Saturday, October 19, 2024

Latest Posts

ಬಿಷ್ಣೋಯಿ ಸಮಾಜದವರ ಹಿನ್ನೆಲೆ ಏನು..? ಕೃಷ್ಣಮೃಗದ ಮೇಲೆ ಏಕಿಷ್ಟು ಭಕ್ತಿ.?: ಭಾಗ 2

- Advertisement -

Bollywood News: ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ ಸಲ್ಮಾನ್ ಖಾನ್ ವಿರುದ್ಧ ಏಕೆ ಲಾರೆನ್ಸ್ ಬಿಷ್ಣೋಯಿ ಅಷ್ಟು ದ್ವೇಷ ಸಾಧಿಸುತ್ತಿದ್ದಾನೆ ಅನ್ನೋ ಬಗ್ಗೆ ಹೇಳಿದ್ದೇವೆ. ಇದೀಗ ಪ್ರಾಣಿಗಳಿಗೆ ಇಷ್ಟು ಮಹತ್ವ ಕೊಡುವ ಬಿಷ್ಣೋಯಿಗಳು ಯಾರು..? ಯಾಕೆ ಇವರಿಗೆ ಕೃಷ್ಣಮೃಗವನ್ನು ಕಂಡರೆ ಅಷ್ಟು ಭಕ್ತಿ..? ಚಿಪ್ಕೋ ಆಂದೋಲನ ಮತ್ತು ಬಿಷ್ಣೋಯಿ ಸಮಾಜಕ್ಕೂ ಇರುವ ನಂಟೇನು ಅಂತಾ ತಿಳಿಯೋಣ.

ಚಿಪ್ಕೋ ಚಳುವಳಿ ಅಂದ್ರೆ ಅಪ್ಪಿಕೋ ಚಳುವಳಿಯ ಬಗ್ಗೆ ನಿಮಗೆ ಗೊತ್ತೇ ಇದೆ. ಮರಗಳನ್ನು ಉಳಿಸಲು ಮಾಡಿರುವ ಚಳುವಳಿ ಇದು. ಈ ಚಳುವಳಿಯಲ್ಲಿ 300ಕ್ಕೂ ಹೆಚ್ಚು ಬಿಷ್ಣೋಯಿ ಸಮಾಜದ ಮಂದಿ ತಮ್ಮ ಪ್ರಾಣ ಬಲಿ ನೀಡಿದ್ದರು. ಏಕೆಂದರೆ ಇವರು ಪ್ರಕೃತಿಯನ್ನು, ಪ್ರಾಣಿ, ಪಕ್ಷಿಯನ್ನು ಅಷ್ಟು ಪ್ರೀತಿಸುತ್ತಾರೆ. ಪ್ಲಾಸ್ಟಿಕ್ ಬಳಕೆಯಿಂದ ಪ್ರಾಣಿ, ಪಕ್ಷಿಗಳಿಗೆ ಹಾನಿಯಾಗುತ್ತದೆ. ಹಾಗಾಗಿ ಪ್ಲಾಸ್ಟಿಕ್ ಬಳಸಿ ನಿಲ್ಲಿಸಿ ಎಂದು ಇವರು ಮೊದಲೇ ಚಳುವಳಿ ಮಾಡಿದ್ದರು.

ಬಿಷ್ಣೋಯಿ ಸಮಾಜದವರು ಪ್ರಾಣಿ, ಪಕ್ಷಿಗಳನ್ನು ತಮ್ಮ ಮಕ್ಕಳಂತೆ ಸಾಕುತ್ತಾರೆ. ಇವರು ನಾನ್‌ವೆಜ್ ತಿನ್ನುವುದಿಲ್ಲ. ಮಧ್ಯಪ್ರದೇಶ್, ಉತ್ತರಪ್ರದೇಶದಲ್ಲಿ ಬಿಷ್ಣೋಯಿ ಸಮುದಾಯವದವರಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರಾಜಸ್ಥಾನದಲ್ಲಿ ಇವರು ಕಾಣಸಿಗುತ್ತಾರೆ. ನಾವು ನೀವೆಲ್ಲ ಆನೆಯನ್ನು, ವಾನರರನ್ನು ದೇವರೆಂದು ಪೂಜಿಸುತ್ತೇವೆ.

ಎಷ್ಟೋ ಕಡೆ ಆನೆ ಸತ್ತಾಗ, ವಾನರ ಸತ್ತಾರ, ಪದ್ಧತಿ ಪ್ರಕಾರವಾಗಿ ಅಂತಿಮಸಂಸ್ಕಾರ ಮಾಡಲಾಗುತ್ತದೆ. ಯಾಕಂದ್ರೆ ನಾವು ಆ ಪ್ರಾಣಿಗಳನ್ನು ದೇವರ ರೀತಿ ನೋಡುತ್ತೇವೆ. ಅದೇ ರೀತಿ ಬಿಷ್ಣೋಯ್ ಸಮುದಾಯದವರು ಕೂಡ, ಕೃಷ್ಣ ಮೃಗವನ್ನು ತಮ್ಮ ಸಮಾಜದ ದೇವರೆಂದು ಭಾವಿಸುತ್ತಾರೆ. ಹಾಗಾಗಿ ಕೃಷ್ಣಮೃಗದ ಬಗ್ಗೆ ಅವರಿಗೆ ಇಷ್ಟು ಭಕ್ತಿ.

ಇನ್ನು ಕೃಷ್ಣಮೃಗ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಲ್ಮಾನ್ ಖಾನ್‌ಗೆ 5 ವರ್ಷ ಜೈಲು ಶಿಕ್ಷೆ ಸಿಕ್ಕಿತ್ತು. ಆದರೆ, ಸಲ್ಮಾನ್ ಕೆಲ ದಿನಗಳಲ್ಲೇ ಬೇಲ್ ತೆಗೆದುಕೊಂಡು ಹೊರಗಡೆ ಬಂದ. ಇದೇ ಸಿಟ್ಟಿನಲ್ಲೇ ಲಾರೆನ್ಸ್ ಸಲ್ಮಾನ್ ವಿರುದ್ಧ ಇನ್ನಷ್ಟು ದ್ವೇಷ ಸಾಧಿಸಲು ಮುಂದಾದ. ಆದರೆ ಸಲ್ಮಾನ್ ಖಾನ ರಾಜಸ್ಥಾನದಲ್ಲಿರುವ ತಮ್ಮ ಸಮಾಜದ ದೇವಸ್ಥಾನಕ್ಕೆ ಬಂದು, ತನ್ನ ತಪ್ಪಿಗೆ ಕ್ಷಮೆ ಕೇಳಿದರೆ, ಲಾರೆನ್ಸ್ ಆತನನ್ನು ಕ್ಷಮಿಸುತ್ತೇನೆ ಎಂದಿದ್ದಾನೆ. ಆದರೆ ತಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲವೆಂದು ಸಲ್ಮಾನ್ ಖಾನ್ ಹೇಳಿದ್ದಾರೆ.

- Advertisement -

Latest Posts

Don't Miss