ಕುತೂಹಲ ಮೂಡಿಸಿದ ಶಿಗ್ಗಾವಿ ಉಪಚುನಾವಣೆ: ಯಾರಾಗ್ತಾರೆ ಬಿಜೆಪಿ ಅಭ್ಯರ್ಥಿ..?

Haveri News: ಹಾವೇರಿ: ಶಿಗ್ಗಾವಿ ಉಪಚುನಾವಣಾ ಕಣ ರಂಗೇರಿದ್ದು, ಬಿಜೆಪಿ ಟಿಕೇಟ್ ಯಾರಿಗೆ ಸಿಗತ್ತೆ ಅನ್ನೋ ಕುತೂಹಲ ಹೆಚ್ಚಾಗಿದೆ.

ಪುತ್ರ ಭರತ್ ಬೊಮ್ಮಾಯಿ ಕೂಡ ರಾಜಕೀಯಕ್ಕೆ ಬರಲಿ ಅನ್ನೋದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಸೆ. ಆದ್ರೆ ಈ ಚುನಾವಣೆಯಲ್ಲಿ ಮಗನಿಗೆ ಟಿಕೇಟ್ ಕೊಡಿಸುವ ವಿಚಾರದಲ್ಲಿ ಬೊಮ್ಮಾಯಿ ಗೊಂದಲಕ್ಕೆ ಸಿಲುಕಿದ್ದಾರೆ. ಈ ಉಪಚುನಾವಣೆಯಲ್ಲಿ ಮಗನಿಗೆ ಟಿಕೇಟ್ ಸಿಕ್ಕರೆ, ಯಾವ ಸಾಧಕ ಬಾಧಕಗಳು ಎದುರಾಗಬಹುದು ಅನ್ನೋ ಚಿಂತೆ ಬೊಮ್ಮಾಯಿಗೆ ಶುರುವಾದಂತಿದೆ.

ಯಾಕಂದ್ರೆ ಕಾಂಗ್ರೆಸ್ ಅಭ್ಯರ್ಥಿ ಸ್ಟ್ರಾಂಗ್ ಆಗಿದ್ರೆ, ಭರತ್ ಬೊಮ್ಮಾಯಿ ಸೊಲನ್ನಪ್ಪಬಹುದು. ಹಾಗಾಗಿ ಕಾಂಗ್ರೆಸ್ ಟಿಕೇಟ್ ಘೋಷಣೆಯಾದ ಬಳಿಕ, ಬಿಜೆಪಿ ಟಿಕೇಟ್ ಘೋಷಣೆಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಕ್ಯಾಂಡಿಡೇಟ್ ಯಾರು ಎಂದು ಗೊತ್ತಾದ ಬಳಿಕ, ಮಗನಿಗೆ ಟಿಕೇಟ್ ಬೇಕೋ ಬೇಡವೋ ಅಂತಾ ಬೊಮ್ಮಾಯಿ ನಿರ್ಧರಿಸಲಿದ್ದಾರೆ.

ಕಾಂಗ್ರೆಸ್ ನಿಂದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಹೆಸರು ಬಹುತೇಕ ಫೈನಲ್ ಆಗಿದೆ.  ಅಜ್ಜಂಪೀರ್ ಖಾದ್ರಿ ಕೈ ಅಭ್ಯರ್ಥಿಯಾದ್ರೆ ಭರತ ಬೊಮ್ಮಾಯಿ ಕಣದಿಂದ ಇಳಿಯುವ ಸಾಧ್ಯತೆ ತೀರಾ ಕಡಿಮೆ. ಯಾಕಂದ್ರೆ ಈ ಅಜ್ಜಂಪೀರ್ ಖಾದ್ರಿ, ಮೂರು ಚುನಾವಣೆಯಲ್ಲೂ ಬಸವರಾಜ್ ಬೊಮ್ಮಾಯಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದರು. ಹಾಗಾಗಿ ಅಜ್ಜಂಪೀರ್ ಬಿಟ್ಟು ಬೇರೆ ಅಭ್ಯರ್ಥಿ ಕಣಕ್ಕಿಳಿದರೆ, ಮಗನನ್ನೂ ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿ ಬಸವರಾಜ್ ಬೊಮ್ಮಾಯಿ ಇದ್ದಾರೆ.

About The Author