Thursday, November 21, 2024

Latest Posts

ಹಿಜ್ಬೊಲ್ಲಾ ಬಂಕರ್​​ನಲ್ಲಿ ನಿಧಿ – ಆಸ್ಪತ್ರೆ ಕೆಳಗೆ 4200 ಕೋಟಿ!

- Advertisement -

ಇಸ್ರೇಲ್ ಮೇಲೆ ದಾಳಿ ಮಾಡ್ತಿರೋ ಹೆಜ್ಬುಲ್ಲಾ ಉಗ್ರ ಸಂಘಟನೆಯ ಆದಾಯದ ಮೂಲ ರಿವೀಲ್ ಆಗಿದೆ.. ಉಗ್ರರು ಕೂಡ ಒಂದು ಅತಿ ದೊಡ್ಡ ಖಜಾನೆಯನ್ನೇ ತುಂಬಿಸಿದ್ದಾರೆ. ಉಗ್ರ ಕಮಾಂಡರ್ ಹಸನ್ ನಸ್ರಲ್ಲ ಇದ್ದ ಬಂಕರ್​​​​​ ಚಿನ್ನ, ಹಣದಿಂದ ತುಂಬಿ ತುಳುಕಿದೆ. ಇಂಥಾ ನಿಧಿಯಿರೋ ಬಂಕರ್ ಈಗ ಇಸ್ರೇಲ್ ಕಣ್ಣಿಗೆ ಬಿದ್ದಿದೆ.. ಇಷ್ಟಾದ್ರೂ ಇಸ್ರೇಲ್ ಮಾತ್ರ ಒಂದೇ ಒಂದು ರೂಪಾಯಿ ಮುಟ್ಟೋಕೆ ಹೋಗಿಲ್ಲ..

ನೂರಾರು, ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯನ್ನೇ ಉಗ್ರರು ತಮ್ಮ ನೆಲೆಗಳನ್ನಾಗಿ ಮಾಡಿಕೊಳ್ಳುವ ಪರಿಪಾಠ ಗಾಜಾ ಪಟ್ಟಿ ಮಾತ್ರವಲ್ಲ, ಲೆಬನಾನ್ ದೇಶದಲ್ಲೂ ಮುಂದುವರೆದಿದೆ. ಲೆಬನಾನ್ ದೇಶದ ರಾಜಧಾನಿ ಬೈರೂತ್ ನಗರದ ಅತಿ ದೊಡ್ಡ ಆಸ್ಪತ್ರೆಯೊಂದರ ನೆಲ ಮಾಳಿಗೆಯಲ್ಲಿ ಹೆಜ್ಬೊಲ್ಲಾ ಉಗ್ರ ಸಂಘಟನೆಯ ರಹಸ್ಯ ನಿಧಿ ಇರೋದನ್ನು ಇಸ್ರೇಲ್ ಪತ್ತೆ ಹಚ್ಚಿದೆ. ಇಸ್ರೇಲ್ ಭದ್ರತಾ ಪಡೆಗಳಿಗೆ ಲಭ್ಯವಾದ ಬೇಹುಗಾರಿಕಾ ಮಾಹಿತಿ ಪ್ರಕಾರ, ಆಸ್ಪತ್ರೆಯ ನೆಲ ಮಹಡಿಯಲ್ಲಿ ಹೆಜ್ಬೊಲ್ಲಾ ಉಗ್ರ ಸಂಘಟನೆ, ಕೋಟ್ಯಂತರ ಅಮೆರಿಕನ್ ಡಾಲರ್ ಹಣ ಹಾಗೂ ಚಿನ್ನವನ್ನು ಸಂಗ್ರಹಿಸಿ ಇಟ್ಟಿದೆ. ಈ ಹಣದ ಬೆಂಬಲದಿಂದಲೇ ಹೆಜ್ಬೊಲ್ಲಾ ಉಗ್ರ ಸಂಘಟನೆ ತನ್ನ ದಾಳಿಗಳನ್ನು ಸಂಘಟಿಸುತ್ತಿತ್ತು ಅನ್ನೋ ಮಾಹಿತಿ ಬಯಲಾಗಿದೆ.

