Thursday, October 17, 2024

Latest Posts

ಜೀವ ಬೆದರಿಕೆ ಹಿನ್ನೆಲೆ: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ವೈ ಪ್ಲಸ್ ಸೆಕ್ಯೂರಿಟಿ

- Advertisement -

Bollywood News: ನಟ ಸಲ್ಮಾನ್ ಖಾನ್ ಆಪ್ತ ಬಾಬಾ ಸಿದ್ಧಿಕಿ ಹತ್ಯೆ ಬಳಿಕ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ವೈ ಪ್ಲಸ್ ಸೆಕ್ಯೂರಿಟಿ ನೀಡಲಾಗಿದೆ. ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ಧಿಕಿ, ಸಲ್ಮಾನ್ ಖಾನ್ ಖಾಸಾ ದೋಸ್ತ್ ಆಗಿದ್ದು, ಆತನ ಹತ್ಯೆಯಿಂದ ಮುಂಬೈ ಸಿಟಿ ದಂಗಾಗಿದೆ.

ಬಾಬಾ ಸಿದ್ಧಕಿ ಸಲ್ಮಾನ್ ಖಾನ್ ಸ್ನೇಹಿತನಾಗಿದ್ದ ಕಾರಣಕ್ಕೇ ಆತನ ಕೊಲೆ ಮಾಡಲಾಗಿದೆ ಅಂತಾ ಹೇಳಲಾಗುತ್ತಿದೆ. ಜೈಲಿನಲ್ಲಿ ಕುಳಿತಿರುವ ಲಾರೆನ್ಸ್ ಬಿಷ್ಣೋಯ್, ತನ್ನ ಗ್ಯಾಂಗ್‌ನ ಸಹಾಯದಿಂದ ಬಾಬಾ ಸಿದ್ಧಕಿ ಕೊಲೆ ಮಾಡಿಸಿದ್ದಾನೆ. ಅಲ್ಲದೇ, ಕೆಲವು ದಿನಗಳಲ್ಲಿ ಸಲ್ಮಾನ್ ಖಾನ್ ಮೇಲೆ ದಾಳಿ ನಡೆಸಲು ಸತತ ಪ್ರಯತ್ನವೂ ಆಗಿದೆ. ಕೆಲವು ಕೊಲೆ ಬೆದರಿಕೆಗಳು ಬರುತ್ತಿದೆ. ಹಾಗಾಗಿ ಸಲ್ಮಾನ್ ಖಾನ್‌ಗೆ ವೈ ಪ್ಲಸ್ ಸೆಕ್ಯೂರಿಟಿ ಒದಗಿಸಲಾಗಿದೆ.

ಎಲ್ಲ ಶಸ್ತ್ರ ವಿದ್ಯೆ ಬಲ್ಲ ಓರ್ವ ಸೆಕ್ಯೂರಿಟಿಯನ್ನು ನೇಮಿಸಲಾಗಿದ್ದು, ಸಲ್ಮಾನ್ ಖಾನ್ ನಿವಾಸದ ಸುತ್ತಮುತ್ತಲೂ ಪೊಲೀಸ್ ಬಿಗಿಬಂದೋಬಸ್ತ್ ಒದಗಿಸಲಾಗಿದೆ. ಈ ಮೊದಲು ಸಲ್ಮಾನ್‌ ಖಾನ್‌ಗೆ ಸೇರಿದ ಫಾರ್ಮ್ ಹೌಸ್‌ಗೆ ನುಗ್ಗಲು ಕೆಲ ಕಿಡಿಗೇಡಿಗಳು ಯತ್ನಿಸಿದ್ದರು. ಅಲ್ಲದೇ, ಸಲ್ಮಾನ್ ಖಾನ ಮನೆಯ ಮೇಲೆ ಗುಂಡಿನ ದಾಳಿ ಕೂಡ ನಡೆದಿತ್ತು. ಹೀಗಾಗಿ ಫಾರ್ಮ್‌ಹೌಸ್ ಮತ್ತು ಮನೆಯ ಬಳಿ ಪೊಲೀಸ್ ಬಂದೋಬಸ್ತ್ ಇಟ್ಟಿದ್ದು, ಸಲ್ಮಾನ್ ಖಾನ್ ಇನ್ನು ಕೆಲ ದಿನಗಳವರೆಗೆ ಯಾರನ್ನೂ ಭೇಟಿಯಾಗುವಂತಿಲ್ಲವೆಂದು ಹೇಳಲಾಗಿದೆ.

- Advertisement -

Latest Posts

Don't Miss