ತು ಇಲ್ಲ ಎಂದಿಲ್ಲ. ಉಕ್ಕಿನಿಂದ ಹಿಡಿದು ಉಪ್ಪಿನವರೆಗೂ ಟಾಟಾ ಪ್ರಾಡಕ್ಟ್‌ಗಳಿದೆ. ರತನ್ ಟಾಟಾ ಮನಸ್ಸು ಮಾಡಿದರೆ, ಇಂದಿನವರೆಗೂ ಅಂದ್ರೆ ಅವರ ಮರಣದವರೆಗೂ ಪ್ರಪಂಚದ ಶ್ರೀಮಂತ ಉದ್ಯಮಿ ಎನ್ನಿಸಿಕೊಳ್ಳಬಹುದಿತ್ತು. ಆದ್ರೆ ರತನ್ ಟಾಟಾ ಹೆಸರು ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲೇ ಇಲ್ಲ. ಹಾಗಾದ್ರೆ ವಾಣಿಜ್ಯ ಸಾಮ್ರಾಜ್ಯದ ಅಧಿಪತಿಯಾಗಿದ್ದರೂ, ರತನ್ ಟಾಟಾ ಹೆಸರು ಶ್ರೀಮಂತರ ಪಟ್ಟಿಯಲ್ಲಿಲ್ಲ ಅಂತಾ ತಿಳಿಯೋಣ ಬನ್ನಿ..
ರತನ್ ಟಾಟಾ ಬರೀ ಕಂಪನಿ ನಡೆಸಿ ದುಡ್ಡು ಮಾಡಿದ್ದಷ್ಟೇ ಅಲ್ಲ. ಚಾರಿಟಿ ನಡೆಸಿ, ಅದರಿಂದ ಹಲವು ಆಸ್ಪತ್ರೆ, ಶಿಕ್ಷಣ ಸಂಸ್ಥೆ, ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸಹಾಯ ಮಾಡುತ್ತಿದ್ದರು. ಅವರು ದುಡಿದ ದುಡ್ಡಿನಲ್ಲಿ ಕೆಲವೇ ಕೆಲವು ಭಾಗಗಳನ್ನು ತಾವಿಟ್ಟುಕೊಂಡು, ಹೆಚ್ಚಿನ ಭಾಗವನ್ನು ದಾನಕ್ಕೆ ಮೀಸಲಿಡುತ್ತಿದ್ದರು. ಹೀಗಾಗಿಯೇ ರತನ್ ಟಾಟಾ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಇಲ್ಲ.
ಮುಖೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಪ್ರಸಿದ್ಧಿ ಪಡೆದಿರಬಹುದು. ಆದರೆ ಅವರ ಬಳಿ ಬರೀ 6 ಕಂಪನಿಗಳಿದೆ. ಆದರೆ ಅತ್ಯಂತ ಸರಳ ಜೀವನ ಜೀವಿಸುತ್ತಿದ್ದ ರತನ್ ಟಾಟಾ 135ಕ್ಕೂ ಹೆಚ್ಚು ಕಂಪನಿಗಳ ಮಾಲೀಕರಾಗಿದ್ದರು. ಸ್ಟೀಲ್, ಕೆಮಿಕಲ್, ಐಟಿ, ಆಟೋ ಮೊಬೈಲ್ ಸೇರಿ, ಸಣ್ಣ ಕಂಪನಿಗಳು ಕೂಡ ಇದರಲ್ಲಿ ಸೇರಿದೆ.
ಬಲಗೈಯಲ್ಲಿ ಮಾಡಿದ್ದು ಎಡಗೈಗೆ ಗೊತ್ತಾಗಬಾರದು ಅನ್ನೋ ರೀತಿ ಸರಳ ವ್ಯಕ್ತಿತ್ವ ಹೊಂದಿರುವ ರತನ್ ಟಾಟಾ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಸಮಾಜಸೇವೆ, ಶ್ರೀಮಂತಿಕೆ ಇದ್ದರೂ ಸರಳತೆಯ ಜೀವನ ನಮ್ಮೆಲ್ಲರಿಗೂ ಮಾದರಿಯಾಗಿದೆ. ಅವರ ಈ ಸ್ವಭಾವವೇ ರತನ್ ಟಾಟಾ ಸದಾಕಾಲ ಎಲ್ಲರ ನೆನಪಿನಲ್ಲಿ ಚಿರವಾಗಿ ಉಳಿಯುವಂತೆ ಮಾಡುತ್ತದೆ.