ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಲು ಹೋಗಿ ಯಡವಟ್ಟು ಮಾಡಿಕೊಂಡ ಪೇಟಿಎಂ ಸಿಇಓ

Business: ಮೊನ್ನೆ ತಾನೇ ರತನ್ ಟಾಟಾ ನಿಧನರಾಗಿದ್ದಾರೆ. ಅವರು ಶ್ರೀಮಂತ ವಾಣಿಜ್ಯೋದ್ಯಮಿ, ಸೆಲೆಬ್ರಿಟಿಯಾಗಿದ್ದ ಕಾರಣ, ಗಣ್ಯಾತಿಗಣ್ಯರು, ಸಿನಿಮಾ ಸೆಲೆಬ್ರಿಟಿಗಳು, ರಾಜಕೀಯ ವ್ಯಕ್ತಿಗಳು, ಉದ್ಯಮಿಗಳೆಲ್ಲರೂ ಅವರ ನಿಧನಕ್ಕೆ ತಮ್ಮದೇ ಆದ ರೀತಿಯಲ್ಲಿ ಸಂತಾಪ ಸೂಚಿಸಿದ್ದಾರೆ.

ಆದರೆ ಪೇಟಿಎಂ ಸಿಇಓ ಶೇಖರ್ ಶರ್ಮಾ, ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಲು ಹೋಗಿ, ಯಡವಟ್ಟು ಮಾಡಿಕೊಂಡಿದ್ದಾರೆ. ಇವರ ಯಡವಟ್ಟಿಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದು, ಇದೆಂತ ರೀತಿಯ ಸಂತಾಪವೆಂದು ಬೈದಿದ್ದಾರೆ.

ಅಂದಹಾಗೆ ಶರ್ಮಾ ಸಂತಾಪ ಸೂಚಿಸಿದ ರೀತಿ ಹೀಗಿತ್ತು. ಈ ಶ್ರೇಷ್ಠ ವ್ಯಕ್ತಿ ಪ್ರತೀ ತಲೆ ಮಾರಿಗೂ ಸ್ಪೂರ್ತಿಯಾಗಿದ್ದಾರೆ. ಮುಂದಿನ ತಲೆಮಾರಿನ ಉದ್ಯಮಿಗಳಿಗೆ ಇಂಥ ಸರಳ ಉದ್ಯಮಿಯ ಜೊತೆ ಸಂವಾದ ನಡೆಸುವ ಅವಕಾಶ ಸಿಗುವುದಿಲ್ಲ. ನಿಮಗೆ ನಮನಗಳು ಸರ್. ಓಕೆ ಟಾಟಾ ಬೈಬೈ ಎಂದು ಸಂತಾಪ ಸೂಚಿಸಿದ್ದಾರೆ.

ಎಲ್ಲಾ ಓಕೆ. ಆದರೆ ಓಕೆ ಟಾಟಾ ಬೈಬೈ ಅಂದರೇನು ಎಂದು ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ. ಅವರ ಹೆಸರು ಟಾಟಾ ಎಂದ ಮಾತ್ರಕ್ಕೆ ಈ ರೀತಿ ಎಲ್ಲ ಸಂತಾಪ ಸೂಚಿಸುತ್ತಾರೆಯೇ. ಇವರೊಬ್ಬ ಉದ್ಯಮಿಯಾಗಿ, ಈ ರೀತಿಯಾಗಿ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಜನ ಬೈದಿದ್ದಾರೆ. ಬಳಿಕ ಟ್ವೀಟ್ ಎಡಿಟ್ ಮಾಡಿರುವ ಶರ್ಮಾ, ಓಕೆ ಟಾಟಾ ಬೈಬೈ ತೆಗೆದು ಹಾಕಿ, ನೀವು ನಮ್ಮ ಹೃದಯದಲ್ಲಿ ಸದಾ ಇರುತ್ತೀರಿ ಎಂದಿದ್ದಾರೆ.

About The Author