ಲೆಬನಾನ್ ದೇಶದ ರಾಜಧಾನಿ ಬೈರೂತ್ ನಗರ ಸೇರಿದಂತೆ ದೇಶಾದ್ಯಂತ ಇಸ್ರೇಲ್ ವಾಯು ಪಡೆ ಏರ್ ಸ್ಟೈಕ್ ನಡೆಸುತ್ತಿದೆ. ಇದೇ ರೀತಿ ಆಸ್ಪತ್ರೆಯೊಂದನ್ನ ಗುರಿಯಾಗಿಸಿಕೊಂಡು ದಾಳಿ ನಡೀತು. ಈ ವೇಳೆ ಇಸ್ರೇಲ್ ಭದ್ರತಾ ಪಡೆಗಳಿಗೆ ಹೆಜ್ಬೊಲ್ಲಾ ಉಗ್ರ ಸಂಘಟನೆಯ ಆರ್ಥಿಕ ಮೂಲದ ಕುರಿತಾದ ನಿಖರ ಮಾಹಿತಿ ಸಿಕ್ಕಿದೆ.

ಹೆಜ್ಬೊಲ್ಲಾ ಉಗ್ರ ಸಂಘಟನೆಯ ನಾಯಕನಾಗಿದ್ದ ಹಸನ್ ನಸ್ರಲ್ಲಾ, ಆಸ್ಪತ್ರೆಯ ನೆಲ ಮಾಳಿಗೆಯಲ್ಲಿ ಕೋಟ್ಯಂತರ ಡಾಲರ್ ಹಣ ಹಾಗೂ ಚಿನ್ನವನ್ನು ಹೊಂದಿರುವ ನೆಲೆ ರೂಪಿಸಿದ್ದ. ಈ ಕುರಿತಾಗಿ ನಮಗೆ ಮಾಹಿತಿ ಇದ್ದರೂ ದಾಳಿ ನಡೆಸಿಲ್ಲ. ಏಕೆಂದರೆ ಬೈರೂತ್ ನಗರದ ಹೃದಯ ಭಾಗದಲ್ಲಿ ಇರುವ ಈ ನೆಲೆಯು ಅಲ್ ಶಹೀಲ್ ಆಸ್ಪತ್ರೆಯ ಕೆಳಗೆ ಇದೆ. ನಾವು ದಾಳಿ ನಡೆಸಿದರೆ ಆಸ್ಪತ್ರೆಯಲ್ಲಿ ಇರುವ ನೂರಾರು ರೋಗಿಗಳಿಗೆ ತೊಂದರೆ ಆಗುತ್ತದೆ ಎಂದು ಇಸ್ರೇಲ್ ಸೇನಾಧಿಕಾರಿಗಳು ಹೇಳಿದ್ದಾರೆ

ಮೂಲಗಳ ಪ್ರಕಾರ, ಆಸ್ಪತ್ರೆಯ ಕೆಳಭಾಗದಲ್ಲಿ ಇರೋ ಬಂಕರ್​​ನಲ್ಲಿ ಭಾರತೀಯ ಲೆಕ್ಕದ ಪ್ರಕಾರ ಬರೋಬ್ಬರಿ 4200 ಕೋಟಿ ರೂಪಾಯಿ ಹಣವನ್ನ ಬಚ್ಚಿಡಲಾಗಿದೆ. ಜೊತೆಯಲ್ಲೇ ಸಾಕಷ್ಟು ಚಿನ್ನವನ್ನೂ ಸಂಗ್ರಹಿಸಿ ಇಟ್ಟಿದ್ದಾರೆ. ಇದೇ ಹಣವನ್ನು ಲೆಬನಾನ್ ದೇಶದ ಪುನರ್ ನಿರ್ಮಾಣಕ್ಕೆ ಬಳಸಬಹುದು ಎಂದು ಇಸ್ರೇಲ್ ಭದ್ರತಾ ಪಡೆಗಳು ಹೇಳಿವೆ.

- Advertisement -

Latest Posts

Don't Miss